Advertisement

ಕನ್ನಡ ಮಾತಾಡಿದ ಎಂದು ಚಂದ್ರು ಹತ್ಯೆಯಾಗಿದೆ : ಸಿ.ಟಿ.ರವಿ

02:55 PM Apr 06, 2022 | Team Udayavani |

ಬೆಂಗಳೂರು : ನಾವು ಯಾವ ದೇಶದಲ್ಲಿಇದ್ದೇವೆ? ವ್ಯಕ್ತಿಗತ ಆಧಾರದಲ್ಲಿ ನೋಡಬಾರದು, ಚಂದ್ರು ಹತ್ಯೆಯ ಹಿಂದೆ ಪ್ರಚೋದನಕಾರಿ ಅಂಶ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು ”ದುಃಖದ ಸಂಗತಿ ಏನು ಅಂದರೆ ಕನ್ನಡ ಮಾತಾಡಿದ ಅಂತಾ ಚಂದ್ರು ಹತ್ಯೆಯಾಗಿದೆ. ಇವತ್ತು ಗೋರಿಪಾಳ್ಯದಲ್ಲಿ ನಡೆದಿದೆ,ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು,ನಾಳೆ ದೇಶದ ತುಂಬಾ ನಡೆಯಬಹುದು. ಇದರ ಬಗ್ಗೆ ಬುದ್ದಿಜೀವಿಗಳು ಮೌನವಾಗಿದ್ದಾರೆ.ಸತ್ತವನು ಹಿಂದೂ ಆದರೆ ಅವರ ಕಣ್ಣಲ್ಲಿ ಕಣ್ಣೀರು ಬರುವುದಿಲ್ಲ.ಸತ್ತವರು ಹಿಂದೂ ಆದರೆ ಸಿದ್ದರಾಮಯ್ಯ ಸಂತಾಪ ಸೂಚಿಸುವುದಿಲ್ಲ.ಅವರ ಆಷಾಢಭೂತಿತನಕ್ಕೆ ನಾನು ಧಿಕ್ಕಾರ ಹೇಳುತ್ತೇನೆ” ಎಂದು ಕಿಡಿಕಾರಿದರು.

ಇದನ್ನೂ ಓದಿ: ಚಂದ್ರು ಕೊಲೆ : ವಿವಾದದ ಬಳಿಕ ‘ನನ್ನಿಂದ ತಪ್ಪು ಹೇಳಿಕೆ’ ಎಂದ ಆರಗ ಜ್ಞಾನೇಂದ್ರ

‘ಧ್ವನಿವರ್ಧಕಗಳ ಶಬ್ಧದ ಪ್ರಮಾಣ ಬಗ್ಗೆ ಕೋರ್ಟ್ ಆದೇಶಗಳಿವೆ. ಕೋರ್ಟ್ ಆದೇಶಗಳನ್ನು ಎಲ್ಲರೂ ಪಾಲಿಸಲಿ. ನಾವು ನ್ಯಾಯಾಲಯದ ಪರ, ಪರಿಸರ ಇಲಾಖೆಯ ಪರ.ನಾನು ಈ ವಿಷಯದಲ್ಲಿ ಮಸೀದಿ ವಿರುದ್ಧವಾಗಲಿ, ದೇವಸ್ಥಾನಗಳ ಪರವಾಗಲಿ ಇಲ್ಲ.ಆದರೆ ಕೋರ್ಟ್ ಆದೇಶಗಳ ಪಾಲನೆ ಆಗಲಿ’ ಎಂದು ಹೇಳಿದರು.

ಟೀಕೆ ಮಾಡುವ ಇತರೇ ಪಕ್ಷಗಳು ಕೋರ್ಟ್ ಆದೇಶದ ಪರ ಇದ್ದಾರೋ? ಒಂದು ಸಮುದಾಯದ ಪರ ಇದ್ದಾರೋ ಹೇಳಲಿ.ನ್ಯಾಯಾಲಯದ ತೀರ್ಪುನ್ನು ವಿರೋಧಿಸಬಾರದು. ಮತಾಂಧತೆಯ ಭೂತ ಯಾರಿಗೆ ಹೊಕ್ಕಿದೆ ಎಂದು ಗೊತ್ತಿದೆ ಎಂದರು.

Advertisement

ನಾವಂತೂ ಸಮವಸ್ತ್ರರ ಪರ ನಿಂತಿದ್ದೇವೆ.ನಮಗೆ ಜಾತಿ ಒಡೆಯುವ ಅವಶ್ಯಕತೆ ಇಲ್ಲ.ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆರವು ಒದಗಿಸಿದ್ದವರು ಯಾರು ಅಂತಾ ಹೇಳಲಿ.ಹಿಜಾಬ್ ಪರ ವಾದ ಮಾಡಿದ ಎಲ್ಲ ವಕೀಲರು ಕಾಂಗ್ರೆಸ್ ಬೆಂಬಲಿತರೇ ಇದ್ದರು. ಕಾಂಗ್ರೆಸ್ ನಿಲುವು ಯಾವ ಕಡೆ ? ಎಂದು ಪ್ರಶ್ನಿಸಿದರು.

ಮತ ಬ್ಯಾಂಕ್ ಗಾಗಿ ಸಮಾಜ ಒಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್. ಭಾಗ್ಯ ಯೋಜನೆ ತಂದು ಸಮಾಜ ಒಡೆದಿದ್ದು ಸಿದ್ದರಾಮಯ್ಯ ಎಂದರು. ಮುಸ್ಲಿಮರು ಮಾವು ತೆಗೆದುಕೊಳ್ಳದಂತೆ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ರೀತಿಯ‌ ನಿಲುವನ್ನು ನಮ್ಮ ಪಕ್ಷ ಸಮರ್ಥಿಸಿಕೊಳ್ಳುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next