Advertisement
ಲ್ಯಾಂಡ್ ಆದ ಬಳಿಕ ಏನು?ಲ್ಯಾಡಿಂಗ್ ಬಳಿಕ ಆರು ಚಕ್ರಗಳು ಇರುವ ರೋವರ್-ಪ್ರಜ್ಞಾನ್ ಲ್ಯಾಂಡರ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ಪ್ರತ್ಯೇಕಗೊಳ್ಳುವ ಈ ಪ್ರಕ್ರಿಯೆಗೆ ಸುಮಾರು 4 ತಾಸುಗಳು ಬೇಕಾಗುತ್ತದೆ. ಬೇರ್ಪಟ್ಟ ರೋವರ್ ಚಂದ್ರನ ಮೇಲ್ಮೆ„ ಚಿತ್ರಗಳು, ಲಭ್ಯವಿರುವ ಖನಿಜ ಸಂಪನ್ಮೂಲಗಳ ಬಗ್ಗೆ ಪರಿಶೀಲಿಸಲಿದೆ.
ಲ್ಯಾಂಡ್ ಆದ ಬಳಿಕ 6 ಚಕ್ರಗಳ, ಸುಮಾರು 20 ಕೆ.ಜಿ. ಭಾರವಿರುವ ರೋವರ್, ಲ್ಯಾಂಡರ್‌ನಿಂದ ನಿಧಾನವಾಗಿ ಬೇರ್ಪಟ್ಟು ಚಂದ್ರನ ಮೇಲ್ಮೆ„ಯಲ್ಲಿ 100-200 ಮೀಟರ್ ದೂರ ಕ್ರಮಿಸಿಸುತ್ತದೆ. ಬಳಿಕ ಅಲ್ಲಿ ಓಡಾಡಿ 15 ನಿಮಿಷಗಳ ಒಳಗೆ ಆರ್ಬಿಟರ್ ಮೂಲಕ ಭೂಮಿಗೆ ತಾನು ಸಂಗ್ರಹಿಸಿದ ಡೇಟಾ ಮತ್ತು ಫೋಟೋಗಳನ್ನು ರವಾನಿಸುತ್ತದೆ. ಇದು ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸಲಿದೆ. ರೋವರ್‌ನ ಚಕ್ರದಲ್ಲಿದೆ ಅಶೋಕ ಚಕ್ರ
ರೋವರ್‌ನ ಹಿಂಬದಿಯ ಚಕ್ರಗಳ ಪೈಕಿ ಒಂದರಲ್ಲಿ ರಾಷ್ಟ್ರೀಯ ಚಿಹ್ನೆ ಅಶೋಕ ಚಕ್ರ ಮತ್ತು ಮತ್ತೂಂದು ಚಕ್ರದಲ್ಲಿ ಇಸ್ರೋದ ಲೊಗೋ ಚಿತ್ರಿಸಲಾಗಿದೆ. ಚಂದ್ರನ ಮೇಲೆ ಓಡಾಡಿದ ಅಚ್ಚು ದೀರ್ಘಕಾಲ ಉಳಿಯುವ ಸಾಧ್ಯತೆ ಇರುವುದರಿಂದ ಭಾರತದ ಅಶೋಕ ಚಕ್ರ ಮತ್ತು ಇಸ್ಟೋದ ಲಾಂಛನ ಚಂದ್ರನ ಮೇಲೆ ಅಚ್ಚಾಗಲಿದೆ. ಈ ಮೂಲಕ ಚಂದ್ರನ ಮೇಲೆ ಭಾರತದ ಗುರುತು ಶಾಶ್ವತವಾಗಿ ಉಳಿದುಕೊಳ್ಳಲಿದೆ.
Related Articles
ಚಂದ್ರನ ಮೇಲೆ ನೌಕೆಯು ಸಾಫ್ಟ್ ಲ್ಯಾಂಡ್ ಆಗುವುದು ಅತ್ಯಂತ ಕಠಿನ ಸವಾಲಾಗಿದೆ. ನೇವಿಗೇಶನ್, ನಿಯಂತ್ರಣ ಮೊದಲಾದ ವ್ಯವಸ್ಥೆಗಳು ಹೊಂದಾಣಿಕೆಯಿಂದ ಸ್ವಯಂಚಾಲಿತವಾಗಿ ಕೆಲಸ ಮಾಡಬೇಕಾಗುತ್ತದೆ. ರೋವರ್ ಮತ್ತು ಲ್ಯಾಂಡರ್‌ನೊಂದಿಗೆ ಸಂಪರ್ಕ ಏರ್ಪಡುವಾಗ ದುರ್ಬಲ ರೆಡಿಯೋ ಸಿಗ್ನಲ್ ಎದುರಾಗುವ ಸಾಧ್ಯತೆ ಇದೆ.
