Advertisement

ಚಂದ್ರಯಾನ 2: ಕಕ್ಷೆ ಮರು ಹೊಂದಾಣಿಕೆ ಯಶಸ್ವಿ

11:16 PM Aug 28, 2019 | Team Udayavani |

ಹೊಸದಿಲ್ಲಿ: ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ-2ರ ಆಕಾಶಕಾಯವನ್ನು ಕಕ್ಷೆಗೆ ಸರಿಹೊಂದಿಸುವ‌ ಕೆಲಸವನ್ನು 3ನೇ ಬಾರಿಯೂ ಯಶಸ್ವಿಯಾಗಿ ಮುಗಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಆ. 28ರ ಬೆಳಗ್ಗೆ 9 ಗಂಟೆ 4 ನಿಮಿಷಕ್ಕೆ, ಆಕಾಶಕಾಯದಲ್ಲಿರುವ ಇಂಜಿನ್‌ಅನ್ನು 1190 ಸೆ. ಕಾಲ ಚಾಲನೆ ಮಾಡಿ ಉಪಗ್ರಹವನ್ನು ಕಕ್ಷೆಗೆ ಮರು ಹೊಂದುವಂತೆ ಮಾಡಲಾಯಿತು ಎಂದು ಇಸ್ರೋ ಹೇಳಿದೆ. ಆಕಾಶಕಾಯದ ಎಲ್ಲಾ ಪರಿಕರಗಳೂ ಉತ್ತಮವಾಗಿ ಕೆಲಸ ಮಾಡುತ್ತಿವೆ. ಆ. 30ರಂದು ಸಂಜೆ 7 ಗಂಟೆ ಸುಮಾರಿಗೆ ಮತ್ತೂಮ್ಮೆ ಪ್ರಕ್ರಿಯೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next