Advertisement

ತನ್ನ ಲಿಮಿಟ್ಸ್ ನಲ್ಲಿ ಸತತ ಎರಡು ಕೊಲೆ ; ಅಧೀರಗೊಂಡ PSI ಆತ್ಮಹತ್ಯೆಗೆ ಶರಣು!

07:50 PM Jul 31, 2020 | Hari Prasad |

ಹಾಸನ: ಇದೊಂದು ವಿಚಿತ್ರ ಪ್ರಕರಣ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ವ್ಯಾಪ್ತಿಯಲ್ಲಿ ಬೆನ್ನು ಬೆನ್ನಿಗೇ ನಡೆದ ಎರಡು ಕೊಲೆ ಘಟನೆಗಳಿಂದ ಅಧೀರರಾಗಿ ತಾವೇ ಆತ್ಮಹತ್ಯೆಗೆ ಶರಣಾಗಿರುವ ದುರದೃಷ್ಟಕರ ಘಟನೆ ಇದು.

Advertisement

ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ. ಇಲ್ಲಿನ ನಗರ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್ ಅವರೇ ಈ ರೀತಿಯ ದುಡುಕು ನಿರ್ಧಾರಕ್ಕೊಳಗಾಗಿ ಪ್ರಾಣ ಕಳೆದುಕೊಂಡವರಾಗಿದ್ದಾರೆ.

ತನ್ನ ಠಾಣಾ ಪರಿಮಿತಿಯಲ್ಲಿ ಎರಡೇ ದಿನಗಳ ಅಂತರಲದಲ್ಲಿ ಎರಡು ಕೊಲೆ ನಡೆದ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳು ತನ್ನನ್ನು ಕೆಲಸದಿಂದ ಅಮಾನತುಗೊಳಿಸಬದೆಂಬ ಭಯದಿಂದ ಪಿ.ಎಸ್.ಐ. ಕಿರಣ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ಜುಲೈ 29ರಂದು ಪಾರಿವಾಳ ವಿಚಾರಕ್ಕೆ ವ್ಯಕ್ತಿಯೋರ್ವನ ಕೊಲೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಈ ನಡುವೆ ಜುಲೈ 30ರಂಡು ರಾತ್ರಿ ಇಬ್ಬರು ಕುಡುಕರ ನಡುವಿನ ಗಲಾಟೆಯಲ್ಲಿ ಮೂರನೇ ವ್ಯಕ್ತಿ ಸಂಪತ್ ಎಂಬ ಯುವಕ ಕೊಲೆಯಾಗಿದ್ದ.

ಹೀಗೆ ಕಿರಣ್ ಕುಮಾರ್ ಅವರ ಠಾಣಾ ವ್ಯಾಪ್ತಿಯಲ್ಲಿ ಕೇವಲ 24 ಗಂಟೆಗಳಲ್ಲಿ ಎರಡು ಕೊಲೆ ನಡೆದ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಶುಕ್ರವಾರದಂದು ಪಿ.ಎಸ್.ಐ. ಕಿರಣ್ ಕುಮಾರ್ ಅವರು ತಮ್ಮ ಠಾಣಾ ಸಿಬ್ಬಂದಿಗಳ ಜೊತೆ ಕೊಲೆ ನಡೆದ ಸ್ಥಳಕ್ಕೆ ಮಹಜರಿಗಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತೊಪಡಿಸಿ ಅಪಹಾಸ್ಯ ಮಾಡಿದ್ದರು ಎನ್ನಲಾಗಿದೆ.

Advertisement


ಇದಲ್ಲದೆ ಚನ್ನರಾಯಪಟ್ಟಣದ ಕೆಲವು ವಾಟ್ಸ್ಯಾಪ್ ಗುಂಪಿನಲ್ಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ ಕೆಲವರು ಬಹಳ ಕೆಟ್ಟರೀತಿಯಲ್ಲಿ ಬರೆದುಕೊಂಡಿದ್ದರು ಮತ್ತು ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ನಡೆಯುತ್ತಿತ್ತು ಎನ್ನಲಾಗಿದೆ.

ಇಷ್ಟೂ ಸಾಲದೆಂಬಂತೆ, ಈ ಎರಡು ಕೊಲೆ ತನಿಖೆಗೆ ಸಂಬಂಧಿಸಿದಂತೆ ಮೈಸೂರಿನಿಂದ ಹಿರಿಯ ಅಧಿಕಾರಿಗಳ ತಂಡ ಚನ್ನರಾಯಪಟ್ಟನಕ್ಕೆ ಆಗಮಿಸುವುದರಲ್ಲಿತ್ತು. ಮತ್ತು ಆ ಹಿರಿಯ ಅಧಿಕಾರಿಗಳ ತಂಡವು ತನ್ನನ್ನ ಕರ್ತವ್ಯ ಲೋಪ ಆರೋಪದಡಿ ಕೆಲಸದಿಂದ ಅಮಾನತುಗೊಳಿಸಬಹುದು ಎಂಬ ಭಯದಿಂದ ಹೆದರಿ ಠಾಣೆಯಿಂದ ಮನೆಗೆ ಹೋದ ಪಿಎಸ್ಐ ಕಿರಣ್ ಕುಮಾರ್ ನೇಣಿಗೆ ಶರಣಾಗಿದ್ದಾರೆ.

ಪಿಎಸ್ಐ ಕಿರಣ್ ಕುಮಾರ್ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಲಾಳನಕೆರೆ ಗ್ರಾಮದವರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next