Advertisement

ಮೂರನೇ ವ್ಯಕ್ತಿ ಜೊತೆ ನಿವೇದಿತಾಗೆ ಸಂಬಂಧ ಇಲ್ಲ.. ಇಲ್ಲಸಲ್ಲದ್ದನ್ನು ಹಬ್ಬಿಸಬೇಡಿ; ಚಂದನ್

04:48 PM Jun 10, 2024 | Team Udayavani |

ಬೆಂಗಳೂರು: ಚಂದನ್‌ ಶೆಟ್ಟಿ – ನಿವೇದಿತಾ ಗೌಡ ವಿಚ್ಚೇದಿನ ಪಡೆದ ಬಳಿಕ ಮೊದಲ ಬಾರಿಗೆ‌ ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಸ್ಷಪ್ಟನೆ ನೀಡಿದ್ದಾರೆ.

Advertisement

ನನ್ನ ಹಾಗೂ ನಿವೇದಿತಾ ಅವರ ಅಲೋಚನೆಗಳು, ಜೀವನ ಶೈಲಿ ಬೇರೆಬೇರೆ. ಜೀವನ ಅಂದರೆ ಏನು ಅಂಥ ಅರ್ಥ ಮಾಡಿಕೊಳ್ಳುವ ವ್ಯಾಖ್ಯಾನ ನಮ್ಮಿಬ್ಬರ ನಡುವೆ ಭಿನ್ನವಾಗಿದೆ. ಇದರಿಂದ ಹೊಂದಾಣಿಕೆ ಆಗಿಲ್ಲ. ನಾವಿಬ್ಬರು ಈ ಬಗ್ಗೆ ಎಷ್ಟೋ ಸಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ವಿ. ಆದರೆ ಅದರು ಸಾಧ್ಯವಾಗಿಲ್ಲ. ನಾವಿಬ್ಬರು ಬಲವಂತವಾಗಿ ಈ ರೀತಿಯಾಗಿರಲು ಆಗಲ್ಲ. ಮಾನಸಿಕವಾಗಿ ನೋವುಪಟ್ಟುಕೊಂಡು ಇರುವುದು ಸರಿಯಲ್ಲ ಅನ್ನಿಸಿತು. ಇದರಿಂದಾಗಿ ನಾವಿಬ್ಬರೂ ಒಮ್ಮತ, ಪರಸ್ಪರ ಗೌರವದಿಂದ ಒಪ್ಪಿಕೊಂಡು ಕಾನೂನಾತ್ಮಕವಾಗಿ ಈ ನಿರ್ಧಾರವನ್ನು ಮಾಡಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ದ್ವೇಷ, ವೈಮನಸ್ಸು ಇಲ್ಲ ಎಂದು ಚಂದನ್‌ ಹೇಳಿದ್ದಾರೆ.

ನಟಿ ನಿವೇದಿತಾ ಗೌಡ ಮಾತನಾಡಿ, ಈ ಸಂದರ್ಭದಲ್ಲಿ ನಮ್ಮ ಜೊತೆ ನಿಂತಿದ್ದ ಪ್ರತಿಯೊಬ್ಬರಿಗೂ ಧನ್ಯವಾದ. ನಾವಿಬ್ಬರು ಹೊಂದಾಣಿಯಿಂದಾಗಿ ಇರಲಿಲ್ಲ. ಈ ಕಾರಣದಿಂದ ನಾವಿಬ್ಬರು ವಿಚ್ಚೇದನ ಪಡೆದಿದ್ದೇವೆ ಅಷ್ಟೇ ಅದು ಬಿಟ್ಟು ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು ಎಂದಿದ್ದಾರೆ.

