Advertisement

 ಛೇಂಜ್‌ ಮೇಕರ್ ಇನ್‌ ಎಜುಕೇಷನ್‌ ಫೆಲೋಶಿಪ್‌

03:45 AM Mar 21, 2017 | |

ಶಿಕ್ಷಣ ರಂಗದಲ್ಲಿ ಯುವ ಶಕ್ತಿಯನ್ನು ಆಕರ್ಷಿಸಲೆಂದೇ ದೆಹಲಿ ಸರ್ಕಾರ ಒಂದು ನೂತನ ಫೆಲೋಶಿಪ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದೇ “ಛೇಂಜ್‌ ಮೇಕರ್ ಇನ್‌ ಎಜುಕೇಷನ್‌ ಫೆಲೋಶಿಪ್‌’ (CMIE-Change Makers in Education Fellowship).ಈ ಫೆಲೋಶಿಪ್‌ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ದೆಹಲಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಆಭ್ಯರ್ಥಿಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮಂತ್ರಿಗಳ ಜೊತೆಗೆ, ಹಿರಿಯ ಅಧಿಕಾರಿಗಳ ಜೊತೆಗೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ ಕೆಲವು ಸರ್ಕಾರೇತರ ಸಂಸ್ಥೆಗಳ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ.
  
ಆಯ್ಕೆಯಾದ ಅಭ್ಯರ್ಥಿಗಳು ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಾರೆ. ಉದಾಹರಣೆಗೆ ಪ್ರಿನ್ಸಿಪಲ್‌ ಲೀಡರ್‌ಶಿಪ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ (Principal Leadership Development Program),ಸ್ಕೂಲ್‌ ಮ್ಯಾನೇಜ್‌ಮೆಂಟ್‌ ಕಮಿಟಿ (School Management Committee)ಮೆಂಟರ್‌ ಟೀಚರ್‌ ಪ್ರೋಗ್ರಾಂ (Mentor Teacher Program), ಕೌನ್ಸೆಲಿಂಗ್‌  ಗೈಡೆನ್ಸ್‌ ((Counselling and Guidance) ಇತ್ಯಾದಿ.

Advertisement

22-35 ವರ್ಷದ ವಯೋಮಿತಿಯ ಪದವೀಧರ ಅಭ್ಯರ್ಥಿಗಳು ಈ ಕಾರ್ಯಕ್ರಮಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಜೊತೆಗೆ ಅಭ್ಯರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಕನಿಷ್ಠ ಎರಡು ವರ್ಷದ ಅನುಭವ ಅಪೇಕ್ಷಣೀಯ. ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯ ಜೊತೆಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಹುಮ್ಮಸ್ಸು ಮತ್ತು ನಾಯಕತ್ವ ಗುಣಗಳನ್ನು ಹೊಂದಿರಬೇಕು. ಸರ್ಕಾರಿ ಶಾಲೆಗಳಲ್ಲಿನ ಟೀಚರ್‌ಗಳ ಜೊತೆ ಮತ್ತು ಮಕ್ಕಳ ಜೊತೆಗೆ ಉತ್ತಮ ಒಡನಾಟವನ್ನು ಬೆಳೆಸಿಕೊಂಡು ಕೆಲಸ ಮಾಡುವ ಲಕ್ಷಣಗಳನ್ನು ಹೊಂದಿರಬೇಕು. ಈ ಎಲ್ಲಾ ಗುಣಗಳನ್ನು ಆಯ್ಕೆ ಪ್ರಕ್ರಿಯೆಯ ಸಮಯದಲ್ಲಿ ಪರೀಕ್ಷಿಸಲಾಗುತ್ತದೆ. 

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸಲು ಕಡೆಯ ದಿನಾಂಕ:
ಈ ಫೆಲೋಶಿಪ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಏಪ್ರಿಲ್‌ 5, 2017. 

ಆಯ್ಕೆ ನಂತರ ಏನು?
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವಾರದ ತರಬೇತಿಯನ್ನು ನೀಡಲಾಗುತ್ತದೆ. ಶಿಕ್ಷಣ ಕ್ಷೇತ್ರದ ಬಗೆಗೆ ತರಬೇತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿವಿಧ ಸಂಸ್ಥೆಗಳು ಮತ್ತು ಪ್ರಖ್ಯಾತ ವ್ಯಕ್ತಿಗಳ ಜೊತೆಗೆ ಸಂವಾದಗಳನ್ನು ಈ ತರಬೇತಿಯ ಸಮಯದಲ್ಲಿ ಒದಗಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಹಲವಾರು ಲೀಡರ್‌ಶಿಪ್‌ ಕಾಂಕ್ಲೇವ್‌ (Ihbghwkt Asqeobñh)ಗಳಲ್ಲಿ ಭಾಗವಹಿಸುವ ಅವಕಾಶವನ್ನು ನೀಡಲಾಗುತ್ತದೆ. ನಂತರದಲ್ಲಿ ಜೀವನ್‌ ವಿದ್ಯಾ ಕ್ಯಾಂಪ್‌ನಲ್ಲಿ ಒಂದು ವಾರದ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲ ತರಬೇತಿಗಳ ನಂತರದಲ್ಲಿ ಕಡೆಯದಾಗಿ ಅಭ್ಯರ್ಥಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಲು ಕಳಿಸಲಾಗುತ್ತದೆ. 

ಫೆಲೋಶಿಪ್‌ ಕಾರ್ಯಕ್ರಮವು ಒಂದು ವರ್ಷದ ಅವಧಿಯದ್ದಾಗಿದೆ. ಅಭ್ಯರ್ಥಿಗಳ ಕೆಲಸದ ಶೈಲಿ ನೋಡಿ ಅವಧಿಯನ್ನು ಎರಡು ವರ್ಷಕ್ಕೆ ಏರಿಸುವ ಸಂಭವವಿದೆ. ಫೆಲೋಶಿಪ್‌ ಸಮಯದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯೂ ಮಾಸಿಕ ರು. 40,000/- ವೇತನವನ್ನು ಪಡೆಯುತ್ತಾರೆ. 

Advertisement

ಈ ಫೆಲೋಶಿಪ್‌ ಕಾರ್ಯಕ್ರಮವು ನವಯುವಕರಿಗೆ ಲಾಭದಾಯಕ. ತಮ್ಮ ವೈಯಕ್ತಿಕ ಅಭಿವೃದ್ಧಿಯ ಜೊತೆಜೊತೆಗೆ ಸಮಾಜಕ್ಕೆ ಮತ್ತು ದೇಶಕ್ಕೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುವ ಸದಾವಕಾಶವನ್ನು ಈ ಫೆಲೋಶಿಪ್‌ ಒದಗಿಸುತ್ತದೆ. 

– ಪ್ರಶಾಂತ್‌ ಎಸ್‌. ಚಿನ್ನಪ್ಪನವರ್‌, ಚಿತ್ರದುರ್ಗ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next