Advertisement
ಹೌದು, ಎನ್‌ಡಿಎ ಪಾಳಯದಲ್ಲಿ ಬಂಡೆದ್ದಿರುವ ಯೋಗೇಶ್ವರ್ ನನಗೆ ಎನ್‌ಡಿಎ ಟಿಕೆಟ್ ಸಿಗಲಿ ಸಿಗದೇ ಇರಲಿ ಸ್ಪರ್ಧೆಮಾಡುವುದು ಖಚಿತ ಎಂದು ಘೋಷಿಸಿದ್ದಾರೆ.
Related Articles
Advertisement
ಜೆಡಿಎಸ್ ಮುಖಂಡರ ಬಿಗಿಪಟ್ಟು: ಯೋಗೇಶ್ವರ್‌ಗೆ ಟಿಕೆಟ್ ಕೊಡಲು ಚನ್ನಪಟ್ಟಣದ ಕೆಲ ಜೆಡಿಎಸ್ ಮುಖಂಡರು ಸುತಾರಾಂ ಒಪ್ಪುತ್ತಿಲ್ಲ. ಈ ತಂಡದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಮತ್ತು ಮುಖಂಡ ಹಾಪ್‌ಕಾಮ್ಸ್ ದೇವರಾಜು ಮುಂಚೂಣಿಯಲ್ಲಿದ್ದಾರೆ. ಸ್ಥಳೀಯರಿಗೆ ಟಿಕೆಟ್ ಎಂದರೆ ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂಬ ಕಾರಣಕ್ಕೆ ನಿಖಿಲ್ ಕುಮಾರಸ್ವಾಮಿ ಹೆಸರು ಮುಂಚೂಣಿಗೆ ತಂದಿದ್ದಾರೆ. ನಿಖಿಲ್ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರಾದರೂ, ಯೋಗೇಶ್ವರ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಪಕ್ಷಕ್ಕೆ ಮುಂದೆ ಚನ್ನಪಟ್ಟಣದಲ್ಲಿ ಬಲ ಇರುವುದಿಲ್ಲ ಎಂದು ಕುಮಾರಸ್ವಾಮಿಗೆ ಮನದಟ್ಟು ಮಾಡುವಲ್ಲಿ ಈ ತಂಡ ಸಫಲಗೊಂಡಿದೆ.
ನಾಬಿಡೆ, ನೀಕೊಡೆ: ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ರಾಜಕೀಯ ಪಾಳಯದಲ್ಲಿ ನಾಬಿಡೆ, ನೀಕೊಡೆ ಎಂಬ ವಾತಾವರಣ ನಿರ್ಮಾಣಗೊಂಡಿದೆ. ಎನ್‌ಡಿಎಯಿಂದ ಟಿಕೆಟ್ ನೀಡದೇ ಇದ್ದರೂ ಸ್ವತಂತ್ರ್ಯವಾಗಿಯಾಗಲಿ, ಬೇರೆ ಯಾವುದೇ ಚಿಹ್ನೆಯಿಂದಾಗಲಿ ಸ್ಪರ್ಧೆಮಾಡುವ ಬಗ್ಗೆ ಯೋಗೇಶ್ವರ್ ತಿಳಿಸಿದ್ದಾರೆ.
