Advertisement
“ಚಂದ್ರಯಾನ-3 ಯೋಜನೆಯ ಗುರಿಯನ್ನು ಯಶ್ವಸಿಯಾಗಿ ಮುಟ್ಟಿದ್ದೇವೆ. ಅಲ್ಲದೇ ವಿಜ್ಞಾನಿಗಳು ನಡೆಸಿದ ಪ್ರಯೋಗದಲ್ಲಿ ಚಂದ್ರಯಾನ-3 ನೌಕೆಯೊಂದಿಗೆ ಕಳುಹಿಸಲ್ಪಟ್ಟಿದ್ದ ಪ್ರೊಪಲ್ಶನ್ ಮಾಡ್ನೂಲ್ ಅನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ತರಲಾಗಿದೆ. ಆರ್ಬಿಟ್ ರೈಸಿಂಗ್ ಮ್ಯಾನೆವರ್ ಮತ್ತು ಟ್ರಾನ್ಸ್ ಅರ್ಥ್ ಇಂಜೆಕ್ಷನ್ ಮ್ಯಾನೆವರ್‌ಗಳು ಪ್ರೊಪಲ್ಶನ್ ಮಾಡ್ನೂಲ್ ಅನ್ನು ಭೂಮಿಯ ಕಕ್ಷೆಗೆ ತಂದು ನಿಲ್ಲಿಸಿವೆ’ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.
ವಾಷಿಂಗ್ಟನ್: ಭಾರತದ ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ವಿಶ್ವದ ಚಿತ್ತವೆಲ್ಲ ಚಂದ್ರನತ್ತ ನೆಟ್ಟಿದ್ದು, ಇದೀಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಖಾಸಗಿ ಉಪಕ್ರಮದ ಭಾಗವಾಗಿರುವ ನೌಕೆಯೊಂದು ಚಂದ್ರನನ್ನು ತಲುಪಲು ಸಜ್ಜುಗೊಂಡಿದೆ. ಅಲ್ಲದೇ ಈ ಮೂಲಕ ಚಂದ್ರನಲ್ಲಿಗೆ ತಲುಪಿದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ಎಂಬ ಗರಿಯನ್ನೂ ಮುಡಿಗೇರಿಸಿಕೊಳ್ಳಲು ಸಿದ್ದವಾಗಿದೆ. ನಾಸಾದ ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವೀಸಸ್ ಉಪಕ್ರಮದ ಭಾಗವಾಗಿ ಪೆರಿಗ್ರಿನ್ ಎನ್ನುವ ಖಾಸಗಿ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಲು ಯೋಜಿಸಲಾಗಿದೆ. ಇದಕ್ಕಾಗಿ ಡಿ.24ರಂದು ಉಡಾವಣೆ ದಿನಾಂಕವನ್ನೂ ನಿಗದಿ ಮಾಡಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ 2024ರ ಜನವರಿ 25ರಂದು ಲ್ಯಾಂಡರ್ ಚಂದ್ರನ ಮೇಲಿಳಿಯಲಿದೆ. ಈ ಮೂಲಕ ಚಂದ್ರನಲ್ಲಿಗೆ ತಲುಪಿದ ಖಾಸಗಿ ಕ್ಷೇತ್ರದ ಮೊದಲ ಲ್ಯಾಂಡರ್ ಎಂಬ ಇತಿಹಾಸ ಸೃಷ್ಟಿಸುವುದರ ಜತೆಗೆ ಪರಿಗ್ರಿನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ರೇಸ್ ಸೃಷ್ಟಿ ಮಾಡಲಿದೆ.