Advertisement

ಕೈಗಳಿಲ್ಲದಿದ್ದರೂ ಚಾನ್‌ದೀಪ್‌ ವಿಶ್ವ ದಾಖಲೆ

12:45 AM Jan 26, 2019 | |

ಆತ ಎಲ್ಲರಂತೆಯೇ ಇದ್ದ. ಮೊಬೈಲ್‌ನಲ್ಲಿ ವಿಡಿಯೊ ಗೇಮ್‌ ಆಡುತ್ತಿದ್ದ. ತುಂಬಾ ಇಷ್ಟಪಟ್ಟು ಸ್ನೇಹಿತರ ಜತೆಗೆ ಕ್ರಿಕೆಟ್‌ ಆಡಿ ನಕ್ಕು ನಲಿಯುತ್ತಿದ್ದ. ತನಗೆ ಬೇಕಾದ್ದನ್ನು ತಿನ್ನುತ್ತಾ, ಗೆಳೆಯರ ಜತೆಗೆ ಹರಟುತ್ತಾ ಇದ್ದವನ ಬದುಕಿನಲ್ಲಿ ವಿಧಿ ಬೇರೆಯದ್ದೇ ಆಟವಾಡಿತು. 

Advertisement

ಹೆಸರು ಚಾನ್‌ದೀಪ್‌ ಸಿಂಗ್‌. ವಯಸ್ಸು 20 ವರ್ಷ. ಮೂಲತಃ ಜಮ್ಮು-ಕಾಶ್ಮೀರದವರು.  ಎಲ್ಲರಂತಿದ್ದ ಚಾನ್‌ದೀಪ್‌ಗೆ ನಿಜವಾಗಿಯೂ ಆಗಿದ್ದಾದರೂ ಏನು?, ಆತ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದು ಹೇಗೆ? ಮಗನನ್ನು ದೊಡ್ಡ ಕ್ರೀಡಾಪಟು ಮಾಡಬೇಕು ಎಂದು ಕನಸು ಕಂಡಿದ್ದ ಅಪ್ಪ-ಅಮ್ಮ ನ ಆಸೆಯನ್ನು ಚಾನ್‌ದೀಪ್‌ ನೆರವೇರಿಸಿದ ಸಾಹಸ ಗಾಥೆ ಇಲ್ಲಿದೆ ನೋಡಿ.  

11 ವರ್ಷದವನಿದ್ದಾಗ ಆಘಾತ:  ಚಾನ್‌ದೀಪ್‌ಗೆ ಆಗ  11 ವರ್ಷ. ಮಕ್ಕಳ ಜತೆಗೆ ಬೆರತು ಆಡುತ್ತಿದ್ದ ಸಮಯ. ಖುಷಿ ಖುಷಿಯಿಂದ ಇದ್ದ ಚಾನ್‌ದೀಪ್‌ ಒಂದು ದಿನ ವಿಧಿಯಾಟಕ್ಕೆ ಬಲಿಯಾದರು. ಒಟ್ಟು 11 ಸಾವಿರ ವೋಲ್ಟ… ಕರಂಟ್‌ ಶಾಕ್‌ಗೆ ಒಳಗಾದರು. ಚಾನ್‌ದೀಪ್‌ ಸತ್ತೇ ಹೋದರು ಅಂದುಕೊಳ್ಳಲಾಗಿತ್ತು. ಆದರೆ ಪವಾಡ ಸದೃಶವಾಗಿ ಬದುಕುಳಿದನಾದರೂ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಮಗನ ಪರಿಸ್ಥಿತಿ ಕಂಡು ತಂದೆ-ತಾಯಿ ಮಮ್ಮಲ ಮರುಗಿದರು. ಕಾಲ ಕಳೆಯಿತು. ಎರಡೂ ಕೈಗಳನ್ನು ಕಳೆದುಕೊಂಡೇ ಎಂದು ಚಾನ್‌ದೀಪ್‌ ಕೊರಗುತ್ತಾ ಕೂರಲಿಲ್ಲ. ತಂದೆ-ತಾಯಿಯ ಸ್ಪೂರ್ತಿ, ಸ್ನೇಹಿತರ ಸಹಕಾರದಿಂದ ವಿಧಿ ಬರಹವನ್ನೇ ಬದಲಿಸಿದ. ತನಗೆ ಎರಡು ಕೈಗಳಿಲ್ಲ ಎನ್ನುವ ವಿಷಯವನ್ನೇ ಮರೆತ. ಸ್ಕೇಟಿಂಗ್‌ ಕ್ಷೇತ್ರವನ್ನು ಆಯ್ದುಕೊಂಡ. ವಿಶ್ವ ಮಟ್ಟದಲ್ಲಿ ಪದಕ ಗೆದ್ದು ಎಲ್ಲರ ಗಮನ ಸೆಳೆದ. 

