ಬೆಂಗಳೂರು: ನೃಪತುಂಗ ವಿಶ್ವವಿದ್ಯಾಲಯಲ್ಲಿ ರಾಷ್ಟ್ರೀಯ ಶಿಕ್ಷಣ ಭಾಗವಾಗಿ 8 ವಿಭಾಗ ಮಾಡಲಾಗಿದೆ ಎಂದು ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ ಮಾಹಿತಿ ನೀಡಿದರು.
ಇದು ಹೊಸ ವಿಶ್ವವಿದ್ಯಾಲಯವಾಗಿದ್ದು, ರಾಷ್ಟ್ರೀಯ ಉಚ್ಛತರ ಶಿಕ್ಷಣ(ರುಸಾ) ಅಡಿಯಲ್ಲಿ ರಾಜ್ಯ ಸರ್ಕಾರ ನೃಪತುಂಗ ವಿವಿ ರಚನೆ ಮಾಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ಜನವರಿಯಿಂದಲೇ ಸಿದ್ಧತೆ ಮಾಡಿಕೊಂಡಿದ್ದು, ಈಗ ಇರುವ ಮೂರು ವರ್ಷದ ಪದವಿ ಕೋರ್ಸ್ ಜತೆಗೆ ನಾಲ್ಕು ವರ್ಷದ ಆನರ್ಸ್ ಪದವಿಯೂ ಇರಲಿದೆ. ಬಿಸಿಎ ಹಾಗೂ ಬಿ.ಎಸ್ಸಿ ಕೋರ್ಸ್ ನಲ್ಲಿ ಕೆಲವೊಂದು ಬದಲಾವಣೆ ತರಲಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ:ವಾರದಲ್ಲಿ ಒಂದು ದಿನ ಲಸಿಕೆ ಉತ್ಸವ; ಬುಧವಾರ ರಾಜ್ಯದಲ್ಲಿ 10 ಲಕ್ಷ ಲಸಿಕೆ ನೀಡಿಕೆ: ಸುಧಾಕರ್
ಸ್ಕೂಲ್ ಆಫ್ ಫಿಸಿಕಲ್ ಸೈನ್ಸ್, ಸ್ಕೂಲ್ ಆಫ್ ಕೆಮಿಕಲ್ ಸೈನ್ಸ್, ಸ್ಕೂಲ್ ಆಫ್ ಲೈಫ್ ಸೈನ್ಸ್, ಸ್ಕೂಲ್ ಆಫ್ ಅಫ್ಲೈಡ್ ಲೈಫ್ ಸೈನ್ಸ್, ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್, ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಹಾಗೂ ಸ್ಟ್ಯಾಟಿಸಿಕ್ಸ್, ಸ್ಕೂಲ್ ಆಫ್ ಲ್ಯಾಂಗ್ವೇಜ್ ಮತ್ತು ಲಿಟ್ರೇಚರ್ ಹಾಗೂ ಸ್ಕೂಲ್ ಆಫ್ ಮಲ್ಟಿ ಡಿಸಿಪ್ಲಿನರಿ ಆಂಡ್ ಟ್ರಾನ್ಸ್ ಡಿಸಿಪ್ಲಿನರಿ ವಿಭಾಗವನ್ನು ಆರಂಭಿಸುತ್ತಿದ್ದೇವೆ. ಆನ್ಲೈನ್ ಮತ್ತು ಆಫ್ ಲೈನ್ ಕಲಿಕೆ ಕೂಡ ಮುಂದುವರಿಯಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದ ಸಾಧಕರನ್ನು ಪರಿಚಯಿಸಲು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಭಾರತದ ಕೊಡುಗೆ, ಸ್ಪರ್ಧಾತ್ಮಕ ಗಣಿತ, ವೇದ ಗಣಿತ ವಿಷಯವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಇದು ವಿದ್ಯಾರ್ಥಿಗಳ ಆಯ್ಕೆಗೆ ಮುಕ್ತವಾಗಿರುವ ವಿಷಯವಾಗಿದೆ ಎಂದರು.