Advertisement

ISRO: ಜು.13ರಂದು ಚಂದ್ರಯಾನ-3: ಬಹುನಿರೀಕ್ಷಿತ ಯೋಜನೆಗೆ ದಿನ ನಿಗದಿ

12:32 AM Jun 29, 2023 | Team Udayavani |

ದೇಶದ ಹೆಮ್ಮೆಯ ಇಸ್ರೋ ಮತ್ತೂಂದು ಸಾಹಸಕ್ಕೆ ಸಜ್ಜಾಗಿದೆ. ಬಹುನಿರೀಕ್ಷಿತ ಚಂದ್ರಯಾನ-3ನ್ನು ಜು.13ರಂದು ಕೈಗೊಳ್ಳಲಾಗುತ್ತದೆ. 2019ರಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-2 ಕೊನೆಯ ಹಂತದಲ್ಲಿ ಕಕ್ಷೆಯನ್ನು ಸೇರಿದ್ದರೂ ನಿಗದಿಯಾಗಿದ್ದಂತೆ “ವಿಕ್ರಂ” ಲ್ಯಾಂಡರ್‌ ಅಲ್ಲಿ ಇಳಿಯಲು ಸಾಧ್ಯವಾಗಿರಲಿಲ್ಲ. ಈಗ ಹೊಸ ಯೋಜನೆಯಲ್ಲಿ ಚಂದ್ರನ ದಕ್ಷಿಣ ಭಾಗದ ಅಧ್ಯಯನಕ್ಕೆ ಸಿದ್ಧತೆ ನಡೆಸಲಾಗಿದೆ.

Advertisement

ಯೋಜನೆ ಉದ್ದೇಶವೇನು?
~ ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಲ್ಯಾಂಡರ್‌ ಇಳಿಕೆ.
~ ರೋವರ್‌ ಅನ್ನು ಚಂದ್ರನಲ್ಲಿ ಸಂಚ ರಿಸುವಂತೆ ಮಾಡುವುದು.
~ ದಕ್ಷಿಣ ಭಾಗದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಇಳಿಕೆ. ಈ ಮೂಲಕ ಭಾರತಕ್ಕೆ ಕೂಡ ಅಂಥ ಸಾಮರ್ಥ್ಯ ಇದೆ ಎಂದು ಸಾಬೀತುಪಡಿಸುವುದು.

ವಿಶೇಷತೆ ಏನು?
~ ಚಂದ್ರಯಾನ-2ರಲ್ಲಿ ಬಳಕೆ ಮಾಡಿದ್ದ ವಿಕ್ರಂ ಲ್ಯಾಂಡರ್‌ನಂತೆಯೇ ಇರಲಿದೆ ಹೊಸ ಯೋಜನೆಯ ಲ್ಯಾಂಡರ್‌.
~ ಹೊಸ ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗ.
~ ಪ್ರೊಪಲ್ಶನ್‌ ಮಾಡ್ಯುಲ್‌, ಲ್ಯಾಂಡರ್‌ ಮತ್ತು ರೋವರ್‌ ಕಾನ್ಫಿಗರೇಶನ್‌ ಅನ್ನು ಚಂದ್ರನ ಮೇಲ್ಮೆ „ಯಲ್ಲಿ 100 ಕಿ.ಮೀ. ವರೆಗೆ ಸಾಗಿಸುತ್ತದೆ.
~ ಪ್ರೊಪಲ್ಶನ್‌ ಮಾಡ್ಯುಲ್‌ ಅನ್ನು ಸಂಪರ್ಕ ಸಾಧಿಸುವ ವ್ಯವಸ್ಥೆಯಂತೆ ವಿನ್ಯಾಸಗೊಳಿಸಿರುವುದು.
~ ಭೂಮಿಯಿಂದ ಹೊರಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಮೇಲ್ಮೆ„ಯಿಂದ ಅಧ್ಯಯನ.

ಎಲ್ಲಿಂದ ಉಡಾವಣೆ?
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕೇಶ ಕೇಂದ್ರ

ಉಡಾವಣ ವಾಹಕ
ಜಿಯೋ ಸಿಂಕ್ರೊನಸ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌- ಮಾರ್ಕ್‌ 3.

Advertisement

ಯೋಜನೆ ವೆಚ್ಚ–  615 ಕೋಟಿ ರೂ.

ಉಡಾವಣೆ: ಜು.13 ಗುರುವಾರ ಮಧ್ಯಾಹ್ನ 2.30 ಗಂಟೆಗೆ

Advertisement

Udayavani is now on Telegram. Click here to join our channel and stay updated with the latest news.

Next