Advertisement

ಗಡಿನಾಡಿಗೆ ಚಂಪಾ ಕೊಡುಗೆ ಅಪಾರ: ಬೆಳ್ಳುಬ್ಬಿ

12:20 PM Jan 14, 2022 | Team Udayavani |

ಸೊಲ್ಲಾಪುರ: ಗಡಿನಾಡು ಕನ್ನಡಿಗರು ಸಾಹಿತಿ ದಿ. ಚಂದ್ರಶೇಖರ ಪಾಟೀಲ ಅವರ ಖುಣ ತೀರಿಸಲು ಸಾಧ್ಯವಿಲ್ಲ ಎಂದು ಕನ್ನಡ ಹೋರಾಟಗಾರ ಸುಭಾಷ ಬೆಳ್ಳುಬ್ಬಿ ಹೇಳಿದರು.

Advertisement

ಜತ್ತ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಮಾಧ್ಯಮ ವಿದ್ಯಾ ಲಯದ ಸಂಯುಕ್ತ ಆಶ್ರಯದಲ್ಲಿ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿ ದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಂಪಾ ಅವರು “ಕನ್ನಡ-ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಚಂಪಾ ಕನ್ನಡಿಗರಿಗೆ ಕರೆ ಕೊಟ್ಟಿದ್ದರು. ಅದರಂತೆ ನಾವೆಲ್ಲ ಒಟ್ಟಾಗಿ ಗಡಿ ಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಿ.ಎಸ್‌. ಕುಂಬಾರ ಮಾತನಾಡಿ, ಚಂಪಾ ಬಹುಮುಖ ಪ್ರತಿಭೆ. ನಾಡು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕ್‌ಜಾನ್‌ ಶೇಖ ಮಾತನಾಡಿ, ಮಹಾಜನ್‌ ವರದಿ ಯಥಾವತ್ತಾಗಿ ಜಾರಿ ಆಗಬೇಕೆಂಬುದು ಚಂಪಾ ಅವರ ಆಶಯವಾಗಿತ್ತು. ಜತ್ತ ಮತ್ತು ಅಕ್ಕಲಕೋಟ ತಾಲೂಕಿನ ಕನ್ನಡರೂ ನಮ್ಮವರು ಎನ್ನುವ ಕಾಳಜಿ ಅವರಲ್ಲಿತ್ತು. ಅವರು ಗಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ ಎಂದು ಹೇಳಿದರು.

ಚಂಪಾ ಪ್ರತಿಮೆ ಹಾಗೂ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠಗೆ ಕನ್ನಡ ಮಾಧ್ಯಮ ವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್‌. ಸೋಲಾಪುರೆ ಹಾಗೂ ಜತ್ತ ತಾಲೂಕಿನ ಸಾಹಿತ್ಯಾಸಕ್ತರು, ಹೋರಾಟಗಾರರು, ಪ್ರಾಥಮಿಕ ಶಾಲೆ ಶಿಕ್ಷಕರು, ವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸಿದರು. ಬಿ ಜಿ ಕುಂಬಾರ ನಿರೂಪಿಸಿದರು, ಆರ್‌.ಜಿ. ವಾಳವೇಕರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next