Advertisement
ಪಾವತಿಸುವ ನೆಲ ಸುಂಕವನ್ನು ವ್ಯಾಪಾರಿಗಳಿಗೆ ಹೊರೆಯಾಗದಂತೆ ನಾವೇ ಪಾವತಿಸುವುದಾಗಿ ಶಾಸಕ ರಾದ ಆರಂಭದಲ್ಲಿ ಪ್ರದೀಪ್ ಈಶ್ವರ್ ಘೊಷಿಸಿದ್ದರು. ಆದರೆ ಅದು ಕಾರ್ಯಗತ ಆಗಲೇ ಇಲ್ಲ. ಸದ್ಯ ನಗರಸಭೆ ತನ್ನ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನೆಲ ಸುಂಕ ವಸೂಲಾತಿಗೆ ಬಹಿರಂಗ ಟೆಂಡರ್ ಕರೆದಿದೆ. ಆ ಮೂಲಕ ಇನ್ನು ಮುಂದೆ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಸುಂಕ ಕಟ್ಟುವುದು ಅನಿರ್ವಾಯವಾಗಲಿದೆ. ಈ ಮೊದಲು ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಹಲವು ವರ್ಷಗಳ ಕಾಲ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ತಮ್ಮ ಟ್ರಸ್ಟ್ ಮೂಲಕ ನೆಲ ಸುಂಕ ಪಾವತಿ ಮಾಡಿ ನೆರವಾಗಿದ್ದರು. ಬಳಿಕ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ಬೀದಿ ಬದಿ ವ್ಯಾಪಾರಿಗಳ ನೆಲ ಸುಂಕವನ್ನು ತಾವೇ ಭರಿಸುವುದಾಗಿ ಹೇಳಿದ್ದರು. ಆದರೆ ನಗರಸಭೆಗೆ ಶಾಸಕರ ಕಡೆಯಿಂದ ನೆಲ ಸುಂಕ ಪಾವತಿ ಆಗಿರಲಿಲ್ಲ. ಇದೀಗ ನಗರಸಭೆ ಬಹಿರಂಗ ಹರಾಜು ಕರೆದಿರುವುದು ನಗರದ ಪುಟ್‌ಪಾತ್ ವ್ಯಾಪಾರಿಗಳಲ್ಲಿ ನೆಲ ಸುಂಕ ಕಟ್ಟಬೇಕಾದ ಅನಿರ್ವಾಯತೆ ಇದೆ. ಇನ್ನೂ ನಗರಸಭೆ ಮಾರ್ಗಸೂಚಿ ಪ್ರಕಾರ ನೆಲ ಸುಂಕ ವಸೂಲಿಗೆ ಟೆಂಡರ್ ಕರೆಯುವುದು ಕಡ್ಡಾಯ. ಟೆಂಡರ್ ಮೂಲಕವಾದರೂ ನಗರದ ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Related Articles
Advertisement