Advertisement

ಚಂದ್ರಯಾನ ಯಶಸ್ವಿ ಹಿಂದೆ ಗುಡಿಬಂಡೆಯ ವಿಜ್ಞಾನಿ ಒಬ್ಬರು

06:49 PM Jul 14, 2023 | Team Udayavani |

ಗುಡಿಬಂಡೆ: ತಾಲೂಕಿನ ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ಈ ಭಾರಿಯ ಚಂದ್ರಯಾನ-3 ಉಡಾವಣೆಯಲ್ಲಿ ಮಿಷನ್ ಕಂಟ್ರೋಲ್ ಸೆಂಟ್ರಲ್‌ನ ಇನ್‌ಚಾರ್ಜ್ ಮತ್ತು ಸಪೋರ್ಟ್ ಸಿಸ್ಟಮ್ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವುದಕ್ಕೆ ತಾಲೂಕಿನ ಗಣ್ಯ ವ್ಯಕ್ತಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಗುಡಿಬಂಡೆ ತಾಲೂಕಿನ ಕುಗ್ರಾಮವಾದ ಜಂಗಾಲಹಳ್ಳಿಯಲ್ಲಿ ಚನ್ನಪ್ಪಯ್ಯ, ತಿಮ್ಮಕ್ಕ ರವರ ಮಗನಾಗಿ ಜನಿಸಿದ, ಇವರು 2013 ರ ಮಂಗಳಯಾನ ಉಡಾವಣೆಯಲ್ಲೂ ಸಹ ಪ್ರಮುಖ ಪಾತ್ರವನ್ನು ಸಹ ವಹಿಸಿ ಕೆಲಸ ನಿರ್ವಹಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದರು, ಈಗ ಚಂದ್ರಯಾನ -3 ಉಡಾವಣೆಯಲ್ಲಿ ಇನ್ನು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಮಿಷನ್ ಕಂಟ್ರೋಲ್ ಸೆಂಟ್ರಲ್‌ನ ಇನ್‌ಚಾರ್ಜ್ ಮತ್ತು ಸಪೋರ್ಟ್ ಸಿಸ್ಟಮ್ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವುದಕ್ಕೆ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಮೋದಿಯಿಂದ ಶ್ಲಾಘನೆ: 2013 ರ ಮಂಗಳಯಾನ ಉಡಾವಣೆಯಲ್ಲಿ ಗುರ್ರಪ್ಪ ರವರು ಪ್ರಮುಖ ಪಾತ್ರ ವಹಿಸಿ ಕೆಲಸ ನಿರ್ವಹಿಸಿದ್ದರು, ಮಂಗಳಯಾನ ಉಡಾವಣೆ ಯಶಸ್ವಿಯಾದ ಸಂದರ್ಭದಲ್ಲಿ ಗುರ್ರಪ್ಪ ರವರನ್ನು ಪ್ರಧಾನಿ ನರೇಂದ್ರ ಮೋದಿ ರವರು ಹಸ್ತಲಾಘವ ಮಾಡಿ ಶ್ಲಾಘಿಸಿದ್ದರು.

ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ರವರು ಚಂದ್ರಯಾನ-3 ರ ಉಡಾವಣೆಯಲ್ಲಿ ಪ್ರಮುಖ ವಿಭಾಗದಲ್ಲಿ ಜವಾಬ್ದಾರಿ ಹೊತ್ತು ಕೆಲಸ ನಿರ್ವಹಿಸುವುದು ಸಂತಸದ ವಿಚಾರವಾಗಿದೆ.
-ಎನ್.ವಿ.ಗಂಗಾಧರಪ್ಪ, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷರು

ಚಂದ್ರಯಾನ-3 ಉಡಾವಣೆ ಕಾರ್ಯದಲ್ಲಿ ಮಹತ್ವ ಪಾತ್ರವನ್ನು ವಹಿಸಿದ ನನ್ನ ಕ್ಷೇತ್ರದ ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ರವರಿಗೆ ಧನ್ಯವಾದಗಳು.
-ಎಸ್.ಎನ್.ಸುಬ್ಬಾರೆಡ್ಡಿ, ಶಾಸಕರು, ಬಾಗೇಪಲ್ಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next