Advertisement

ಚಂದ್ರಹಾಸ ಸುವರ್ಣರ ತುಳು ಕಿರು ನಾಟಕಕ್ಕೆ ಪ್ರಥಮ ಬಹುಮಾನ

02:13 PM Jan 31, 2018 | Team Udayavani |

ಮುಂಬಯಿ: ಸಾಹಿತ್ಯ- ಸಾಂಸ್ಕೃತಿಕ ಕಲಾಭರಣ ಪಂಜ ದಕ್ಷಿಣ ಕನ್ನಡ ಇವರು ಸುಮಾರು 45-60 ನಿಮಿಷಗಳ ಕಾಲಾವಧಿಗೆ ಒಳಪಡುವ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಜಾನಪದೀಯ ವಸ್ತುಗಳ ಆಧಾರದಲ್ಲಿ ತುಳು-ಕನ್ನಡ-ಅರೆಗನ್ನಡ ಭಾಷೆಗಳಲ್ಲಿ ಕಿರು ನಾಟಕ ರಚನಾ ಸ್ಪರ್ಧೆಯನ್ನು ಆಯೋಜಿಸಿದ್ದು, ನಗರದ ಕವಿ, ನಾಟಕಕಾರ,  ಲೇಖಕ ಶಿಮಂತೂರು ಚಂದ್ರಹಾಸ ಸುವರ್ಣ ಅವರ ಆಲಡೆದಪ್ಪೆನ ಓಲಗ ಕೃತಿಗೆ ಪ್ರಥಮ ಬಹುಮಾನ ಲಭಿಸಿದೆ.

Advertisement

ಸ್ಪರ್ಧೆಯಲ್ಲಿ ಒಟ್ಟು 22 ನಾಟಕಗಳು ಕಣದಲ್ಲಿದ್ದು, ಇದರಲ್ಲಿ ತುಳು ಭಾಷೆಯಲ್ಲಿ ಶಿಮಂತೂರು ಚಂದ್ರಹಾಸ ಸುವರ್ಣರಿಗೆ ಬಹುಮಾನ ಲಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿದ್ವಾನ್‌ ಟಿ. ಜಿ. ಮಧೂರು ಅವರು ತಿಳಿಸಿದ್ದಾರೆ. ತಜ್ಞರ ಸಮಿತಿಯಿಂದ ಆಯ್ಕೆಗೊಂಡ ರಂಗಕೃತಿಗಳಿಗೆ ಐದು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next