Advertisement

Chandrayaan-4 Project; 350 ಕೆ.ಜಿ. ಹೊತ್ತೊಯ್ಯಬಲ್ಲ ಹೊಸ ಲ್ಯಾಂಡರ್‌ ತಯಾರಿ!

01:48 AM Oct 28, 2024 | Team Udayavani |

ಹೊಸದಿಲ್ಲಿ: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-4 ಯೋಜನೆಗಾಗಿ ಹೊಸ ಲ್ಯಾಂಡರ್‌ ಮತ್ತು ಪ್ರೊಪಲ್ಶನ್‌ ವ್ಯವಸ್ಥೆಯನ್ನು ತಯಾರು ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ಬಳಸುವ ರೋವರ್‌ 350 ಕೆ.ಜಿ. ತೂಕವಿದ್ದು, ಇದನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಲ್ಯಾಂಡರ್‌ ಆವಶ್ಯಕತೆ ಇದೆ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

Advertisement

ಈ ಯೋಜನೆಯನ್ನು ಜಪಾನ್‌ ಜತೆ ಸೇರಿ ಭಾರತ ಕೈಗೊಳ್ಳುತ್ತಿದ್ದು, ಚಂದ್ರ ನಿಂದ ಮಾದರಿಯನ್ನು ಭೂಮಿಗೆ ತರುವ ಯೋಜನೆ ಇದಾಗಿದೆ. ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌, “ನಾವು ಶಕ್ತಿಶಾಲಿಯಾದ ಲ್ಯಾಂಡರ್‌ ತಯಾರು ಮಾಡುತ್ತಿದ್ದೇವೆ. ಇದರೊಂದಿಗೆ ಹೊಸ ಪ್ರೊಪಲÒನ್‌ ಟ್ಯಾಂಕ್‌, ಸ್ಟೀರಿಯೋ ನಿಯಂತ್ರಣ ವ್ಯವಸ್ಥೆ, ಲ್ಯಾಂಡಿಂಗ್‌ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡುತ್ತಿದ್ದೇವೆ’ ಎಂದರು.

ಇಸ್ರೋದ ಮುಂಬರುವ ಯೋಜನೆಗಳು
ಮಾನವ ಸಹಿತ ಗಗನಯಾನ (ಮೊದಲ ಹಂತ) – 2026
ಚಂದ್ರನಿಂದ ಮಾದರಿ ತರುವ ಯೋಜನೆ – 2028
ಶುಕ್ರ ಗ್ರಹದ ಅಧ್ಯಯನ ಯೋಜನೆ – 2028
ಮಾನವ ಸಹಿತ ಚಂದ್ರಯಾನ ಯೋಜನೆ- 2040

Advertisement

Udayavani is now on Telegram. Click here to join our channel and stay updated with the latest news.

Next