ಹೊಸದಿಲ್ಲಿ: ಚಂಡೀಗಢ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರಿಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರವಿವಾರ ಹೇಳಿದರು.
ಭಗತ್ ಸಿಂಗ್ ಅವರು ಜನ್ಮದಿನಾಚರಣೆಯ (ಸೆ.28) ಕೆಲ ದಿನ ಮೊದಲು ಪ್ರಧಾನಿ ಮೋದಿ ಅವರು ಈ ಘೋಷಣೆ ಮಾಡಿದ್ದಾರೆ. ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ ‘ ಮನ್ ಕಿ ಬಾತ್’ ನಲ್ಲಿ ಪಿಎಂ ಮೋದಿ ಈ ಬಗ್ಗೆ ಮಾತನಾಡಿದರು.
ನನ್ನ ಪ್ರೀತಿಯ ದೇಶವಾಸಿಗಳೇ, ಮೂರು ದಿನದ ಬಳಿಕ ಅಂದರೆ ಸೆ.28ರಂದು ಅಮೃತ ಮಹೋತ್ಸವದ ವಿಶೇಷ ದಿನವಿದೆ. ಆ ದಿನದಂದು ತಾಯಿ ಭಾರತಿಯ ವೀರ ಪುತ್ರ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸಲಿದ್ದೇವೆ” ಎಂದರು.
ಇದನ್ನೂ ಓದಿ:ಜೂಲನ್ ವಿದಾಯ ಪಂದ್ಯದಲ್ಲಿ ವಿವಾದ: ದೀಪ್ತಿ ಶರ್ಮಾ ವಿರುದ್ಧ ಆಂಗ್ಲರ ಪ್ರತಾಪ; ಆಗಿದ್ದೇನು?
ಅಲ್ಲದೆ ಸಮುದ್ರ ತೀರದ ಜೀವ ವ್ಯವಸ್ಥೆಗೆ ಹವಾಮಾನ ಬದಲಾವಣೆಯು ದೊಡ್ಡ ಆತಂಕವಾಗಿದೆ. ಕಡಲತೀರದ ಕಸದ ರಾಶಿಯು ಹಾನಿ ಮಾಡುತ್ತದೆ. ಈ ಸಮಸ್ಯೆಗಳನ್ನು ಎದುರಿಸಲು ನಾವು ಸತತ ಪ್ರಯತ್ನ ಪಡಬೇಕಿದೆ ಎಂದು ಪಿಎಂ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.