Advertisement
ಯೋಜನೆಯ ಪ್ರಮುಖ ಹಂತಗಳುಯೋಜನೆಯ ಮೊದಲ ಹೆಜ್ಜೆಯಾಗಿ ಬಾಹ್ಯಾಕಾಶ ನೌಕೆ ಹೊತ್ತ ಉಡಾವಣ ವಾಹನವು ನಭಕ್ಕೆ ಹಾರಲಿದೆ. ಅನಂತರ ಚಂದ್ರನ ಕಕ್ಷಗೆ ತಲುಪಿ, ಚಂದ್ರನ ಮೇಲ್ಮೆ„ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಎರಡನೇ ಹಂತದಲ್ಲಿ ಪರೀಕ್ಷಾರ್ಥವಾಗಿ ಚಂದ್ರನಲ್ಲಿರುವ ಶಿಲೆಯ ಮಾದ ರಿಯನ್ನು ಸಂಗ್ರಹಿಸಲಿದೆ. ಮೂರನೇ ಹಂತದಲ್ಲಿ ಅದನ್ನು ಹೊತ್ತ ಬಾಹ್ಯಾಕಾಶ ನೌಕೆಯು ಪುನಃ ಭೂಮಿಯ ಕಡೆಗೆ ಪ್ರಯಾಣ ಬೆಳೆಸಲಿದೆ. ನಾಲ್ಕನೇ ಹಂತದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಲಿರುವ ನೌಕೆಯು, ಇಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.
ಇತ್ತೀಚೆಗೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರ ಪ್ರೊಪಲÒನ್ ಮಾಡ್ನೂಲ್ ಅನ್ನು ಚಂದ್ರನ ಕಕ್ಷೆಯಿಂದ ಯಶಸ್ವಿಯಾಗಿ ಭೂಮಿಯ ಕಕ್ಷಗೆ ರವಾನಿಸಿದ್ದಾರೆ. ಈ ಪ್ರಯೋಗದಿಂದ ಉತ್ತೇಜನಗೊಂಡಿರುವ ಇಸ್ರೋ, ಚಂದ್ರಯಾನ-4ಕ್ಕೆ ಅಣಿಯಾಗುತ್ತಿದೆ. ಚಂದ್ರಯಾನ-4 ಮುಖ್ಯ ಉದ್ದೇಶ
ಚಂದ್ರಯಾನ-4ರ ಮುಖ್ಯ ಗುರಿಯು ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವುದು. ಚಂದ್ರನ ಅಂಗಳದಲ್ಲಿರುವ ಶಿಲೆಯ ಮಾದ ರಿಗಳನ್ನು ಸಂಗ್ರಹಿಸಿ, ಅವುಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯು ಪುನಃ ಭೂಮಿಗೆ ಸುರಕ್ಷಿತವಾಗಿ ಮರಳುವುದಾಗಿದೆ. ಅನಂತರ ಈ ಮಾದರಿಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಇದಿಷ್ಟೇ ಅಲ್ಲದೆ, ಗಗನಯಾನಿಗಳನ್ನೂ ಕರೆದೊಯ್ದು ವಾಪಸ್ ಕರೆತರುವ ಸಾಧ್ಯತೆ ಬಗ್ಗೆ ಇಸ್ರೋ ಪರಿಶೀಲಿಸುತ್ತಿದೆ.