Advertisement
“ರಾಜ್ಯ ಸರ್ಕಾರದಿಂದ ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಹಣಕಾಸು ನೆರವನ್ನೂ ಕಲ್ಪಿಸಲಾಗಿದೆ. ಹೀಗಾಗಿ, ಇನ್ನೊಂದು ವರ್ಷದಲ್ಲಿ ಬೆಂಗಳೂರು ಅಭಿವೃದ್ದಿಯಲ್ಲಿ ಮಾದರಿಯಾಗಲಿದೆ,’ ಎಂದು ಹೇಳಿದರು.
Related Articles
Advertisement
ಎನ್‌ಜಿಟಿ ಆದೇಶಕ್ಕೂ ಮೊದಲೇ ಕೆಲಸಕ್ಕೆ ಕೈ ಇಟ್ಟಿತ್ತು ಸರ್ಕಾರ: ಸಚಿವ ಕೆ.ಜೆ.ಜಾರ್ಜ್ ಮಾತಾಡಿ, “ಬೆಳ್ಳಂದೂರು ಕೆರೆ ಸಂರಕ್ಷಣೆಗಾಗಿ ಸರ್ಕಾರ ಎಂಟು ತಿಂಗಳ ಹಿಂದೆಯೇ ತಜ್ಞರ ಸಮಿತಿ ರಚಿಸಿತ್ತು. ತಜ್ಞರ ಸಮಿತಿಯು ಕೆರೆ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಕೈಗೊಳ್ಳಬೇಕಾದ ಹಲವು ಶಿಫಾರಸ್ಸುಗಳನ್ನು ನೀಡಿತ್ತು. ಅದರ ಆಧಾರದಲ್ಲಿ ಸರ್ಕಾರ ಕ್ರಿಯಾ ಯೋಜನೆಗಳನ್ನು ರೂಪಿಸಿ ಕಾರ್ಯಾರಂಭ ಮಾಡುವ ವೇಳೆಗೆ ಎನ್‌ಜಿಟಿ ಆದೇಶ ನೀಡಿದೆ,’ ಎಂದು ಹೇಳಿದರು.
ವೇದಿಕೆಯಲ್ಲಿಯೇ ತಿರುಗೇಟು: ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡುತ್ತ, “ಮಹದೇವಪುರ ಕ್ಷೇತ್ರದಿಂದ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಮಹದೇವಪುರದ ಐಟಿ ಬಿಟಿ ಕಂಪೆನಿಗಳಿಗೆ ತೆರಿಗೆ ಜತೆಗೆ ದಂಡ ಹಾಕಿದ್ದರಿಂದ ಕಂಪೆನಿಗಳು ಬೇರೆಡೆಗೆ ಸ್ಥಳಾಂತರವಾಗುತ್ತಿವೆ. ಇನ್ನು ಇದೇ ಕ್ಷೇತ್ರ ತ್ಯಾಜ್ಯ ಹಾಕಲಾಗುತ್ತಿದೆ. ಕೊಳಚೆ ನೀರನ್ನೂ ಇಲ್ಲಿಗೆ ಹರಿಸಲಾಗುತ್ತಿದೆ,’ ಎಂದು ದೂರಿದರು.
ಇದಕ್ಕೆ ಸಚಿವ ಕೆ.ಜೆ.ಜಾರ್ಜ್ ತಿರುಗೇಟು ನೀಡಿದರು. “ಈ ಹಿಂದಿನ ಸರ್ಕಾರ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. 110 ಹಳ್ಳಿಗಳಿಗೆ ಕುಡಿಯುವ ನೀರು ನೀಡುವ ಯೋಜನೆಯಲ್ಲಿ ಮಹದೇಪುರ ಕ್ಷೇತ್ರದ 34 ಹಳ್ಳಿಗಳು ಸೇರಿವೆ,’ ಎಂದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶಕ್ಕೆ ಬೆಂಗಳೂರು ಮಾಹಿತಿ ತಂತ್ರಜ್ಞಾನದ ರಾಜಧಾನಿ.
