Advertisement

ನಿರೀಕ್ಷೆಯಂತೆ ಸಾಗುತ್ತಿದೆ ಚಂದ್ರಯಾನ-2: ಇಸ್ರೋ

08:58 AM Jul 25, 2019 | Team Udayavani |

ಹೊಸದಿಲ್ಲಿ: ಚಂದ್ರನ ಅಧ್ಯಯನಕ್ಕಾಗಿ ಉಡಾವಣೆ ಅನುಷ್ಠಾನಗೊಳಿಸಲಾಗಿರುವ ಚಂದ್ರಯಾನ-2 ಯೋಜನೆಯು ನಿರೀಕ್ಷೆಯಂತೆ ಮುನ್ನಡೆಯುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಹೇಳಿದೆ. ಸೋಮ ವಾರ, ಮಧ್ಯಾಹ್ನ “ಚಂದ್ರಯಾನ-2′ ಯೋಜನೆಯ ಪರಿಕರಗಳು ಬಾಹ್ಯಾಕಾಶದತ್ತ ಯಶಸ್ವಿಯಾಗಿ ಸಾಗಿತು.

Advertisement

ಬಾಹ್ಯಾಕಾಶದಲ್ಲಿ, ಚಂದ್ರಯಾನ-2 ಪರಿಕರಗಳು ನಮ್ಮ ನಿರೀಕ್ಷೆಯಂತೆ ಸಾಗುತ್ತಿವೆ. ಮುಂದಿನ ವಾರ, ಚಂದ್ರಯಾನ ಪರಿಕರಗಳು ಇರುವ ಸಮುತ್ಛಯವನ್ನು ಚಂದ್ರನ ಕಕ್ಷೆಯತ್ತ ಸಾಗುವಂತೆ ಮಾಡುವ ಕೆಲವಾರು ವೈಜ್ಞಾನಿಕ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ. ಚಂದ್ರಯಾನ-2 ಯೋಜನೆಯಲ್ಲಿ ಇದು ಅತ್ಯಂತ ಮಹತ್ವಪೂರ್ಣವಾದವು. ಯೋಜನೆಯ ಈವರೆಗಿನ ಪ್ರಗತಿ ಸಮಾಧಾನಕರವಾಗಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ರೋಗೆ ಚೀನ ಅಭಿನಂದನೆ
ಚಂದ್ರಯಾನ-2 ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಇಸ್ರೋಗೆ ಚೀನ ಸರಕಾರ ಅಭಿನಂದನೆ ಸಲ್ಲಿಸಿದೆ. ಬಾಹ್ಯಾಕಾಶದಲ್ಲಿ ಎರಡೂ ದೇಶಗಳು ತಮ್ಮದೇ ಆದ ಪ್ರತ್ಯೇಕ ಬಾಹ್ಯಾಕಾಶ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದು, ಆ ಕೆಲಸದಲ್ಲಿ ಒಟ್ಟಾರೆಯಾಗಿ ಕೆಲಸ ಮಾಡುವ ಇಂಗಿತವನ್ನು ಚೀನ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next