Advertisement

2ನೇ ಹಂತದ ಕಕ್ಷೆಗೆ ಚಂದ್ರಯಾನ-2 ನೌಕೆ

12:36 AM Jul 27, 2019 | mahesh |
ಹೊಸದಿಲ್ಲಿ: ಚಂದ್ರಯಾನ -2ರ ಯೋಜನೆಯ ಅಂಗವಾಗಿ ಹಾರಿಬಿಡಲಾಗಿರುವ ಗಗನನೌಕೆಯನ್ನು ಈವರೆಗೆ ಇದ್ದ ಕಕ್ಷೆಯಿಂದ ಉನ್ನತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಜು. 25ರ ಮಧ್ಯರಾತ್ರಿ 1:03 ನಿಮಿಷಕ್ಕೆ ಸರಿಯಾಗಿ, ಗಗನ ನೌಕೆಯಲ್ಲಿನ ಇಂಜಿನ್‌ ಅನ್ನು 15 ನಿಮಿಷಗಳ ಕಾಲ ಚಾಲನೆಗೊಳಿಸುವ ಮೂಲಕ 251 X 5 4,829 ಕಿ.ಮೀ. ಕಕ್ಷೆಗೆ ಏರಿಸಲಾಯಿತು. ಜು. 24ರಂದು ಗಗನನೌಕೆಯ ಕಕ್ಷೆಯನ್ನು ಮೊದಲ ಹಂತಕ್ಕೇರಿಸಲಾಗಿತ್ತು. ಜು. 29ರಂದು, ಮೂರನೇ ಹಂತದ ಕಕ್ಷೆಗೆ ಏರಿಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಸಮ್ಮಾನಕ್ಕೆ ನಿರ್ಧಾರ: ಚಂದ್ರಯಾನ-2 ನಿರ್ದೇಶಕಿ ರಿತು ಕರಿದಾಳ್‌ರನ್ನು ಸಮ್ಮಾನಿಸಲು ಲಕ್ನೋ ವಿಶ್ವವಿದ್ಯಾಲಯ ನಿರ್ಧರಿಸಿದೆ. ‘ಚಂದ್ರಯಾನ-2’ರಲ್ಲಿ ಇರುವ ಇಬ್ಬರೇ ಮಹಿಳಾ ವಿಜ್ಞಾನಿಗಳಲ್ಲಿ ರಿತೂ ಒಬ್ಬರಾಗಿದ್ದು, ಲಕ್ನೋ ವಿವಿಯ ಮಾಜಿ ವಿದ್ಯಾರ್ಥಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next