Advertisement

ಚಂದ್ರು ಕೊಲೆ : ವಿವಾದದ ಬಳಿಕ ‘ನನ್ನಿಂದ ತಪ್ಪು ಹೇಳಿಕೆ’ಎಂದ ಆರಗ ಜ್ಞಾನೇಂದ್ರ

03:16 PM Apr 06, 2022 | Team Udayavani |

ಬೆಂಗಳೂರು : ಗೋರಿಪಾಳ್ಯದಲ್ಲಿ ನಡೆದ ಹಿಂದೂ ಯುವಕ ಚಂದ್ರು‌ ಕೊಲೆ ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗಳು ಈಗ ಗೊಂದಲಕ್ಕೆ ಕಾರಣವಾಗಿರುವುದು ಮಾತ್ರವಲ್ಲ, ವಿವಾದವನ್ನೂ ಸೃಷ್ಟಿಸಿದೆ.

Advertisement

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚಂದ್ರು ಹತ್ಯೆ ಆಗಿದೆ.ಮಾಹಿತಿ ತೆಗೆದುಕೊಂಡಿದ್ದೇನೆ.ಉರ್ದು ಮಾತಾಡೋಕೆ ಹೇಳಿದ್ದರು. ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಅನ್ನುವ ಕಾರಣಕ್ಕೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ. ಆ ಹುಡುಗ ದಲಿತ ಸಮುದಾಯಕ್ಕೆ ಸೇರಿದವನು.ಪ್ರಕರಣ ಸಂಬಂಧ,ಪೊಲೀಸರು ಕೆಲವರನ್ನ ಬಂಧಿಸಿದ್ದಾರೆ ಎಂದು ಹೇಳಿದ್ದರು.

ಆದರೆ ಘಟನೆ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರು ಬೇರೆಯದೇ ಹೇಳಿಕೆ ನೀಡಿದ್ದರು. ದ್ವಿಚಕ್ರ ವಾಹನ ಅಪಘಾತ ಹಿನ್ನೆಲೆಯಲ್ಲಿ ನಡೆದ ವಿವಾದ ಕೊಲೆಗೆ ಕಾರಣ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು.

ಎಲ್ಲದಕ್ಕಿಂತ ಹೆಚ್ಚಾಗಿ ಗೃಹ ಸಚಿವ ಅಧಿಕೃತ ಮಾಧ್ಯಮ ವಾಟ್ಸಾಪ್ ಗ್ರೂಪ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗಿದ್ದ ಯುವಕರು, ಸಣ್ಣ ಅಪಘಾತ ಸಂಬಂಧ ಮಾತಿಗೆ ಮಾತು ಬೆಳೆದು, ಘರ್ಷಣೆ ನಡೆದಿದೆ.  ಒಬ್ಬ ಯುವಕ, ತೊಡೆ ಮೇಲಿನ ಚೂರಿ ಇರಿತದಿಂದ, ತೀವ್ರ ಗಾಯಗೊಂಡು, ಮೃತಪಟ್ಟಿದ್ದಾನೆ.ಈ ಸಂಬಂಧ ಪೊಲೀಸರು ಮೂವರು, ಯುವಕರನ್ನು ವಶ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ವಿವಾದ ಮುಗಿಲುಮುಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಗೃಹ ಸಚಿವರು ”ನನ್ನಿಂದ ತಪ್ಪು ಹೇಳಿಕೆ ವ್ಯಕ್ತವಾಗಿದೆ. ಆರಂಭಿಕ ಮಾಹಿತಿ ಹಿನ್ನೆಲೆಯಲ್ಲಿ ಹೇಳಿಕೆ ನೀಡಲಾಗಿದೆ” ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ : ಚಂದ್ರು ಹತ್ಯೆ: ಆರಗ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ

ಹಿಂದೂಪರ ಸಂಘಟನೆಗಳಿಂದ ಮುಸ್ಲಿಂ ವ್ಯಾಪಾರ ನಿರ್ಬಂಧ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದಗೃಹ ಸಚಿವ ಆರಗ ಜ್ಞಾನೇಂದ್ರ, ಅಲ್ಲಲ್ಲಿ ಅನೇಕ‌ ಹೇಳಿಕೆಗಳು ಬರುತ್ತಿವೆ.ಹಿಜಾಬ್‌ನಿಂದ ಪ್ರಾರಂಭವಾಗಿ ಬೇರೆ ಬೇರೆ ವಿಚಾರಗಳ ಚರ್ಚೆ ನಡೀತಿದೆ.ಇವುಗಳಿಂದ ಕಾನೂನು ಸುವ್ಯವಸ್ಥೆ ಗೆ ಭಂಗ ಬಂದರೆ ಗೃಹ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗುತ್ತದೆ.ಸರ್ಕಾರ, ಗೃಹ ಇಲಾಖೆ ಎಲ್ಲದರ ಮೇಲೆ ಕಣ್ಣಿಟ್ಟಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next