ವಿಶ್ವ ದಾಖಲೆ ನಿರ್ಮಾಣ:  ಚಾನ್‌ದೀಪ್‌, ರಾಷ್ಟ್ರೀಯ ಮಟ್ಟದ ಸ್ಕೇಟರ್‌ ಆಗಿ ಗುರುತಿಸಿಕೊಂಡಿರುವ ಜೊತೆಗೆ, 100 ಮೀಟರ್‌ ಸ್ಕೇಟಿಂಗ್‌ನಲ್ಲಿ ವಿಶ್ವದಾಖಲೆ ಬರೆದಿ¨ªಾರೆ. ಎರಡೂ ಕೈಗಳಿಲ್ಲದಿದರೂ, ಸ್ಕೇಟಿಂಗ್‌ನಲ್ಲಿ ಬ್ಯಾಲೆನ್ಸ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಂಡು ವಿಶ್ವ ದಾಖಲೆ ಬರೆದಿದ್ದಾರೆ. 

ಹಲವು ಪ್ರಶಸ್ತಿಗಳು ತೆಕ್ಕೆಗೆ:  ಚಾನ್‌ದೀಪ್‌ ಸಾಮರ್ಥ್ಯಕ್ಕಿಂತ ಮಿಗಿಲಾದ ಪ್ರದರ್ಶನ ನೀಡಿ ಅನೇಕ ಪದಕ ಗೆದ್ದಿದ್ದಾನೆ. ಆತನ ಸಾಧನೆಗಾಗಿ ಹಲವು ಎನ್‌ಜಿಒಗಳು ಚಾನ್‌ದೀಪ್‌ಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ ಎಂದು ಚಾನ್‌ದೀಪ್‌  ತಂದೆ ಹೆಮ್ಮೆಯಿಂದ ಹೇಳುತ್ತಾರೆ. ಬಾನ್ಯನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಚಾನ್‌ದೀಪ್‌ ಅಧ್ಯಯನವನ್ನು ಮಾಡಿ 10ನೇ ತರಗತಿಯಲ್ಲಿ ಶೇ.78 ಮತ್ತು 12ನೇ ತರಗತಿಯಲ್ಲಿ ಶೇ. 77 ಅಂಕ ಗಳಿಸಿದ. ನಂತರ ಚಾನ್‌ದೀಪ್‌ ಅವರು ಯುಐಡಿಸಿ (ಯುನೈಟೆಡ್‌ ಇಂಡಿಯಾ ಡಾನ್ಸ್‌ ಗ್ರೂಪ್‌)ಗೆ ಸೇರಿದರು. ಇದು ವಿಶ್ವದÇÉೇ ಅತ್ಯಂತ ದೊಡ್ಡ ನೃತ್ಯ ಕಾರ್ಯಾಗಾರ. ಅಲ್ಲಿಗೆ ಸೇರಿದ ಜಮ್ಮು ಮತ್ತು ಕಾಶ್ಮೀರದ ಏಕೈಕ ವ್ಯಕ್ತಿ ಚಾನ್‌ದೀಪ್‌ ಎನ್ನುವುದು ವಿಶೇಷ. 

Advertisement

ಕಠಿಣ ಅಭ್ಯಾಸದಿಂದ ಸಾಧನೆ
ತನ್ನ ಸಾಧನೆ ಬಗ್ಗೆ ಚಾನ್‌ದೀಪ್‌ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವುದು ಹೀಗೆ. “ಅಪಘಾತದ ನಂತರ ರೋಲರ್‌ ಸ್ಕೇಟಿಂಗ್‌ ಅನ್ನು ತೆಗೆದುಕೊಂಡು ನನ್ನ ಸಮತೋಲನ ಮತ್ತು ವೇಗವನ್ನು ಪರಿಪೂರ್ಣಗೊಳಿಸಲು ಪ್ರಯತ್ನಿಸಿದೆ. ಪ್ರತಿದಿನ ಸಂಜೆ ಸಂಜೆ ಕಠಿಣ ಅಭ್ಯಾಸ ನಡೆಸುತ್ತಿದ್ದೆ, ಸ್ಕೇಟಿಂಗ್‌ ರಿಂಕ್‌ ಮತ್ತು 90 ನಿಮಿಷಗಳ ಅಭ್ಯಾಸಗಳಿಗೆ ಹೋಗುತ್ತಿದ್ದೆ. ಹಾಗೂ ಇತರೆ ಸಮರ್ಥ-ಸ್ಕೇಟರ್‌ಗಳೊಂದಿಗೆ ಸ್ಪರ್ಧಿಸುತ್ತಿದ್ದೆ. ಆರಂಭದ ದಿನಗಳಲ್ಲಿ ನಾನು ಸಾಕಷ್ಟು ಇಳಿಕೆ ಮಾಡುತ್ತಿ¨ªೆ, ಏಕೆಂದರೆ ಸಮತೋಲನವನ್ನು ಉಳಿಸಿಕೊಳ್ಳಲು ನನಗೆ  ಕೈಗಳಿರಲಿಲ್ಲ. ಆದರೆ, ಲೆಕ್ಕವಿಲ್ಲದಷ್ಟು ಬಾರಿ ಬೀಳುವ ನಂತರ, ನಾನು ಅದನ್ನು ಅಂತಿಮವಾಗಿ ನಿರ್ವಹಿಸುತ್ತಿ¨ªೆ ಎಂದು ಚಾನ್‌ದೀಪ್‌ ಹೇಳಿದರು.

– ಧನಂಜಯ ಆರ್‌.ಮಧು

Advertisement

Udayavani is now on Telegram. Click here to join our channel and stay updated with the latest news.

Next