Advertisement

ಕೋವಿಡ್ ಜಾಗೃತಿ ಮೂಡಲಿ: ಮಾಡಾಳ್

05:46 PM May 02, 2020 | Naveen |

ಚನ್ನಗಿರಿ: ತಾಲೂಕಿನಾದ್ಯಂತ ಅಹಾರ ಧಾನ್ಯಗಳ ಕಿಟ್‌ ವಿತರಣೆ ಜೊತೆಗೆ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದರು.

Advertisement

ಶುಕ್ರವಾರ ತಾಲೂಕಿನ ಕೋಗಲೂರು, ಬೆಳ್ಳಿಗನೂಡು, ತಣಿಗೆರೆ, ಮೇದಿಕೆರೆ ಗ್ರಾಪಂ ವ್ಯಾಪ್ತಿಯ ಬಡವರಿಗೆ ಹಮ್ಮಿಕೊಂಡಿದ್ದ ಅಹಾರ ಧಾನ್ಯ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೋವಿಡ್ ಸೋಂಕಿನ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಕೆಲವರು ತಮ್ಮಲ್ಲಿ ಸೋಂಕಿನ ಲಕ್ಷಣಗಳಿದ್ದರೂ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅವರ ಸಂಪರ್ಕದಲ್ಲಿರುವವರಿಗೂ ಸೋಂಕು ಹರಡುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ. ಸೋಂಕಿನ ಲಕ್ಷಣಗಳನ್ನು ಮುಚ್ಚಿಡದೆ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ತಾಲೂಕಿನಲ್ಲಿ ಬಡವರನ್ನು ಗುರುತಿಸಿ 25 ಸಾವಿರ ರೂ. ಗಿಂತಲೂ ಹೆಚ್ಚು ಆಹಾರ ಧಾನ್ಯಗಳ ಕಿಟ್‌ ಗಳನ್ನು ವಿತರಣೆ ಮಾಡುತ್ತಿದ್ದೇವೆ. ಮತ್ತಷ್ಟು ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು
ಎಂದರು. ಜಿಪಂ ಸದಸ್ಯ ಪಿ. ವಾಗೀಶ್‌, ತಾಪಂ ಇಒ ಎಂ.ಆರ್‌. ಪ್ರಕಾಶ್‌, ತಹಶೀಲ್ದಾರ್‌ ಗಿರೀಶ್‌ಬಾಬು, ಸಿಪಿಐ ಆರ್‌.ಆರ್‌. ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next