Advertisement
ಭಾರತದಲ್ಲಿ ಕಾಣಿಸುತ್ತದೆಯೇ?ಕೋಲ್ಕತಾ, ಗುವಾಹಟಿಯಲ್ಲಿ ಮಾತ್ರ ಕೊಂಚ ಮಟ್ಟಿಗೆ ಕಾಣಿಸ ಬಹುದು. ಉಳಿದಂತೆ ದಿಲ್ಲಿ, ಮುಂಬಯಿ, ಚೆನ್ನೈ, ಬೆಂಗಳೂರಿನಲ್ಲಿ ಸ್ಪಷ್ಟ ವಾಗಿ ಕಾಣಿಸುವುದಿಲ್ಲ. ಈ ವೇಳೆಯಲ್ಲಿ ಸೂರ್ಯನ ಬೆಳಕೇ ಹೆಚ್ಚು ಪ್ರಖರ ವಾಗಿರುವುದರಿಂದ ಕಾಣಿಸುವುದು ಕಷ್ಟ. ಆದರೂ ಕೆಲವು ನಗರಗಳಲ್ಲಿ ಕೊಂಚ ಮಟ್ಟಿಗೆ ಕಾಣಿಸಬಹುದು.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಈ ಗ್ರಹಣವಾಗುತ್ತದೆ. ಅಂದರೆ ಸೂರ್ಯನ ಬೆಳಕು ಚಂದ್ರನಿಗೆ ತಲುಪದಂತೆ ಅಡ್ಡವಾಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತಿದ್ದಂತೆ ಚಂದ್ರಗ್ರಹಣ ಗೋಚರವಾಗುತ್ತದೆ.