Advertisement
ಚಂದ್ರನಲ್ಲಿರುವ ಧೂಳು ಲ್ಯಾಂಡರ್ ಮತ್ತು ರೋವರ್ ಕೆಲಸಕ್ಕೆ ಅಡ್ಡಿಯಾಗಬಹುದು. ಸೂರ್ಯನ ಶಕ್ತಿಯಿಂದ ಕೆಲಸ ಮಾಡುವ ವೇಳೆ ಬ್ಯಾಟರಿಗಳು ತೇವಾಂಶಕ್ಕೆ ಒಳಗಾದರೆ ಇಡೀ ವ್ಯವಸ್ಥೆಯೇ ಸ್ತಬ್ಧವಾಗಬಹುದು. ಆದರೆ ಈ ಎಲ್ಲಾ ಸವಾಲನ್ನು ಇಸ್ರೋ ಮೆಟ್ಟಿ ನಿಲ್ಲಲಿದೆ.
ಗುರುತ್ವ ಬಲ ಕಡಿಮೆಭೂಮಿಗೆ ಹೋಲಿಸಿದರೆ ಚಂದ್ರನಲ್ಲಿ ಗುರುತ್ವಾಕರ್ಷಣೆ ತೀರಾ ಕಡಿಮೆ ಇದೆ. ಒಟ್ಟು ಬಲದ ಶೇ. 1/6ರಷ್ಟು ಇದೆ. ಅಂದರೆ ಒಂದು ಸೆಕೆಂಡ್‌ಗೆ 1.6 ಮೀಟರ್‌ಗಳ ಬಲಕ್ಕೆ ಸಮ. ಭೂಮಿಯ ಒಟ್ಟು ಗುರುತ್ವ ಬಲದ 16.6ರಷ್ಟಿದೆ. ದಕ್ಷಿಣ ಧ್ರುವದತ್ತ ಯಾಕೆ?
ಚಂದ್ರನ ದಕ್ಷಿಣ ಧ್ರುವದತ್ತ ಈ ತನಕ ಯಾವುದೇ ರಾಷ್ಟ್ರ ಮುಂದಡಿ ಇಟ್ಟಿಲ್ಲ. ಭಾರತ ಇದೀಗ ಯಾರು ಮುಟ್ಟದ ಜಾಗದತ್ತ ತನ್ನ ಸಾಹಸವನ್ನು ನೆಟ್ಟಿದೆ. ದಕ್ಷಿಣದಲ್ಲಿನ ಎರಡು ಕುಳಿಗಳ ಮಧ್ಯೆ ನೌಕೆ ಇಳಿಯಲಿದೆ. ಈ ಹಿಂದಿನ ರಾಷ್ಟ್ರಗಳು ಕಳುಹಿಸಿದ್ದ ನೌಕೆಗಳು ಸಮಭಾಜಕ ರೇಖೆ ಬಳಿ ಇಳಿದಿದ್ದವು. ಅವುಗಳಲ್ಲಿ ಕೆಲವು ಯಶಸ್ವೀಯಾಗಿತ್ತು. ಚಂದ್ರನ ಮೇಲಿನ ಭಾಗ ಅಥವ ಉತ್ತರ ದಿಕ್ಕಿನ ಬಹುತೇಕ ಮಾಹಿತಿಗಳು ನಮ್ಮಲ್ಲಿದ್ದರೂ, ದಕ್ಷಿಣ ದ ಸ್ಥಿತಿಗತಿಗಳ ಕುರಿತು ಯಾವುದೇ ಚಿತ್ರಣ ಇಲ್ಲ. ಈ ಸಾಧ್ಯತೆಯನ್ನು ಆವಿಷ್ಕರಿಸಲು ಭಾರತ ತನ್ನ ನೌಕೆಯನ್ನು ಇಳಿಸಲಿದೆ. ನಾಲ್ಕನೇ ದೇಶವಾಗಿ ರೋವರ್ ಇಳಿಸಲಿರುವ ಭಾರತ
ಈ ತನಕ ಚಂದ್ರನಲ್ಲಿ ಸೋವಿಯತ್ ರಷ್ಯಾ, ಅಮೆರಿಕ ಮತ್ತು ಚೀನ ದೇಶಗಳು ರೋವರ್ ಇಳಿಸಿದೆ. 1970ರ ನವೆಂಬರ್ 17ರಂದು ರಷ್ಯಾ ಮೊತ್ತಮೊದಲ ಬಾರಿ ರಿಮೋಟ್ ಚಾಲಿತ ರೋಬೋಟ್ ಇಳಿಸಿತ್ತು. ಇದನ್ನುಲುನೋಖೋದ್ ಎಂದು ಕರೆದಿತ್ತು. ಬಳಿಕ ಅಮೆರಿಕ ಮತ್ತು ಚೀನ ಈ ಸಾಧನೆಗೈದಿತ್ತು. ಭಾರತ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಲ್ಯಾಂಡ್ ಆದ ಬಳಿಕ ಏನು?
