Advertisement

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

10:24 PM May 08, 2024 | Team Udayavani |

ಪಣಜಿ: ತಾವು ಕಷ್ಟ ಪಟ್ಟಂತೆ ತಮ್ಮ ಮಕ್ಕಳು ಕಷ್ಟಪಡಬಾರದೆಂದು ಹೆತ್ತವರು ಅವಿರತ ದುಡಿದು ಹಣ, ಆಸ್ತಿ ಸಂಪಾದಿಸುತ್ತಾರೆ. ಆದರೆ, ವ್ಯಕ್ತಿಯೊಬ್ಬರು ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಕೂಡಿಟ್ಟ 3 ಕೋಟಿ ರೂ. ಹಣ ಅಮಾನ್ಯವಾಗಿದೆ!

Advertisement

ಗೋವಾದ ಮಾಪ್ಸಾದಲ್ಲಿ ಇಂಥ ಅಪರೂಪದ ಘಟನೆ ನಡೆದಿದೆ. ಬ್ಯಾಂಕ್‌ ಲಾಕರ್‌ನಲ್ಲಿ ಪಾಲಕರು ಕೂಡಿಟ್ಟಿದ್ದ 500 ಹಾಗೂ 1000 ರೂ. ಮುಖಬೆಲೆಯ ಸುಮಾರು 3 ಕೋಟಿ ರೂ. ಮಕ್ಕಳಿಗೆ ಸಿಗದೆ ವ್ಯರ್ಥವಾಗಿದೆ. ನೋಟು ಅಮಾನ್ಯಿàಕರಣದಿಂದ ಈ ಹಣಕ್ಕೆ ಈಗ ಬೆಲೆಯೇ ಇಲ್ಲವಾಗಿದ್ದು, ಹೆತ್ತವರು ಕೂಡಿಟ್ಟ ಹಣದಲ್ಲಿ ಒಂದು ಪೈಸೆ ಕೂಡ ಮಕ್ಕಳಿಗೆ ಸಿಗದಂತಾಗಿದೆ. ಲಾಕರ್‌ಗಳಲ್ಲಿ ಹಣ ನೋಡಿ ಬ್ಯಾಂಕ್‌ ಅಧಿ ಕಾರಿಗಳೂ ಗೊಂದಲಕ್ಕೀಡಾಗಿದ್ದಾರೆ.

ಮೂರು ಲಾಕರ್‌ನಲ್ಲಿ ಹಣ:
ಗೋವಾದ ಬಾರದೇಸ್‌ ತಾಲೂಕಿನ ವ್ಯಕ್ತಿಯೊಬ್ಬರು 12 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರ ಪತ್ನಿ ಮೊದಲೇ ತೀರಿ ಹೋಗಿದ್ದರು. ಮಕ್ಕಳು ವಿದೇಶದಲ್ಲಿದ್ದರು. ಈ ದಂಪತಿ ಮಾಪ್ಸಾದ ಬ್ಯಾಂಕ್‌ನಲ್ಲಿ ಮೂರು ಲಾಕರ್‌ಗಳನ್ನು ತೆರೆದು ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಅಪಾರ ಪ್ರಮಾಣದ ಹಣ ಇರಿಸಿದ್ದರು. ಎರಡು ಲಾಕರ್‌ಗಳನ್ನು ತನ್ನ ಹೆಸರಿನಲ್ಲಿದ್ದರೆ, ಇನ್ನೊಂದನ್ನು ಪತ್ನಿ ಹೆಸರಿನಲ್ಲಿತ್ತು. ಪತ್ನಿ ನಿಧನದ ನಂತರ ಆ ಲಾಕರ್‌ನ್ನು ಕೂಡ ಇವರೇ ನಿರ್ವಹಿಸುತ್ತಿದ್ದರು.

