Advertisement

ಚಾಮರಿ ಅತ್ತಪಟ್ಟು ಔಟಾಗದೆ 178

03:35 AM Jun 30, 2017 | Team Udayavani |

ಬ್ರಿಸ್ಟಲ್‌: ಚಾಮರಿ ಅತ್ತಪಟ್ಟು ಅವರ ಆಕರ್ಷಕ ಅಜೇಯ 178 ರನ್‌ ನೆರವಿನಿಂದ ಶ್ರೀಲಂಕಾ ತಂಡವು ಐಸಿಸಿ ವನಿತಾ ವಿಶ್ವಕಪ್‌ನ ಗುರುವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡದೆದುರು 9 ವಿಕೆಟಿಗೆ 257 ರನ್ನುಗಳ ಉತ್ತಮ ಮೊತ್ತ ಪೇರಿಸಿದೆ.

Advertisement

ಚಾಮರಿ ಅತ್ತಪಟ್ಟು ಅವರ ಶತಕದಾಟ  ಶ್ರೀಲಂಕಾ ಇನ್ನಿಂಗ್ಸ್‌ನ ಆಕರ್ಷಣೆಯಾಗಿತ್ತು. ಆಸೀಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ಬಹುತೇಕ ಪೂರ್ತಿ 50 ಓವರ್‌ ಆಡಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. 143 ಎಸೆತ ಎದುರಿಸಿದ ಅವರು 22 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್‌ ಸಿಡಿಸಿ ಸಂಭ್ರಮಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. 111 ರನ್‌ ಗಳಿಸಿದ್ದು ಅವರ ಈ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು. 

ಚಾಮರಿ ಅತ್ತಪಟ್ಟು ಅವರನ್ನು ಹೊರತುಪಡಿಸಿದರೆ 24 ರನ್‌ ಗಳಿಸಿದ ಶಶಿಕಲಾ ಸಿರಿವರ್ಧನೆ ತಂಡದ ಎರಡನೇ ಗರಿಷ್ಠ ಸ್ಕೋರರ್‌ ಆಗಿದ್ದಾರೆ. ಇವರಿಬ್ಬರ ಸಹಿತ ಇಶಾನಿ ಲೋಕುಸಿರಿಯಾಗೆ ಮಾತ್ರ ಎರಡಂಕೆಯ ಮೊತ್ತ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next