ಚಂದ್ರನ ಮೇಲೆ ಇಳಿಯುವ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿನ ಹಲವು ಮಾಹಿತಿಗಳನ್ನು ಕಲೆಹಾಕಲಿದೆ. ಚಂದ್ರನಲ್ಲಿನ ಚಿತ್ರಗಳನ್ನು ತೆಗೆದು ರವಾನಿಸಲಿದೆ. ಅತ್ಯಾಧುನಿಕ ಕೆಮರಾ?
ಚಂದ್ರನ ಮೇಲಿರುವ ಕುಳಿಗಳು ಅಥವ ಖನಿಜಗಳ ಮಾಹಿತಿಯನ್ನು ಸಂಗ್ರಹಿಸಲು ಅತ್ಯಾಧುನಿಕ ಕೆಮರಾಗಳನ್ನು ನೌಕೆಯಲ್ಲಿ ಅಳವಡಿಸಲಾಗಿದೆ. 2024ರ ಸುಮಾರಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಮಾನವ ಸಹಿತ ಚಂದ್ರಯಾನವನ್ನು ಮಾಡಲಿದ್ದು, ಅದಕ್ಕೆ ಪೂರಕವಾದ ಮಾಹಿತಿಯನ್ನು ಭಾರತದ ಚಂದ್ರಯಾನ ಯೋಜನೆ ಒದಗಿಸಲಿದೆ. ಇದರ ಜೀವಿತಾವಧಿ
ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಇದರ ಜೀವಿತಾವಧಿ ಕೇವಲ ಒಂದು ಚಂದ್ರ ದಿನ ಮಾತ್ರ. ಒಂದು ಚಂದ್ರ ದಿನ ಎಂದರೆ 14 ದಿನಗಳು. 14 ದಿನ ಯಾಕೆ?
ಚಂದ್ರನಲ್ಲಿರುವ ಉಷ್ಣತೆಯು ದೊಡ್ಡ ಸವಾಲು ಎಂದು ಹೇಳಲಾಗುತ್ತಿದೆ. ಹಗಲು ಅಂದರೆ ಸೂರ್ಯ ಇರುವ ಸಮಯ ಚಂದ್ರನ ಉಷ್ಣಾಂಶವು 107 ಡಿ.ಸೆ. ದಾಟಲಿದೆ. ರಾತ್ರಿ ಅದು 153 ಡಿಗ್ರಿಗೆ ಕುಸಿಯುತ್ತದೆ. ನೌಕೆಯಲ್ಲಿ ಹೊಂದಿಸಲಾಗಿರುವ ಬ್ಯಾಟರಿಗಳು ಸೂರ್ಯನ ಬೆಳಕಿನ ಸಹಾಯದಿಂದ ಚಾರ್ಚ್ ಆಗುತ್ತವೆ. ಚಂದ್ರನ ಅತ್ಯಂತ ಶೀತದ ಸುದೀರ್ಘ ರಾತ್ರಿಗಳಲ್ಲಿ ತಣ್ಣಗಿನ ವಾತಾವರಣ ಇರುವುದರಿಂದ ಮುಖ್ಯವಾಗಿ ಬ್ಯಾಟರಿ ಸೇರಿದಂತೆ ಇತರ ತಂತ್ರಾಂಶದ ಬಾಳಿಕೆಯನ್ನು ಕನಿಷ್ಠ 14 ದಿನಗಳು ಎಂದು ನಿಗದಿಮಾಡಲಾಗಿದ್ದು, ಇದರ ಒಳಗೆ ಚಟುವಟಿಕೆ ಮಾಡಲಿದೆ. – ಬೆಳಗ್ಗೆ 1.44 ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ತೊಡಗುತ್ತದೆ. – ಬೆಳಗ್ಗೆ 1.55 ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ವಿಕ್ರಂ ಇಳಿಯಲಿದೆ. – ಬೆಳಗ್ಗೆ 5.30-6.30 ಚಂದ್ರನ ಮೇಲ್ಮೈ ಮೇಲೆ ಓಡಾಡಿ ಮಾಹಿತಿ ಸಂಗ್ರಹಿಸಲಿರುವ ರೋವರ್ ಪ್ರಗ್ಯಾನ್.