ಆದರೆ, ಜೆಡಿಎಸ್ ಪಾಳಯ ಟಿಕೆಟ್ ಕೊಡುವುದಿಲ್ಲ ಎಂದು ನೇರವಾಗಿ ಹೇಳುತ್ತಿಲ್ಲ. ಯೋಗೇಶ್ವರ್ ಬಿಟ್ಟು ಹೋದ ಬಳಿಕ ಅವರಿಗೆ ಅಪವಾದ ಕಟ್ಟುವುದು ಜೆಡಿಎಸ್ ತಂತ್ರ. ಇತ್ತ ಯೋಗೇಶ್ವರ್ ಸಹ ನಾನಾಗೇ ಬಿಟ್ಟು ಹೋಗಬಾರದು ಎನ್‌ಡಿಎ ಟಿಕೆಟ್ ಇಲ್ಲ ಎಂದು ಖಚಿತ ಪಡಿಸಿದ ಬಳಿಕ ಬಿಟ್ಟು ಹೋದರೆ ಅನುಕೂಲವಾಗುತ್ತದೆ ಎಂಬುದು ಯೋಗೇಶ್ವರ್ ಲೆಕ್ಕಾಚಾರ. ಹೀಗಾಗಿ ಎರಡು ಪಾಳಯದಲ್ಲಿ ಕಾಯ್ದು ನೋಡುವ ತಂತ್ರ ಅನುಸರಿಸಲಾಗುತ್ತಿದೆ. ಯೋಗೇಶ್ವರ್ ನಿರ್ಧಾರ ಪ್ರಕಟಿಸಿದರೆ, ಇಲ್ಲ ಜೆಡಿಎಸ್ ನಿರ್ಧಾರ ಪ್ರಕಟಿಸಿದರೆ ಅಭ್ಯರ್ಥಿ ಆಯ್ಕೆ ಸುಗಮವಾಗುತ್ತದೆ.
ಕೈ ಪಾಳಯದಲ್ಲಿ ಕಾದು ನೋಡುವ ತಂತ್ರ:
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಸ್ಟ್ರಾಂಗ್ ಎಂಟ್ರಿ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಂಘಟನೆಯನ್ನು ಚುರುಕು ಗೊಳಿಸಿದ್ದಾರಾದರೂ ಅಭ್ಯರ್ಥಿ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೈ ನಾಯಕರು ಚನ್ನಪಟ್ಟಣಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದಲ್ಲಿ ಹೊಂದಿಸಿ, ಬರೆಯುವ ತಂತ್ರ ಅನುಸರಿಸುತ್ತಿದ್ದಾರೆ. ಈಗಾಗಲೇ ಡಿ.ಕೆ.ಸುರೇಶ್, ರಘುನಂದನ್ ರಾಮಣ್ಣ ಜೊತೆಗೆ ಒಂದಿಷ್ಟು ಹೆಸರುಗಳು ಕೇಳಿಬಂದಿವೆಯಾಗದರೂ ಯಾವುದನ್ನೂ ಅಧಿಕೃತಗೊಳಿಸಿಲ್ಲ. ಒಂದು ವೇಳೆ ಎನ್‌ಡಿಎ ಪಾಳಯದಿಂದ ಯೋಗೇಶ್ವರ್ ಸಿಡಿದು ಬಂದರೆ ಏನು ಮಾಡಬಹುದು ಎಂಬ ಲೆಕ್ಕಾಚಾರ ಡಿಕೆಎಸ್ ಸಹೋದರರದ್ದಾಗಿದೆ. ಯೋಗೇಶ್ವರ್ ಬಂಡಾಯವಾಗಿ ಸ್ಪರ್ಧೆಮಾಡಿದರೆ ಅವರಿಗೆ ಹೊರಗಿನಿಂದ ಬೆಂಬಲ ನೀಡುವುದಾ, ಇಲ್ಲ ಯೋಗೇಶ್ವರ್‌ರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಾ ಅಥವಾ ಇಬ್ಬರ ಜಗಳದಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಳ್ಳುವುದಾ ಎಂಬ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡು ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಒಟ್ಟಾರೆ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ನಡುವೆ ಆಗುವ ತೀರ್ಮಾನದ ಮೇಲೆ ಚನ್ನಪಟ್ಟಣ ಮಿನಿಸಮರಕ್ಕೆ ಹುರಿಯಾಳುಗಳು ಅಖೈರುಗೊಳ್ಳಲಿದ್ದಾರೆ.
–ಸು.ನಾ.ನಂದಕುಮಾರ್