12 ವರ್ಷದ ಬಳಿಕ ಲಾಕರ್‌ ಓಪನ್‌:
ತಂದೆ ತೀರಿ ಹನ್ನೆರಡು ವರ್ಷಗಳ ಬಳಿಕ ಮಕ್ಕಳು ವಿದೇಶದಿಂದ ಆಗಮಿಸಿ ಗೋವಾದಲ್ಲಿನ ಆಸ್ತಿ ಮಾರಲು ನಿರ್ಧರಿಸಿದ್ದರು. ತಂದೆ-ತಾಯಿ ವಾಸವಿದ್ದ ಮನೆಯ ಪರಿಶೀಲನೆ ವೇಳೆ ಮಕ್ಕಳಿಗೆ ಬ್ಯಾಂಕ್‌ ದಾಖಲೆ, ಲಾಕರ್‌ ಕೀಗಳು ಸಿಕ್ಕಿವೆ. ನಂತರ ಮಕ್ಕಳು ಸಂಬಂಧಪಟ್ಟ ಬ್ಯಾಂಕ್‌ ಅ ಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬ್ಯಾಂಕ್‌ ಅ ಧಿಕಾರಿಗಳು ಲಾಕರ್‌ ಹೊಂದಿರುವವರ ಮೂಲ ವಾರಸುದಾರರಿಗೆ ಅದನ್ನು ತೆರೆಯಲು ಅವಕಾಶ ನೀಡಿದ್ದಾರೆ.

ಬೆಚ್ಚಿಬಿದ್ದ ಬ್ಯಾಂಕ್‌ ಸಿಬ್ಬಂದಿ:
ಮೇ 6ರಂದು ಲಾಕರ್‌ ತೆರೆಯಲಾಗಿದೆ. ಅದರಲ್ಲಿ 500 ಮತ್ತು 1000 ರೂ. ಮುಖಬೆಲೆಯ ಸುಮಾರು 3 ಕೋಟಿ ರೂ. ಪತ್ತೆಯಾಗಿದೆ. ಇದನ್ನು ಕಂಡು ಮಕ್ಕಳು ಹಾಗೂ ಅಧಿಕಾರಿಗಳು ದಂಗಾಗಿದ್ದಾರೆ. ಏಕೆಂದರೆ ನೋಟು ಅಮಾನ್ಯಿàಕರಣದಿಂದಾಗಿ ಇವೆಲ್ಲ ಈಗ ಕೇವಲ ಕಾಗದದ ಚೂರುಗಳಾಗಿವೆ ಹೊರತು ಯಾವ ಬೆಲೆಯೂ ಇಲ್ಲವಾಗಿದೆ.

Advertisement

ಕೈಗೆ ಬಂದ ತುತ್ತು ಬಾಯಿಗಿಲ್ಲ:
2019ರ ನ.8ರಂದು ಕೇಂದ್ರ ಸರ್ಕಾರ 500 ರೂ.ಮತ್ತು 1000 ರೂ.ನೋಟುಗಳನ್ನು ಅಮಾನ್ಯಗೊಳಿಸಿರುವುದಾಗಿ ಘೋಷಿಸಿತ್ತು. ಆದರೆ ಲಾಕರ್‌ನಲ್ಲಿ ಇಷ್ಟೆಲ್ಲ ಹಣವಿದೆ ಎಂಬ ವಿಷಯವೇ ಗೊತ್ತಿಲ್ಲದ ಮಕ್ಕಳು ತಮ್ಮ ಪೋಷಕರು ಕೂಡಿಟ್ಟ ಹಣ ನೋಡಿ ಮಮ್ಮಲ ಮರುಗಿದ್ದಾರೆ. ಬೆಲೆಬಾಳುವ ಒಡವೆಗಳಲ್ಲೇ ತೃಪ್ತಿಪಟ್ಟುಕೊಂಡಿದ್ದಾರೆ.

ತಮ್ಮ ತಂದೆ-ತಾಯಿ ತಮಗಾಗಿ ಇಷ್ಟು ದೊಡ್ಡ ಮೊತ್ತದ ಹಣ ಬಿಟ್ಟು ಹೋಗಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ಲಾಕರ್‌ನಲ್ಲಿ ನೋಟುಗಳ ಬಂಡಲ್‌ ನೋಡಿದಾಗ ಮೊದಲು ನಂಬಲಾಗಲಿಲ್ಲ. ಮೊದಲೇ ತಿಳಿದಿದ್ದರೆ 2019ರಲ್ಲಿ ಸರ್ಕಾರ ನೋಟು ಅಮಾನ್ಯಿàಕರಣ ಜಾರಿಗೊಳಿಸಿದಾಗಲೇ ಕಾನೂನುಬದ್ಧವಾಗಿ ಈ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತಿತ್ತು ಎಂದು ಮಕ್ಕಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next