ತೆರಿಗೆ ಪಾವತಿದಾರರಿಗೆ, ಆದಾಯ ತೆರಿಗೆ ಇಲಾಖೆಯು ಹಲವು ವಿನಾಯಿತಿಗಳನ್ನು ಪ್ರಕಟಿಸಿದೆ. ಕೋವಿಡ್ 19 ಕಾರಣದಿಂದ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವ ದಿನಾಂಕವನ್ನು ಮುಂದೂಡಿರುವುದು ಎಲ್ಲರಿಗೂ ಗೊತ್ತಿರುತ್ತದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪರಿಸ್ಥಿತಿ ನೋಡಿಕೊಂಡು ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಪ್ರಕಟಿಸುವುದಾಗಿ ಈ ಹಿಂದೆ ತಿಳಿಸಿದ್ದರು.
ಅಂತೆಯೇ ಹಲವು ಬದಲಾವಣೆಗಳನ್ನು ಇದೀಗ ತೆರಿಗೆ ಇಲಾಖೆ ಪ್ರಕಟಿಸಿದೆ. ಅವು ಹೀಗಿವೆ. * 2018- 19ನೇ ಸಾಲಿನ ರಿವೈಸ್ಡ್ ಐಟಿಆರ್ ಫೈಲ್ ಮಾಡಲು ಕೊನೆಯ ದಿನಾಂಕವಾಗಿ ಮಾರ್ಚ್ 31 ನಿಗದಿಯಾಗಿತ್ತು. ನಂತರ ಜೂನ್ 30ರ ತನಕ ಮುಂದೂಡಲ್ಪ ಟ್ಟಿತ್ತು. ಇದೀಗ ಈ ಗಡುವು ಇನ್ನೂ ಮುಂದಕ್ಕೆ ಹೋಗಿ, ಜುಲೈ 31ಕ್ಕೆ ನಿಗದಿಗೊಳಿಸಲಾಗಿದೆ.
* ಸಂಬಳ ಪಡೆಯುವ ನೌಕರರಿಗೆ ಐಟಿಆರ್ ಫೈಲ್ ಮಾಡಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೆ ಇದೀಗ ಆ ಕೊನೆಯ ದಿನಾಂಕ ನವೆಂಬರ್ 31ಕ್ಕೆ ಮುಂದೂಡಲ್ಪಟ್ಟಿದೆ.
* 80 ಸಿ, 80ಡಿ, 80ಜಿ ಇತ್ಯಾದಿಗಳ ಅಡಿ ರಿಯಾಯಿತಿ ಕೋರಲು ಜುಲೈ 31ರ ತನಕ ಸಮಯ ವಿಸ್ತರಿಸಲಾಗಿದೆ. ಈ ಮುಂದೂಡಿಕೆ, ಇದುವರೆಗೆ ಯಾರು ತೆರಿಗೆ ಉಳಿಸುವ ಸಲುವಾಗಿ ಹೂಡಿಕೆಗಳನ್ನು ಮಾಡಿಲ್ಲವೋ ಅಂಥವರಿಗೆ ಸಹಕಾರಿ. ಹಲವು ಮಂದಿ ತೆರಿಗೆ ಪಾವತಿದಾರರು ಫಾರ್ಮ್ 16 ಅನ್ನು ಎದುರು ನೋಡುತ್ತಿದ್ದಾರೆ.
* ಟಿಡಿಎಸ್ ಮತ್ತು ಟಿಸಿಎಸ್ ಇಸ್ಯೂ ಮಾಡಲು ಕಡೆಯ ದಿನಾಂಕವನ್ನು ಜುಲೈ 31ರ ತನಕ ವಿಸ್ತರಿಸಲಾಗಿದೆ.
* ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡನ್ನೂ ಲಿಂಕ್ ಮಾಡಲು ಮಾ.31, 2021ರ ತನಕ ಸಮಯ ನೀಡಲಾಗಿದೆ.