Advertisement

ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ

04:48 PM Sep 19, 2020 | Team Udayavani |

ಕಾಸರಗೋಡು: ಕಾಂಞಂಗಾಡ್‌ ಸರಕಾರಿ ಜಿಲ್ಲಾ ಹೋಮಿಯೋ ಆಸ್ಪತ್ರೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ಕೇರ್‌ ಯೂನಿಟ್‌ ವಾಹನಕ್ಕೆ ಕಂದಾಯ ಸಚಿವ ಇ. ಚಂದ್ರಶೇಖರನ್‌ ಅವರು ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಸಚಿವರು, ಈ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಸಿಬಂದಿ ಸೇವೆ ಶ್ಲಾಘನೀಯ. ರೋಗಿಗಳನ್ನು ಅವರ ಕುಟುಂಬದ ಮಂದಿ ಶುಶ್ರೂಷೆ ಮಾಡುವಲ್ಲಿ ಹಿಂದೇಟು ಹಾಕಿದ ಕೆಲವು ಪ್ರಕರಣಗಳಲ್ಲೂ ಈ ವಿಭಾಗದ ಸಿಬಂದಿಗಳ ಸೇವೆ ನಾಡಿಗೆ ಮಾದರಿ. ಇದು ಮಾನವ ಸೇವೆಯ ಪ್ರತೀಕ. ಇಂಥಾ ವಲಯಕ್ಕೆ ನಿಧಿ ಮೀಸಲಿರಿಸಲು ರಾಜ್ಯ ಸರಕಾರ ಆದ್ಯತೆ ನೀಡುತ್ತಾ ಬಂದಿದೆ ಎಂದರು.

ಕಾಂಞಂಗಾಡ್‌ ನಗರಸಭೆ ಅಧ್ಯಕ್ಷ ವಿ.ವಿ. ರಮೇಶನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೋಮಿಯೋ ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ| ಕೆ. ರಾಮಸುಬ್ರಹ್ಮಣ್ಯಂ ಸ್ವಾಗತಿಸಿದರು. ಚೇತನಾ ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ಕೇಂದ್ರ ಸಂಚಾಲಕಿ ಡಾ| ಅಶ್ವತಿ ವಂದಿಸಿದರು.

ಕಾಂಞಂಗಾಡ್‌ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಕಂದಾಯ ಸಚಿವ ಇ. ಚಂದ್ರಶೇಖರನ್‌ ಅವರ 2019-20ನೇ ಸ್ಥಳೀಯ ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಿ ವಾಹನ ಮಂಜೂರಾಗಿದೆ. ಪಾಲಿಯೇಟಿವ್‌ ಒ.ಪಿ.ಗೆ ದಿನವೊಂದಕ್ಕೆ ಸುಮಾರು 25 ಮಂದಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಲ್ಲಿನ ಚೇತನ ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ಕೇರ್‌ ಕೇಂದ್ರ ಈ ವರೆಗೆ ಖಾಸಗಿ ವಾಹನ ಬಳಸಿ ಅನಿವಾರ್ಯ ಹಂತಗಳಲ್ಲಿ ಸೇವೆಗಾಗಿ ತೆರಳುತ್ತಿದ್ದರು. ಸರಕಾರಿ ದರದಲ್ಲಿ ಬಾಡಿಗೆ ನೀಡಲಾಗುತ್ತಿದ್ದ ಕಾರಣ ವಾಹನಗಳು ಕ್ರಮೇಣ ಲಭಿಸದೇ ಹೋದ ಪರಿಸ್ಥಿತಿಯಲ್ಲಿ ಸೇವೆಗೆ ತೀವ್ರ ತೊಡಕಾಗುತ್ತಿತ್ತು. ಸ್ವಂತ ವಾಹನ ಲಭಿಸಿದ ಹಿನ್ನೆಲೆಯಲ್ಲಿ ಈಗ ಈ ಸಮಸ್ಯೆ ಬಗೆಹರಿದಿದೆ ಎಂದು ಆಸ್ಪತ್ರೆ ವರಿಷ್ಠಾಧಿಕಾರಿ ಡಾ| ಕೆ.ರಾಮಸುಬ್ರಹ್ಮಣ್ಯಂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next