Advertisement

ಬೆಟ್ಟದ ಮೇಲಿನ ದೇವಿ ಬಟ್ಟಲು

10:19 AM Jul 14, 2019 | Vishnu Das |

ಮೈಸೂರಿನ ಚಾಮುಂಡೇಶ್ವರಿಯ ದರ್ಶನ ಒಂದು ಪರಮಾದ್ಭುತ ಅನು ಭೂತಿ. ಮೈಸೂರು ಸಂಸ್ಥಾನವನ್ನಾಳಿದ ಯದುವಂಶದ ಕುಲದೇವತೆ ಅಲ್ಲದೇ, “ನಾಡದೇವತೆ’ ಅಂತಲೂ ಕರೆಯಲ್ಪಡುವ ದೇವಿಯ ಕ್ಷೇತ್ರದಲ್ಲಿ ನಿತ್ಯ ಅನ್ನ ಸಂತರ್ಪಣೆಯೂ ವಿಶೇಷವೇ…

Advertisement

ಅನ್ನದಾನ ಸಾಗಿ ಬಂದಿದ್ದು…
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಈ ಪುರಾತನ ದೇಗುಲದಲ್ಲಿ ದಾಸೋಹ ಶುರು ವಾ ಗಿ ದ್ದು, 2004ರಲ್ಲಿ. ಅದೂ ಮಂಗಳವಾರ ಮತ್ತು ಶುಕ್ರವಾರಗಳಂದು ಮಧ್ಯಾಹ್ನ ಮಾತ್ರವೇ ಇತ್ತು. 2009ರಲ್ಲಿ ಅದನ್ನು ವಾರದ ಎಲ್ಲಾ ದಿನಗಳಲ್ಲೂ ಮಧ್ಯಾಹ್ನಕ್ಕೆ ವಿಸ್ತರಿಸಲಾಯಿತು. 2018ರ ಮಾರ್ಚ್‌ನಿಂದ ಬೆಳಗಿನ ಉಪಾಹಾರ ಸೇರಿದಂತೆ ಮಧ್ಯಾಹ್ನ ಮತ್ತು ರಾತ್ರಿ ದಾಸೋಹ ನಡೆಯುತ್ತಿದೆ.

ಮೆನು ಏನು?
ಉಪಾಹಾರ (ಬೆಳಗ್ಗೆ 7.30 ರಿಂದ 10)
ಸೋಮವಾರ: ಉಪ್ಪಿಟ್ಟು- ಕೇಸರಿ ಬಾತ್‌
ಮಂಗಳವಾರ: ಖಾರ ಪೊಂಗಲ್‌- ಸಿಹಿ ಪೊಂಗಲ್‌
ಬುಧವಾರ: ಬಿಸಿ ಬೇಳೆಬಾತ್‌
ಗುರುವಾರ: ಹುಳಿ ಅನ್ನ
ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಲಭ್ಯವಿರುವ ತರಕಾರಿ ಬಾತ್‌

ಮಧ್ಯಾಹ್ನ: ಅನ್ನ- ಸಾಂಬಾರ್‌- ಮೊಸರನ್ನ- ಪಾಯಸ (ಮಧ್ಯಾಹ್ನ 12 ರಿಂದ 3.30 ಗಂಟೆ)
ರಾತ್ರಿ- ತರಕಾರಿ ಬಾತ್‌ (ಅನ್ನ- ಸಾಂಬಾರ್‌ ಇರಲ್ಲ) (ರಾತ್ರಿ 7.30 ರಿಂದ 9 ಗಂಟೆ)
(ನಿತ್ಯ 3 ಹೊತ್ತಿನ ದಾಸೋಹದಲ್ಲೂ ಒಂದಲ್ಲಾ ಒಂದು ಸಿಹಿ ಇರುತ್ತೆ)

Advertisement

ನಿತ್ಯ 6 ಸಾವಿರ ಭಕ್ತ ರಿಗೆ ಊಟ
ಇಲ್ಲಿ ನಿತ್ಯ 5 ರಿಂದ 6 ಸಾವಿರ ಭಕ್ತರು ದೇವಿಯ ಭೋಜನ ಪ್ರಸಾದ ಸೇವಿಸುತ್ತಾರೆ. ಸಾಮಾನ್ಯವಾಗಿ ಬೆಳಗಿನ ಉಪಾಹಾರಕ್ಕೆ 2 ರಿಂದ 2500 ಭಕ್ತರು, ಮಧ್ಯಾಹ್ನ 3 ಸಾವಿರ, ರಾತ್ರಿ 700 ರಿಂದ 800 ಭಕ್ತರು ದಾಸೋಹ ಸವಿಯುತ್ತಾರೆ.

ದಾಸೋಹ ಭವನ ಹೇಗಿದೆ?
ಕೆಳ ಭಾಗದಲ್ಲಿ 500 ಜನರು ಕುಳಿತು ಊಟ ಮಾಡಬಹುದಾದ ದೊಡ್ಡ ಹಾಲ್‌ ಇದೆ. ಮೇಲ್ಭಾಗದಲ್ಲಿ ಬಫೆ ವ್ಯವಸ್ಥೆ. ಸ್ಟೀಲ್‌ ತಟ್ಟೆ- ಲೋಟ ಬಳ ಕೆ.

