ಎಚ್‌ಐವಿ ಪೀಡಿತರ ಬದುಕನ್ನು ಹಸನುಗೊಳಿಸಲು, ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನ ಹಲವಾರು ಸಂಘ-ಸಂಸ್ಥೆಗಳು ದುಡಿಯುತ್ತಿವೆ. ಅದರಲ್ಲಿ “ಚಾಂಪಿಯನ್ ಇನ್ ಮಿ'(ಸಿ.ಐ.ಎಂ) ಕೂಡಾ ಒಂದು. ಈ ಬಾರಿ, ವಿಶ್ವ ಏಡ್ಸ್ ದಿನದ ಅಂಗವಾಗಿ, ಸಿಐಎಂನ 10ನೇ ಆವೃತ್ತಿಯ ಕ್ರೀಡಾಕೂಟ, ನವೆಂಬರ್ 24ರಂದು, ಸಜಾìಪುರ್ ರಸ್ತೆಯ ಸ್ನೇಹದಾನ್ ಕ್ಯಾಂಪಸ್‌ನಲ್ಲಿ ನಡೆಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿ.ಐ.ಎಂ, ಬೆಂಗಳೂರು ಸ್ಕೂಲ್ ನ್ಪೋರ್ಟ್ಸ್ ಫೌಂಡೇಷನ್(ಬಿಎಸ್‌ಎಸ್‌ಎಫ್) ಶುರು ಮಾಡಿರುವ ಕ್ರೀಡಾ ಆಂದೋಲನ. ಎಚ್.ಐ.ವಿ ಸೋಂಕುಳ್ಳ ಮಕ್ಕಳು ಕೂಡ, ಎಲ್ಲರಂತೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂಬ ಗುರಿ ಹೊಂದಿದೆ. ಇಲ್ಲಿಯ ತನಕ ದೇಶಾದ್ಯಂತ ಸುಮಾರು 3,000 ಮಕ್ಕಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಬಾಬು, ಮಾಣಿಕ್, ಪ್ರಿಯಾಂಕ, ಭವಾನಿ, ಲಕ್ಷಿ$¾ಕಾಂತ್, ಕಾಳೇಶ್ವರ, ಅಶ್ವಿನಿ, ಶ್ರುತಿ ಮುಂತಾದ ಮಕ್ಕಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಅಥ್ಲೆಟಿಕ್ ಕೂಟಗಳಲ್ಲಿ ಮಿಂಚಿದ್ದಾರೆ.