Advertisement

ಶಬರಿಮಲೆ ಅಯ್ಯಪನ ದರ್ಶನ ಪಡೆದ ಚಂದ್ರಹಾಸ್‌ ಗುರುಸ್ವಾಮಿ, ಸತೀಶ್‌ ಗುರುಸ್ವಾಮಿ, ಶಿಷ್ಯ ವೃಂದ

03:58 PM Jan 22, 2021 | Team Udayavani |

ಮುಂಬಯಿ,: ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆ ಕೇರಳ ಸರಕಾರವು ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಕಟ್ಟುನಿಟ್ಟಿನ ನಿಯಮ ಗಳನ್ನು ರೂಪಿಸಿರುವುದರಿಂದ ಯಾತ್ರೆ ಮಾಡುವವರಿಗೆ ಹಲವಾರು ರೀತಿಯ ಸಂಕಷ್ಟ ಎದುರಾಗಿದೆ.

Advertisement

ಆದರೂ ದೇಶಾ ದ್ಯಂತದ ಅಯ್ಯಪ್ಪ ಭಕ್ತರು ಅಯ್ಯಪ್ಪನ ದರ್ಶನ ಮಾಡಬೇಕೆಂಬ ಇಚ್ಛೆ ಯಿಂದ ಶಬರಿಮಲೆ ಯಾತ್ರೆ ನಡೆಸಿದ್ದು, ಅದರಲ್ಲೂ ಮುಂಬಯಿಯ ಅಂಧೇರಿ ಅಯ್ಯಪ್ಪ ಭಕ್ತವೃಂದದ ಸಂಸ್ಥಾಪಕ ಚಂದ್ರ ಹಾಸ್‌ ಗುರುಸ್ವಾಮಿ ಇನ್ನಂಜೆ ಮತ್ತು ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಹೊಟೇಲ್‌ ಉಡುಪಿ ದಾರುಖಾನ ರೇ ರೋಡ್‌ ಮುಂಬಯಿ ಇದರ ಶ್ರೀ ಸತೀಶ್‌ ಗುರುಸ್ವಾಮಿ ಮತ್ತು ಶಿಷವೃಂದದವರು ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ.

ಇದನ್ನೂ ಓದಿ:23-24ಕ್ಕೆ ಸರ್ಕಾರಿ ನೌಕರರ ಒಕ್ಕೂಟದ ಸಮಾವೇಶ

ಕಾಲಿಗೆ ಪಾದುಕೆ ಧರಿಸದೆ ಜೀವನ ನಡೆಸುತ್ತಿರುವ ಚಂದ್ರಹಾಸ್‌ ಗುರುಸ್ವಾಮಿ ಮುಂಬಯಿ ಮತ್ತು ಇನ್ನಂಜೆ ಶಂಕರಪುರದಿಂದ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಯಾತ್ರೆ ನಡೆಸಿ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾಗಿ ನೂರಾರು ಕಡುಬಡತನದ ಕುಟುಂಬಗಳಿಗೆ ಸಹಾಯ ಹಸ್ತವನ್ನು ಕೂಡ ನೀಡುತ್ತ ಬಂದಿದ್ದಾರೆ. ಈ ಬಾರಿ ಕೂಡ ತನಗೆ ಯಾವುದೇ ಸಂಕಷ್ಟಗಳು ಎದುರಾದರೂ ಅಯ್ಯಪ್ಪನ ದರ್ಶನ ಮಾಡಲೇಬೇಕೆಂದು ವ್ರತವನ್ನು ಆಚರಿಸಿ ಮುಂಬಯಿಯ ಗೋರೆಗಾವ್‌ನಲ್ಲಿ ಮತ್ತು ಇನ್ನಂಜೆಯ ಶಂಕರಪುರದಲ್ಲಿ ಅಯ್ಯಪ್ಪ ಮಹಾಪೂಜೆಯನ್ನು ನಡೆಸಿ ನೂರಾರು ಭಕ್ತರಿಗೆ ಅನ್ನಸಂತರ್ಪಣೆಗೈದು ಶಬರಿಮಲೆ ಯಾತ್ರೆ ನಡೆಸಿದ್ದಾರೆ. ಮತ್ತೂಂದೆಡೆ ರೇ ರೋಡ್‌ನ‌ ಧಾರ್ಮಿಕ ಮುಂದಾಳು ಎಂದೇ ಪ್ರಸಿದ್ಧಿ ಪಡೆದ ಸತೀಶ್‌ ಗುರುಸ್ವಾಮಿ ರೇ ರೋಡ್‌ನ‌ಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಿ, ಅಯ್ಯಪ್ಪನಿಗೆ ಮಹಾಪೂಜೆಯನ್ನು ನೆರವೇರಿಸಿ ತಮ್ಮ ಶಿಷ್ಯ ವೃಂದದವರೊಂದಿಗೆ ಶಬರಿಮಲೆ ಯಾತ್ರೆಯನ್ನು ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next