ಪೂರಕ ವಾತಾವರಣವಿರುವ ಕಾರಣಕ್ಕೇ ಹೆಚ್ಚು ಕಂಪೆನಿಗಳು ಇಲ್ಲಿಗೆ ಬರುತ್ತಿವೆ. ಶಾಸಕರು ಸುಮ್ಮನೆ ಹೇಳಿಕೆಗಳನ್ನು ನೀಡಬಾರದು. ಪಾಲಿಕೆಗೆ ತೆರಿಗೆ ಪಾವತಿಸುವುದು ಎಲ್ಲರ ಕರ್ತವ್ಯ, ಬಹುಶಃ ಕಂಪೆನಿಗಳು ಹಳ್ಳಿಗಳ ಭಾಗದಲ್ಲಿ ಕಡಿಮೆ ತೆರಿಗೆ ಎಂದು ಆ ಕಡೆ ಹೋಗುತ್ತಿರಬಹುದೇನೂ ಎಂದು ಲೇವಡಿ ಮಾಡಿದರು.
ನೀರು ಸಂಸ್ಕರಣಾ ಘಟಕದಲ್ಲಿ ವಿದ್ಯುತ್ ಉತ್ಪಾದನೆಬಿ.ನಾಗಸಂದ್ರ ಬಳಿ 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಘಟಕ 60 ಎಂಎಲ್‌ಡಿಯಷ್ಟು ನೀರನ್ನು ಶುದ್ದೀಕರಿಸುವ ಸಾಮರ್ಥಯ ಹೊಂದಿದೆ. ಇಲ್ಲಿ ಶುದ್ಧೀಕರಿಸಿದ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸಲಾಗುತ್ತದೆ. ಜತೆಗೆ ನೀರಿನಲ್ಲಿನ ತ್ಯಾಜ್ಯದಿಂದ ಬಯೋಗ್ಯಾಸ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇಲ್ಲಿ 1 ಮೇಗಾವ್ಯಾಟ್ ಸಾಮರ್ಥಯದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸಲಾಗಿದ್ದು, ಉತ್ಪಾದನೆಯಾಗುವ ಶೇ.50ರಷ್ಟು ವಿದ್ಯುತ್ ಘಟಕಕ್ಕೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಮುಂದಾಗಿರುವ ಪೆರಿಫೆರಲ್ ವರ್ತುಲ ರಸ್ತೆಗಳ ನಿರ್ಮಾಣಕ್ಕಾಗಿ ಸರ್ಕಾರ ಹಣಕಾಸು ನೆರವು ಕೋರಿದೆ. ಹಣಕಾಸು ನೆರವು ನೀಡುವ ಕುರಿತು ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
-ಟಾಕಾಯುಕಿ ಕಿಟಾಗಾವ, ಜಪಾನ್ ಕಾನ್ಸುಲೆಟ್ ಬೆಂಗಳೂರು ಜಲಮಂಡಳಿ ಹಾಗೂ ಸರ್ಕಾರದೊಂದಿಗೆ ಜೈಕಾ ಬ್ಯಾಂಕ್ ಉತ್ತಮ ಸಂಬಂಧ ಹೊಂದಿದೆ. ಈವರೆಗೆ ಜೈಕಾ ಬ್ಯಾಂಕ್ 6 ಸಾವಿರ ಕೋಟಿ ರೂ. ಗಳಷ್ಟು ಹಣಕಾಸು ನೆರವನ್ನು ಸರ್ಕಾರಕ್ಕೆ ನೀಡಿದೆ. ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 9 ತ್ಯಾಜ್ಯ ಸಂಸ್ಕರಣೆ ಘಟಕಗಳಿಗೆ ಬ್ಯಾಂಕ್‌ನಿಂದ ಹಣಕಾಸು ನೆರವು ನೀಡಲಾಗುವುದು.
-ಸಕಾಮತ್, ಜೈಕಾ ಬ್ಯಾಂಕ್ ಪ್ರತಿನಿಧಿ