Advertisement

ಟೂರ್ನಿ ಮಧ್ಯೆಯೇ ಕೆಕೆಆರ್ ತಂಡದಲ್ಲಿ ನಾಯಕತ್ವ ಬದಲಾವಣೆ? ಹೊಸ ಚರ್ಚೆ ಹುಟ್ಟುಹಾಕಿದ ಮಾರ್ಗನ್

03:25 PM Oct 04, 2020 | keerthan |

ದುಬೈ: ದುಬೈನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್ ಹಲವರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದ ಆಟಗಾರರು, ತಂಡಗಳು ನೀರಸ ಪ್ರದರ್ಶನ ತೋರಿದರೆ, ಯುವ ಪ್ರತಿಭೆಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

Advertisement

ಪ್ರತಿ ವರ್ಷ ಉತ್ತಮ ಪ್ರದರ್ಶನ ತೋರುವ ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಸಾಧಾರಣ ಪ್ರದರ್ಶನ ನೀಡುತ್ತಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಸೋತಿದೆ. ಇದೇ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ನಾಯಕತ್ವದ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಳೆದ ವರ್ಷವೂ ನಾಯಕತ್ವದಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ಕಾರ್ತಿಕ್ ಈ ವರ್ಷವೂ ಸುಧಾರಿಸಿಲ್ಲ. ಹೀಗೆ ಆದರೂ ಕಳೆದ ವರ್ಷದಂತೆ ಈ ವರ್ಷವೂ ಕೆಕೆಆರ್ ಪ್ಲೇ ಆಫ್ ತಲುಪಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ:ಅಫ್ಘಾನಿಸ್ಥಾನ: ಬಾಂಬ್ ಸ್ಪೋಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪಾಯರ್ ನಿಧನ

ಇಯಾನ್ ಮಾರ್ಗನ್, ಪ್ಯಾಟ್ ಕಮಿನ್ಸ್ ರಂತಹ ವಿಶ್ವದರ್ಜೆಯ ಆಟಗಾರರು ತಂಡದಲ್ಲಿದ್ದರೂ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸುನೀಲ್ ನರೈನ್ ಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ, ಸ್ವತಃ ದಿನೇಶ್ ಕಾರ್ತಿಕ್ ಫಾರ್ಮ್ ನಲ್ಲಿಲ್ಲ ಎಂದು ಅಭಿಮಾನಿಗಳು ಬೇಸರ ತೋಡಿಕೊಂಡಿದ್ದಾರೆ.

Advertisement

2019ರ ಏಕದಿನ ವಿಶ್ವಕಪ್ ಗೆದ್ದ ನಾಯಕ ಇಯಾನ್ ಮಾರ್ಗನ್ ಇಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದಡಿಯಲ್ಲಿ ಆಡುತ್ತಿದ್ದಾರೆ. ಮಾರ್ಗನ್ ರಂತಹ ಅನುಭವಿ ಇರುವಾಗ ದಿನೇಶ್ ಕಾರ್ತಿಕ್ ಯಾಕೆ? ಮಾರ್ಗನ್ ರನ್ನು ಕೆಕೆಆರ್ ಕ್ಯಾಪ್ಟನ್ ಮಾಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಐಪಿಎಲ್‌ ಗೆ ಮತ್ತೆ ವಕ್ಕರಿಸಿದೆ ಫಿಕ್ಸಿಂಗ್ ಭೂತ..! ಸ್ಟಾರ್ ಆಟಗಾರನನ್ನು ಸಂಪರ್ಕಿಸಿದ ಬುಕಿ

Advertisement

Udayavani is now on Telegram. Click here to join our channel and stay updated with the latest news.

Next