Advertisement

ಅಮೆರಿಕದಲ್ಲಿ ಶತಚಂಡಿಕಾ ಯಾಗ ಸಂಪನ್ನ

12:05 AM Apr 18, 2022 | Team Udayavani |

ಉಡುಪಿ : ಲೋಕ ಕಲ್ಯಾಣಾರ್ಥವಾಗಿ ಅಮೆರಿಕದ ಫೀನಿಕ್ಸ್ ನ ಪುತ್ತಿಗೆ ಮಠದಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ಎ. 11ರಂದು ಆರಂಭಗೊಂಡ ಶತಚಂಡಿಕಾ ಯಾಗವು ಎ. 16ರಂದು ಪೂರ್ಣಾಹುತಿ ಯೊಂದಿಗೆ ಸಂಪನ್ನಗೊಂಡಿತು.

Advertisement

10 ಮಂದಿ ಋತ್ವಿಜರಿಂದ 100 ಪಾರಾಯಣ, ಲಕ್ಷ ನವಾಕ್ಷರಿ ಮಂತ್ರ ಜಪ, ಹತ್ತು ಸಾವಿರ ಆಜ್ಯ ಹೋಮ ಮೂಲಕ ಶತಚಂಡಿಕಾಯಾಗ ನೆರವೇರಿತು. ಶ್ರೀನಿವಾಸ ದೇವರಿಗೆ ಮತ್ತು ಶ್ರೀ ದುರ್ಗೆಗೆ ಕುಂಭಾಭಿಷೇಕ ಜರಗಿತು.

ಸುಖ, ಶಾಂತಿ ಸಮೃದ್ಧಿ ಪ್ರಾಪ್ತ ವಾಗಬೇಕಾದರೆ ಶ್ರೀದೇವಿಗೆ ಶರಣು ಹೋಗಬೇಕು. ಈ ಹಿನ್ನೆಲೆಯಲ್ಲಿ ಶತಚಂಡಿಕಾ ಯಾಗ ಆಯೋಜಿಸಲಾಯಿತು ಎಂದು ಶ್ರೀಪಾದರು ಆಶೀರ್ವಚನದಲ್ಲಿ ಹೇಳಿದರು.

ವಿಷ್ಣು ಚಕ್ರಾಬ್ಜ್ಯ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಗಳು ನೆರವೇರಿದವು. ಪ್ರಧಾನ ಅರ್ಚಕರಾದ ಕಿದಿಯೂರು ರಾಮದಾಸ್‌ ಭಟ್‌, ಶ್ರೀಕಾಂತ್‌ ಸಾಮಗ, ರಾಘವೇಂದ್ರ ಕೊಡಂಚ, ಅಮೆರಿಕದ 9 ಮಠಗಳ ಪ್ರಧಾನ ಅರ್ಚಕರು, ಟೆಂಪೆ ನಗರದ ಮೇಯರ್‌ ಪ್ರತಿನಿಧಿ ಪ್ಯಾರಿಷ್‌ ಸ್ಪಿಟ್ಜ್, ಫೀನಿಕ್ಸ್ ಪುತ್ತಿಗೆ ಮಠದ ಶ್ರೀ ವೆಂಕಟೇಶ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ ರಾವ್‌, ಮಠದ ಪ್ರ.ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್‌ ತಂತ್ರಿ ಉಪಸ್ಥಿತರಿದ್ದರು. ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭೋಜ ನಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next