ಚಂದನ್‌ ಮಾತನಾಡಿ, ನಿವೇದಿತಾ ಅವರಿಗೆ ನಾನು ಯಾವುದೇ ರೀತಿಯ ಜೀವನಾಂಶವನ್ನು ನೀಡಿಲ್ಲ. ಹಾಗೂ ನಿವೇದಿತಾ ಕೂಡ ನನ್ನಿಂದ ಯಾವುದೇ ರೀತಿಯ ಜೀವನಾಂಶದ ಬೇಡಿಕೆ ಇಟ್ಟಿಲ್ಲ. ಇದಲ್ಲದೆ ಮಕ್ಕಳು ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಯಿತು ಎಂದು  ವದಂತಿ ಹರಿದಾಡಿತ್ತು. ಈ ವಿಚಾರ ಕೂಡ ಸುಳ್ಳು. ನಮ್ಮಿಬ್ಬರಿಗೆ ಸಿನಿಮಾರಂಗದಲ್ಲಿದ್ದೇವೆ. ಇಬ್ಬರಿಗೂ ಒಳ್ಳೆಯ ಕೆರಿಯರ್‌ ಇದೆ ಎಂದಿದ್ದಾರೆ.

ಇನ್ನೊಂದು ವಿಚಾರವೆಂದರೆ ಮೂರನೇ ವ್ಯಕ್ತಿಯ ಜೊತೆ ನಿವೇದಿತಾ ಅವರೊಂದಿಗೆ ಸಂಬಂಧ ಕಲ್ಪಿಸುತ್ತಿರುವುದು ನನಗೆ ತುಂಬಾ ಬೇಸರ ತರಿಸಿದೆ. ಆ ವ್ಯಕ್ತಿಯ ಮನೆಗೆ ನಾನು ಕೂಡ ಹೋಗಿದ್ದೇನೆ.  ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್‌. ಅವರ ಕುಟುಂಬ ಒಳ್ಳೆಯ ಹಸೆರಿರುವ ಕುಟುಂಬ. ಆ ವ್ಯಕ್ತಿಯ ಜೊತೆ ನಿವೇದಿತಾ ಹೆಸರು ಸೇರಿಸಿ ಹೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.

Advertisement

ನಿವೇದಿತಾ ಗೌಡ ಮಾತನಾಡಿ, ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್‌, ಅವರು ನನಗೆ ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ವಿಶ್‌ ಮಾಡುತ್ತಾರೆ. ಒಂದು ಟ್ರೆಂಡಿಂಗ್‌ ಸಾಂಗ್‌ ಹಾಕಿ ಪೋಸ್ಟ್‌ ಹಾಕಿದರೆ ಅದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವುದು ಸರಿಯಲ್ಲ. ಇದರಿಂದ ಅವರ ಫ್ಯಾಮಿಲಿಗೂ ನೋವಾಗಿದೆ. ಈ ಬಗ್ಗೆ ಅವರ ಬಳಿ ಹಾಗೂ ಅವರ ಪತ್ನಿ ಬಳಿ ನಾನು ಮಾತನಾಡಿದ್ದೆ. ಅವರಿಬ್ಬರೂ ನನಗೆ ತುಂಬಾ ಬೆಂಬಲವಾಗಿ ನಿಂತರು. ಗೊತ್ತಿಲ್ಲದೆ ಯಾವುದೇ ರೀತಿಯ ಪೋಸ್ಟ್‌ ಗೆ ಈ ರೀತಿಯ ಪ್ರತಿಕ್ರಿಯೆ ನೀಡುವುದರಿಂದ ಮನಸ್ಸಿಗೆ ತುಂಬಾ ನೋವು ಆಗುತ್ತದೆ ಎಂದಿದ್ದಾರೆ.

