Advertisement

ಚಂದ್ರಯಾನ: ಸಂಸದರಿಗೆ ಅವಕಾಶ ನೀಡಿ

12:07 AM Jun 28, 2019 | sudhir |

ಹೊಸದಿಲ್ಲಿ: ಜುಲೈ 15ರಂದು ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಲಿರುವ “ಚಂದ್ರಯಾನ-2′ ರಾಕೆಟ್‌ ಉಡಾವಣೆಯನ್ನು ಪ್ರತ್ಯಕ್ಷವಾಗಿ ನೋಡಲು ಸಂಸದರಿಗೆ ಅವಕಾಶ ಕಲ್ಪಿಸಬೇಕೆಂಬ ಸಲಹೆಯೊಂದನ್ನು ಅಸ್ಸಾಂನ ಕಾಂಗ್ರೆಸ್‌ ಸಂಸದ ರಿಪುನ್‌ ಬೊರಾ ರಾಜ್ಯಸಭೆಯಲ್ಲಿ ಇಟ್ಟಿದ್ದಾರೆ.

Advertisement

ಚಂದ್ರನ ಮೇಲೆ ಭಾರತ ಲಗ್ಗೆ ಇಡುತ್ತಿರುವುದು ಇದೇ ಮೊದಲು. ಇದೊಂದು ಅವಿಸ್ಮರಣೀಯ ಹಾಗೂ ಹೆಮ್ಮೆಯ ವಿಚಾರ. ಹಾಗಾಗಿ, ಈ ಐತಿಹಾಸಿಕ ಸಂದರ್ಭವನ್ನು ದೇಶದ ಸಂಸದರು ಕಣ್ತುಂಬಿಕೊಳ್ಳಲು ಅವಕಾಶ ನೀಡಬೇಕು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಧಾನಮಂತ್ರಿ ಕಚೇರಿಯಲ್ಲಿ ಸಹಾಯಕ ಸಚಿವ ಡಾ| ಜಿತೇಂದ್ರ ಸಿಂಗ್‌, ಈ ಕುರಿತಂತೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ (ಇಸ್ರೋ) ಜತೆಗೆ ಚರ್ಚಿಸಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next