Advertisement

Chandrayaan-3 ಚಂದ್ರನಿಂದ ಕೇವಲ 177 ಕಿ.ಮೀ. ದೂರದಲ್ಲಿದೆ

12:27 AM Aug 15, 2023 | Team Udayavani |

ಹೊಸದಿಲ್ಲಿ: ಜು.14ಕ್ಕೆ ಶ್ರೀಹರಿಕೋಟಾದಿಂದ ಹೊರಟ ಚಂದ್ರಯಾನ-3 ನೌಕೆ ಆ.23ಕ್ಕೆ ಚಂದ್ರನ ಲ್ಲಿಳಿಯುವ ನಿರೀಕ್ಷೆಯಿದೆ.

Advertisement

ವಿಶೇಷವೆಂದರೆ ಚಂದ್ರ ಯಾನ-3 ನೌಕೆ, ಚಂದ್ರನ ಮೇಲ್ಪದರದಿಂದ ಪ್ರಸ್ತುತ ಕೇವಲ 177 ಕಿ.ಮೀ. ದೂರದಲ್ಲಿದೆ. ಕಕ್ಷೆ ಎತ್ತರಿ ಸುವ ಮತ್ತೂಂದು ಹಂತದ ಪ್ರಕ್ರಿಯೆಯು ಸೋಮವಾರ ನೆರವೇರಿದ್ದು, ನೌಕೆಯು ಈಗ ಚಂದಿರನಿಗೆ ಮತ್ತಷ್ಟು ಹತ್ತಿರವಾಗಿದೆ. ಆ.16ಕ್ಕೆ ಇಸ್ರೋ ಇನ್ನೊಂದು ಸುತ್ತಿನ ಕಾರ್ಯಾಚರಣೆ ನಡೆಸಲಿದೆ. ಆಗ ನೌಕೆಯು ಚಂದ್ರನ ಮೇಲ್ಪದರಕ್ಕೆ ಮತ್ತಷ್ಟು ಸನಿಹ ತಲುಪಲಿದೆ.

ಚಂದ್ರನ ಮೇಲೆ ಚಂದ್ರಯಾನ-3 ನೌಕೆಯಲ್ಲಿರುವ ರೋವರ್‌ ಅನ್ನು ಯಶಸ್ವಿಯಾಗಿಳಿಸುವುದು ಇಸ್ರೋ ದ ಮೊದಲ ಗುರಿ. ಅನಂತರ ಚಂದ್ರನ ಮೇಲ್ಮೆ„ ಯ ನ್ನು ಅಲ್ಲಿಂದ ಬರುವ ಮಾಹಿತಿಗಳ ಆಧಾರದಲ್ಲಿ ಅಧ್ಯಯನ ನಡೆಸಲಿದೆ. ಚಂದ್ರಯಾನ-1ರ ಮೂಲಕ ಇಸ್ರೋ ಆ ಗ್ರಹದಲ್ಲಿ ನೀರಿದೆ ಎಂದು ಕಂಡು ಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next