ಯಾವಾಗ ದಟ್ಟಣೆ?
ಮಂಗಳವಾರ, ಶುಕ್ರ ವಾರ ಹಾಗೂ ಅಮವಾಸ್ಯೆ, ಸರ್ಕಾರಿ ರಜಾ ದಿನಗಳಲ್ಲಿ ಮಧ್ಯಾಹ್ನದ ದಾಸೋಹಕ್ಕೆ ಭಕ್ತರ ದಟ್ಟಣೆ ಹೆಚ್ಚಿರುತ್ತೆ.

ಭಕ್ತರ ಭೋಜನ ಸೇವೆ
ಆಷಾಢ ಶುಕ್ರವಾರಗಳು ಮತ್ತು ಅಮ್ಮನವರ ವರ್ಧಂತಿಯ ದಿನ ಚಾಮುಂಡಿ ಬೆಟ್ಟಕ್ಕೆ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ. ಈ ವೇಳೆ ಭಕ್ತರೇ ದಾಸೋಹ ಏರ್ಪಡಿಸುತ್ತಾ ಬಂದಿದ್ದಾರೆ.

ತರ ಕಾರಿ ಸಂಗ್ರ ಹ  ಪವಾ ಡ
ತರಕಾರಿಯನ್ನು ದಿನ ಬಿಟ್ಟು ದಿನ ಮೈಸೂರಿನ ಎಪಿಎಂಸಿ ವರ್ತಕರು, ದಾನಿಗಳು ದೇವಿಯ ಸೇವೆಗಾಗಿ ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ದೇವಸ್ಥಾನದ ಆಟೋ ಎಪಿಎಂಸಿಗೆ ಹೋಗಿ ನಿಂತ ಕೂಡಲೇ ವರ್ತಕರು ಸ್ವಯಂಪ್ರೇರಿತರಾಗಿ ತರಕಾರಿಗಳನ್ನು ತುಂಬಿ ಕಳುಹಿಸುವುದು ವಿಶೇ ಷ.

50 ಲೀ. ಹಸು ವಿನ ಹಾಲು
ಇಲ್ಲಿ 10 ಹಸುಗಳನ್ನು ಸಾಕಲಾಗಿದ್ದು, ನಿತ್ಯ 40 ರಿಂದ 50 ಲೀಟರ್‌ ಹಾಲು ದೊರೆಯುತ್ತದೆ. ದೇವಿಗೆ ಅಭಿಷೇಕಕ್ಕೆ ಬಳಸಿದ ನಂತರ ಈ ಹಾಲನ್ನು ಕಾಯಿಸಿ ಹೆಪ್ಪು ಹಾಕಿ, ಮೊಸರು ಮಾಡಿ ಮೊಸರನ್ನಕ್ಕೆ ಬಳಸಲಾಗುತ್ತದೆ.

ಸಂಖ್ಯಾ ಸೋಜಿ ಗ
3 ಬಾಣಸಿಗರಿಂದ ಅಡುಗೆ ತಯಾರಿ
4 ಕ್ವಿಂಟಲ್‌ ಅಕ್ಕಿ, ಒಂದು ಹೊತ್ತಿಗೆ
6 ಕ್ವಿಂಟಲ್‌ ಅಕ್ಕಿ, ದಟ್ಟಣೆ ಇದ್ದಾಗ
8 ಗ್ಯಾಸ್‌ ಒಲೆಗಳಲ್ಲಿ ಅಡುಗೆ
10 ಸ್ವತ್ಛತೆಗೆ ನೆರವಾಗುವ ಮಹಿಳಾ ಸಿಬ್ಬಂದಿ
15 ಅಡುಗೆ ಸಹಾಯಕರ ನೆರವು
10,000 ಲೀಟರ್‌, ನಿತ್ಯ ನೀರು ಬಳಕೆ

ವಿ.ಸೂ: ಹರಕೆ ಹೊತ್ತ ಭಕ್ತರು ದೇವಸ್ಥಾನದ ಆಡಳಿತ ಮಂಡಳಿಗೆ 15 ಸಾವಿರ ರೂ. ಪಾವತಿಸಿದರೆ, ಅವರ ಹೆಸರಿನಲ್ಲಿ ಒಂದು ಹೊತ್ತಿನ ದಾಸೋಹದ ವ್ಯವಸ್ಥೆ ಮಾಡಲಾಗುತ್ತದೆ.

ದೇವಿಯ ದರ್ಶನಕ್ಕಾಗಿ ಹೊರಗಿನಿಂದ ಬರುವ ಭಕ್ತರಿಗೆ, ದಿನದ ಮೂರು ಹೊತ್ತು ಸಿಹಿಯ ಜೊತೆಗೆ ಅನ್ನ ದಾಸೋಹ ಸೇವೆ ಮಾಡುತ್ತಾ ಬರಲಾಗುತ್ತಿದೆ.
– ಬಸವಣ್ಣ, ದಾಸೋಹ ಭವನದ ಮ್ಯಾನೇಜರ್‌

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next