ವ್ಯಕ್ತಿಯೊಬ್ಬರು ನನ್ನ ಸ್ನೇಹಿತ ಅಂತ ಹೇಳ್ತಾ ಇದ್ದಾರೆ. ಅವರು ಸಂದರ್ಶನವೊಂದರಲ್ಲಿ ಇಲ್ಲಸಲ್ಲದ್ದನ್ನು ಹೇಳಿದ್ದಾರೆ. ಇದರಿಂದ ನನಗೆ ತುಂಬಾ ಶಾಕ್‌ ಆಯಿತು. 6 ತಿಂಗಳ ಹಿಂದೆಯೇ  ನಿವೇದಿತಾ ಅವರಿಗೆ ಹೈದರಾಬಾದ್‌ ನಲ್ಲಿ ಒಂದು ಹುಡುಗನ ಜೊತೆ ಸಂಬಂಧ ಇದೆ ಅಂತ ಅವರು ನಾನು ಅವರಿಗೆ ಹೇಳಿದ್ದೆ ಅಂತೆ.  ನಿವೇದಿತಾ ಸರಿಯಿಲ್ಲ ಅಂಥ ಹೇಳಿದ್ರಂತೆ. ಆ ವ್ಯಕ್ತಿ ಅಷ್ಟು ಸುಳ್ಳು ಯಾಕೆ ಹೇಳದ್ರು ಅಂತಲೇ ನನಗೆ ಗೊತ್ತಗ್ತಾಇಲ್ಲ. ಆ ವ್ಯಕ್ತಿಯ ಜೊತೆ ನನಗೆ ಆ ರೀತಿಯ ಸಂಭಾಷಣೆ ಹಾಗೇ ಇಲ್ಲ. ಆ ವ್ಯಕ್ತಿ ಸಿನಿಮಾವೊಂದರಲ್ಲಿ ನಟಿಸಿದ್ದರು. ಅವರೊಂದಿಗೆ ಸಿನಿಮಾದ ಬಗ್ಗೆ ಮಾತನಾಡಿದ್ದೆ ಅಷ್ಟೇ ಎಂದು ಹೇಳಿದ್ದಾರೆ.

ಬೇರೆ ಅವರ ಮನೆಯ ವೈಯಕ್ತಿಕ ಜೀವನದಲ್ಲಿ ಅವರಿಗೆ ಏನು ಸಂಬಂಧ ಇದೆ ಎನ್ನುವುದು ನನಗೆ ದೊಡ್ಡ ಪ್ರಶ್ನೆ ಕಾಡುತ್ತಾ ಇದೆ. ನಾವಿಬ್ಬರು ನಮ್ಮ ಪೋಷಕರ ಜೊತೆ ಹೇಳಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ. ಅವರೇ ಸುಮ್ಮನಿದ್ದಾಗ. ಆ ವ್ಯಕ್ತಿ ನಮ್ಮ ಲೈಫ್‌ ಅಲ್ಲಿ ಬರುವುದು ಸರಿಯಿಲ್ಲ ಎಂದು ಚಂದನ್‌ ಹೇಳಿದ್ದಾರೆ. ನಮ್ಮ ಜೀವನದಲ್ಲಿ ನಾವು ಖುಷಿ ಆಗಿರಲು ಬಿಡಿ ಎಂದಿದ್ದಾರೆ. ಈ ರೀತಿಯ ವಿಚಾರದಲ್ಲಿ ಮನರಂಜನೆ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.ಎಲ್ಲರೂ ನಮ್ಮ ಜೋಡಿ ಚೆನ್ನಾಗಿದೆ ಎಂದಿದ್ದರು. ನಾವು ಇದನ್ನು ಸಾಕಷ್ಟು ಬಾರಿ ಬ್ಯಾಲೆನ್ಸ್‌ ಮಾಡಿ ಹೋಗಲು ಪ್ರಯತ್ನ ಪಟ್ವಿ. ಆದರೆ ಅದು ಆಗಿಲ್ಲ ಎಂದು ಚಂದನ್‌ ಹೇಳಿದ್ದಾರೆ.

ನಾನು ಡಿಫ್ರೆಶನ್‌ ನಲ್ಲಿದ್ದೇನೆ ಎನ್ನುವ ವಿಡಿಯೋವನ್ನು ವೈರಲ್‌ ಮಾಡಲಾಗಿದೆ. 2023(29 ಆಗಸ್ಟ್)  ಸಿನಿಮಾದ ಪ್ರಚಾರಕ್ಕೆ ಮಾಡಿದ ವಿಡಿಯೋ ಅದು. ಅದನ್ನು ಕಟ್‌ ಮಾಡಿ ಈ ವಿಚಾರಕ್ಕೆ ಕನೆಕ್ಟ್‌ ಮಾಡಿ ವೈರಲ್‌ ಮಾಡಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next