ಈ ವರ್ಷದ ಅಕ್ಟೋಬರ್‌ನಲ್ಲಿ ಚಂದ್ರಯಾನ-2 ರೋವರ್ ಉಡಾವಣೆ ಮಾಡುವ ಗುರಿಯನ್ನು ಇಸ್ರೋ ಹಾಕಿಕೊಂಡಿತ್ತು. ತಾಂತ್ರಿಕ ಕಾರಣದಿಂದಾಗ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಆದರೆ ಈ ವಿಳಂಬದಿಂದಾಗಿ ಚಂದ್ರನ ಅಂಗಳಕ್ಕೆ ನೌಕೆ ಕಳುಹಿಸುವ ಪೈಪೋಟಿಯಲ್ಲಿ ಇಸ್ರೇಲ್ ಒಂದು ಹೆಜ್ಜೆ ಮುಂದಿಡುವ ಸಾಧ್ಯತೆಯಿದೆ. ಇಸ್ರೇಲ್‌ನ ಸ್ಪೇಸ್‌ಐಎಲ್ ಸಂಸ್ಥೆಯು ಸ್ಪ್ಯಾರೋ ನೌಕೆಯನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದ್ದು, 2019 ಫೆಬ್ರವರಿ 13 ರಂದು ಚಂದ್ರನಅಂಗಳಕ್ಕೆ ಇಳಿಯಲಿದೆ.
ಹೀಗಾಗಿ ಚಂದ್ರನ ಮೇಲೆ ನೌಕೆಯನ್ನು ಸಾಫ್ಟ್ ಲ್ಯಾಂಡ್ ಮಾಡುವ ನಾಲ್ಕನೇ ದೇಶ ಯಾವುದಾಗುತ್ತದೆ ಎಂಬ ಕುತೂಹಲ ಇದೆ. ಸದ್ಯದ ಬೆಳವಣಿಗೆಯ ಪ್ರಕಾರ ನಾಲ್ಕನೇ ಸ್ಥಾನ ಇಸ್ರೇಲ್ ಪಾಲಾಗುವ ಸಾಧ್ಯತೆಯಿದೆ
Advertisement