Advertisement

Lok Sabha Polls: ಮೈತ್ರಿ ಮುರಿದು 6 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಾ ಬಿಜೆಪಿ-ಟಿಡಿಪಿ…?

11:29 AM Mar 08, 2024 | Team Udayavani |

ನವದೆಹಲಿ: 2024ರ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ನಡುವೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಪಕ್ಷಾಂತರದ ಚಟುವಟಿಕೆ ಮುಂದುವರಿದಿದೆ. ಅದರಂತೆ ಮುಂಬರುವ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟದೊಂದಿಗಿನ ಸಂಬಂಧವನ್ನು ಮುರಿದು ಆರು ವರ್ಷಗಳ ನಂತರ ಮತ್ತೆ ಎನ್ ಡಿಎ ಗೆ ಮರಳುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ಇದರ ಮುಂದುವರೆದ ಭಾಗವಾಗಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಗುರುವಾರ ತಡರಾತ್ರಿ ಭೇಟಿಯಾಗಿ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿ ಎರಡೂ ಪಕ್ಷಗಳು ಕೈಜೋಡಿಸಲು ಮುಕ್ತವಾಗಿವೆ, ಆದರೆ ಸೀಟು ಹಂಚಿಕೆ ಸಂಬಂಧ ಯಾವ ಪಕ್ಷದ ನಾಯಕರು ಯಾವ ತೀರ್ಮಾನಕ್ಕೆ ಬರುತ್ತಾರೆ ಎಂಬುದು ಕಾಡು ನೋಡಬೇಕಾಗಿದೆ.

ಇದಲ್ಲದೆ, ಶುಕ್ರವಾರ ಕೂಡ ನಾಯ್ಡು ಮತ್ತು ಶಾ ಭೇಟಿಯಾಗುವ ಸಾಧ್ಯತೆಯಿದೆ. ಸಭೆಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ಕೂಡ ಉಪಸ್ಥಿತರಿರುವ ಸಾಧ್ಯತೆ ಇದೆ ಎನ್ನಲಾಗಿದ್ದು ಈ ಸಭೆಯಲ್ಲಿ ಟಿಡಿಪಿ-ಬಿಜೆಪಿ-ಜನಸೇನೆ ನಡುವಿನ ಸೀಟು ಹಂಚಿಕೆ ಸೂತ್ರವನ್ನು ಮುದ್ರೆಯೊತ್ತುವ ನಿರೀಕ್ಷೆಯಿದೆ.

ಟಿಡಿಪಿ 2018 ರವರೆಗೆ ಬಿಜೆಪಿ ನಾಯಕತ್ವದಲ್ಲಿತ್ತು:
2018 ರವರೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಿದ್ದ ತೆಲುಗು ದೇಶಂ ಪಕ್ಷ, ಚಂದ್ರಬಾಬು ನಾಯ್ಡು ರಾಜ್ಯದ ಮುಖ್ಯಮಂತ್ರಿಯಾದಾಗ ಅದರಿಂದ ಹೊರನಡೆಯಿತು.

ಇದನ್ನೂ ಓದಿ: LPG Cylinder Price 100ರೂ. ಇಳಿಕೆ… ಮಹಿಳಾ ದಿನದಂದು ಶುಭ ಸುದ್ದಿ ನೀಡಿದ ಪ್ರಧಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next