Advertisement
60 ದಿನಗಳ ನಲಿ-ಕಲಿ ಸೇತುಬಂಧ ಕಲಿಕಾ ಮಾದರಿಗೆ ಪೂರಕವಾಗಿ ವಿಷಯವಾರು, ತರಗತಿ ವಾರು ಅಗತ್ಯವಿರುವ ಸ್ವಕಲಿಕಾ ಆಧಾರಿತ ಚಟು ವಟಿಕೆ ಮತ್ತು ಅಭ್ಯಾಸದ ಹಾಳೆಗಳನ್ನು ರಾಜ್ಯ ನಲಿ-ಕಲಿ ಸಂಪನ್ಮೂಲ ವ್ಯಕ್ತಿಗಳ ನೆರವಿನೊಂದಿಗೆ ವಿನ್ಯಾಸಗೊಳಿಸಲಾಗಿದೆ.
Related Articles
Advertisement
ಸೇತುಬಂಧ ಕಲಿಕೆಗೆ ಸಂಬಂಧಿಸಿ ಮೌಲ್ಯಮಾಪನಕ್ಕೆ ಕಲಿಕಾ ಅಭ್ಯಾಸದ ಹಾಳೆಗಳನ್ನೇ ಬಳಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಅಭ್ಯಾಸ ಪೂರ್ಣಗೊಳಿಸಿದ ಹಾಳೆ ಗಳನ್ನು ಮಕ್ಕಳಿಂದ ನೇರವಾಗಿ ಇಲ್ಲವೇ ಆನ್‌ಲೈನ್ ಮೂಲಕ ಮರಳಿ ಪಡೆದು ಕಲಿಕೆಯ ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಪೂರ್ಣ ಸರಿ ಉತ್ತರ ಇದ್ದರೆ “ಎ’ ಎಂದೂ, ತಪ್ಪಾದ ಉತ್ತರ ಇದ್ದರೆ “ಬಿ’ ಎಂದೂ ಶ್ರೇಣಿಗಳನ್ನು ನೀಡಬೇಕು. “ಬಿ’ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಹಿಮ್ಮಾಹಿತಿ ನೀಡುವ ಮೂಲಕ ಪೂರಕ ಚಟುವಟಿಕೆ ಮಾಡಿಸಿ ಕಲಿಕಾ ಕೊರತೆ ನೀಗಿಸಬೇಕು. ಈ ಹಾಳೆಗಳನ್ನು ಮಕ್ಕಳ ಪೋರ್ಟ್ ಪೋಲಿಯೋದಲ್ಲಿ ಇಟ್ಟುಕೊಳ್ಳಬೇಕು. ಸೇತುಬಂಧ ಕಲಿಕೆಗೆ ನಿರ್ದಿಷ್ಟಪಡಿಸಿದ ಕಲಿಕಾ ದಿನಗಳು ಪೂರ್ಣ ಗೊಂಡ ಬಳಿಕವೇ ಪ್ರತಿ ಮಗು ತರಗತಿವಾರು ಪ್ರಸಕ್ತ ಸಾಲಿನ ಕಲಿಕೆಗೆ ಪ್ರವೇಶ ಪಡೆದುಕೊಳ್ಳಬೇಕು.
ಶಿಕ್ಷಕರಿಗೆ ತರಬೇತಿ :
ಅಭ್ಯಾಸ ಹಾಳೆಗಳ ಬಳಕೆ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ನೆರವು ನೀಡಲು ಅಗತ್ಯವಿರುವ ಸೂಚನೆ, ಮಾರ್ಗದರ್ಶನಗಳನ್ನು ಪೋಷಕ ರಿಗೂ ಸ್ಪಷ್ಟಪಡಿಸಬೇಕು. ಈ ಹಾಳೆಗಳನ್ನು ಮಕ್ಕಳಿಗೆ ನೀಡಿರುವ ಮತ್ತು ಹಿಂಪಡೆದಿರುವ ಬಗ್ಗೆ ಸೂಕ್ತ ದಾಖಲೆಯನ್ನು ಶಿಕ್ಷಕರು ನಿರ್ವಹಿ ಸಬೇಕು. ಹಾಳೆಗಳ ಬಳಕೆ ಬಗ್ಗೆ ಶಿಕ್ಷಕರಿಗೆ ಕ್ಲಸ್ಟರ್ ಹಂತದಲ್ಲಿ ಗೂಗಲ್, ಝೂಮ್, ವೀಡಿಯೊ ಮಾಧ್ಯಮ ಆಧಾರಿತ ಸಭೆಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.
ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿಯಲ್ಲಿ ಸಮಗ್ರ ಶಿಕ್ಷಣ ವತಿ ಯಿಂದ ಹೊಸದಾಗಿ ಅಭ್ಯಾಸ ಮತ್ತು ಚಟುವಟಿ ಕೆಯ ಹಾಳೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಹಾಳೆಗಳು ಸೇತುಬಂಧ ಹೊಸ ಕಲಿಕಾ ಮಾದರಿಯೊಂದಿಗೆ ಬರಲಿದೆ. ಇದರ ಬಳಕೆ ಕುರಿತು ಈಗಾಗಲೇ ಶಿಕ್ಷಕರಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ.– ಎಚ್.ಕೆ. ಲಿಂಗರಾಜು,ಪ್ರಾಚಾರ್ಯರು, ಡಯಟ್, ದಾವಣಗೆರೆ
-ಎಚ್.ಕೆ.ನಟರಾಜ