Advertisement

ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ ; ಆತಂಕದಲ್ಲಿ ಚಂದ್ರಯಾನ-2

11:23 AM Sep 08, 2019 | Hari Prasad |

lo…88. Hiಬೆಂಗಳೂರು: ಭಾರತೀಯರು ಮಾತ್ರವಲ್ಲ ಇಡೀ ವಿಶ್ವದ ಖಗೋಳಾಸಕ್ತರೆಲ್ಲಾ ಈ ಐತಿಹಾಸಿಕ ಕ್ಷಣಕ್ಕೆ ಕಾತರದಿಂದ ಕಾಯುತ್ತಿದ್ದರು. ಚಂದ್ರಯಾನ -2ರ ಆರ್ಬಿಟರ್, ವಿಕ್ರಂ ಲ್ಯಾಂಡಿಂಗ್ ನೌಕೆ ಮತ್ತು ಪ್ರಗ್ಯಾನ್ ಹೆಸರಿನ ಉಪಕರಣಗಳ ಸಹಿತ ಅವಶ್ಯ ಪರಿಕರಗಳನ್ನು ಹೊತ್ತು ಜುಲೈ22ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದ್ದ ‘ಬಾಹುಬಲಿ’ ಹೆಸರಿನ GSLV MK III-M1 ರಾಕೆಟ್ ಶತಕೋಟಿ ಭಾರತೀಯರ ಚಂದ್ರಯಾನದ ಕನಸಿಗೆ ಕಿಚ್ಚು ಹಚ್ಚಿತ್ತು.

Advertisement

 

48 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಂದು ಅಂದರೆ ಶುಕ್ರವಾರ ತಡರಾತ್ರಿಯ ಸಮಯದಲ್ಲಿ 27 ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅನ್ನು ತನ್ನೊಡಳಲ್ಲಿ ಇರಿಸಿಕೊಂಡಿದ್ದ 1471 ಕಿಲೋ ಗ್ರಾಂ ತೂಕದ ‘ವಿಕ್ರಂ ಲ್ಯಾಂಡರ್’ ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಕೊನೇ ಕ್ಷಣದಲ್ಲಿ ನಿಯಂತ್ರಣ ಕೇಂದ್ರದಿಂದ ತನ್ನ ಸಂಪರ್ಕವನ್ನು ಕಡಿದುಕೊಂಡಿತು. ಇದು ಇಸ್ರೋ ವಿಜ್ಞಾನಿಗಳಲ್ಲಿ ನಿರಾಸೆ ಮೂಡಿಸಿತು.


ವಿಕ್ರಂ ಲ್ಯಾಂಡರ್ ಆರ್ಬಿಟರ್ ನಿಂದ ಸಂಪರ್ಕವನ್ನು ಕಡಿದುಗೊಂಡಿದ್ದು ಕೊನೇ ಕ್ಷಣದ ದತ್ತಾಂಶಗಳನ್ನು ಪರಿಶೀಲಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಘೋಷಿಸಿದರು.
ಚಂದ್ರನ ನೆಲದಲ್ಲಿ ಇಳಿಯುವ 2.1 ಕಿಲೋ ಮೀಟರ್ ವರೆಗೂ ವಿಕ್ರಂ ಸಂಪರ್ಕದಲ್ಲಿತ್ತು. ಆದರೆ ಆ ಬಳಿಕ ಲ್ಯಾಂಡರ್ ಸಂಪರ್ಕ ಇದ್ದಕ್ಕಿದ್ದಂತೆಯೇ ಕಡಿತಗೊಂಡಿತು. ಬಳಿಕ ಸ್ವಲ್ಪ ಸಮಯದ ಬಳಿಕ ವಿಕ್ರಂ ಲ್ಯಾಂಡರ್ ನಿಂದ ಆರ್ಬಿಟರ್ ಸಿಗ್ನಲ್ ಪಡೆದುಕೊಂಡರೂ ಬಳಿಕ ಯಾವುದೇ ಸಂಕೇತಗಳು ರವಾನೆಯಾಗದೇ ಇದ್ದುದರಿಂದ ವಿಜ್ಞಾನಿಗಳು ಆತಂಕಕ್ಕೆ ಒಳಗಾದರು.

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಉದ್ದೇಶದಿಂದ ಇಸ್ರೋ ಕೇಂದ್ರ ಕಛೇರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೂ ಈ ಬೆಳವಣಿಗೆ ಬೇಸರವನ್ನುಂಟು ಮಾಡಿತು.

ವಿಕ್ರಂ ಲ್ಯಾಂಡರ್ ಆರ್ಬಿಟರ್ ನಿಂದ ಸಂಪರ್ಕವನ್ನು ಕಡಿದುಗೊಂಡಿದ್ದು ಕೊನೇ ಕ್ಷಣದ ದತ್ತಾಂಶಗಳನ್ನು ಪರಿಶೀಲಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಪ್ರಕಟಿಸಿದ್ದಾರೆ.



Advertisement
Advertisement

Udayavani is now on Telegram. Click here to join our channel and stay updated with the latest news.

Next