ಥಾಣೆ: ಥಾಣೆ ಪರಿಸರದ ವೀರ ಸಾವರ್ಕರ್ ನಗರದಲ್ಲಿರುವ ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು ಇವರ ನೇತೃತ್ವದ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಇದರ ವಾರ್ಷಿಕ ನವರಾತ್ರಿ ಉತ್ಸವದ ನಿಮಿತ್ತ ಅ. 16 ರಂದು ಸಂಜೆ ಮಂತ್ರಕಲ್ಲುರ್ಟಿ ಮತ್ತು ಕವಡೆಯ ಪಂಜುರ್ಲಿ ದೈವ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಂತ್ರ ಕಲ್ಲುರ್ಟಿಯ ದೈವಪಾತ್ರಿಯಾಗಿ ದೈವಪಾತ್ರಿ ಕಟಪಾಡಿ ಸನ್ನಿಧ್ ಪೂಜಾರಿ ಹಾಗೂ ಕವಡೆಯ ಪಂಜುರ್ಲಿ ದೈವ ಪಾತ್ರಿಯಾಗಿ ಶುಭಕರ ಪೂಜಾರಿ ಮತ್ತು ಖಾರೆಗಾಂವ್ ಇವರು ಸೇವೆಗೈದರು. ಮಧುಕರ್ತರಾಗಿ ಭಾಗವತರಾದ ಮುದ್ದು ಪೂಜಾರಿ ಹಾಗೂ ಸಂಜೀವ ಮೂಲ್ಯ ಇವರು ಸಹಕರಿಸಿದರು.
ಕ್ಷೇತ್ರದ ರೂವಾರಿ ಶಿವಪ್ರಸಾದ್ ಪೂಜಾರಿ ಪುತ್ತೂರು ಇವರು ಈ ವರ್ಷದ ಕಲ್ಲುರ್ಟಿ ಮತ್ತು ಪಂಜುರ್ಲಿ ದರ್ಶನದ ಸೇವೆಯನ್ನು ತಂತ್ರಿಗಳವರ ಮಾರ್ಗದರ್ಶನದ ಮುಖಾಂತರ ನಡೆಸಿದರು. ಮರು ದಿವಸ ತಿಂಗಳ ಸಂಕ್ರಮಣ ಪೂಜೆಯು ಬೆಳಗ್ಗೆ 7 ರಿಂದ ಗಣಹೋಮ, ಕೆ. ಎಸ್. ತಂತ್ರಿ ಹಾಗೂ ಬಳಗದವರಿಂದ ಮತ್ತು ಮಧ್ಯಾಹ್ನ 12ರಿಂದ ಗಂಟೆಗೆ ದೇವಿಗೆ ಹಾಗೂ ದೈವಗಳಿಗೆ ಪಂಚಕಜ್ಜಾಯ ಸೇವೆಯು ನಡೆದು ಮಹಾಆರತಿ ನಂತರ ಅನ್ನದಾನವು ನಡೆಯಿತು.
ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ, ಜಯಂತ್ ಮಟ್ಟು , ಲಕ್ಷಿ¾àಶ ಶೆಟ್ಟಿ, ಪುರುಷೋತ್ತಮ ಪೂಜಾರಿ, ಸತೀಶ್ ಶೆಟ್ಟಿ, ವಸಂತ್ ಕುಂದರ್, ಲಿಗೋರಿ ಪಿರೇರಾ, ಅಶ್ವಿನ್ ಅಮೀನ್, ಪ್ರವೀಣ್ ಶೆಟ್ಟಿ, ಸುಧಾಕರ್ ನಾಯಕ್, ಹರೀಶ್ ಪೂಜಾರಿ ಕಡ್ತಲ, ರಾಧಾಕೃಷ್ಣ ಶೆಟ್ಟಿ, ಜಯ ಪೂಜಾರಿ ಕೆರ್ವಾಶೆ, ಸತೀಶ್ ಪೂಜಾರಿ ಹೀರೆಬಂಡಾಡಿ, ಅನಂತ್ ಸಾಲ್ಯಾನ್, ಸಂಜೀವ ಎಸ್. ಪೂಜಾರಿ, ಅಗ್ನೇಶ್ ಸಾಲ್ಯಾನ್, ಶ್ರೀ ಕೃಷ್ಣ ವಲ್ವಲ್ಕರ್, ಸುರೇಶ್ ಶೆಟ್ಟಿ ವಿಕ್ರೋಲಿ, ರಘು ಪೂಜಾರಿ ಲಕ್ಷ್ಮೀಪಾರ್ಕ್, ಬ್ರಾಹ್ಮಣರಾದ ಸುಬ್ಬರಾವ್ ದಂಪತಿ, ಸಮಾಜ ಸೇವಕ ರವೀಂದ್ರ ಎಸ್ ಕರ್ಕೇರ, ಯುವ ಬರಹಗಾರ ಪ್ರಭಾಕರ್ ಬೆಳುವಾಯಿ ದಂಪತಿ, ಚಲನಚಿತ್ರ, ರಂಗನಟ ಹಾಗೂ ನಿರ್ದೇಶಕರಾದ ಮನೋಹರ ನಂದಳಿಕೆ, ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಮಾಧವ್ ಪಡೀಲ್ ದಂಪತಿ, ಗೌರವಾಧ್ಯಕ್ಷರಾದ ಭಾಸ್ಕರ್ ಸುವರ್ಣ ಸಸಿಹಿತ್ಲು, ಕಾರ್ಯದರ್ಶಿಯಾದ ಪ್ರಸನ್ನ ಶೆಟ್ಟಿ ಕುಂಟಾಡಿ, ತನುಜಾ ಎಸ್. ಶೆಟ್ಟಿ, ಸತೀಶ್ ದೇವಾಡಿಗ ಹಾಗೂ ಮಹಿಳಾ ವಿಭಾಗದ ಆಶಾ ಎಸ್. ಪೂಜಾರಿ, ಪ್ರೀತಿಕಾ ಸುರೇಶ್ ಶೆಟ್ಟಿ, ಲತಾ ಶೇಖರ್ ಸಾಲ್ಯಾನ್, ಉಷಾ ಜಯ ಪೂಜಾರಿ, ಥಾಣೆ ಶ್ರೀ ಶಕ್ತಿ ಮಹಿಳಾ ಮಂಡಲದ ಹಾಗೂ ಥಾಣೆ ಬಿಲ್ಲವರ ಅಸೋಸಿಯೇಶನ್‌ನ ಪ್ರಮುಖರಾದ ಪೂರ್ಣಿಮಾ ಸುಧಾಕರ್ ಪೂಜಾರಿ, ವಾರಿಜಾ ಶೆಟ್ಟಿ, ಲತಾ ಪೂಜಾರಿ, ಗೀತಾ ದಾಭೋಲ್ಕರ್ ದಂಪತಿ ಸೇರಿದಂತೆ ಅನೇಕ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.