Advertisement

ಸಮಸ್ಯೆ ಆಲಿಸಿ ಗ್ರಾಮದಲ್ಲಿ ತಂಗಿದ ಚಾಮರಾಜನಗರ ಡೀಸಿ

07:00 PM Mar 21, 2021 | Team Udayavani |

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಪಾಲ್ಗೊಂಡು ಜನರ ಸಮಸ್ಯೆ ಗಳನ್ನು ಆಲಿಸಿದರು.

Advertisement

ಬಳಿಕ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದರು. ಕೊಡಸೋಗೆ ಗ್ರಾಮದ ಪ್ರಾಥಮಿಕ ಶಾಲೆಯ ಅವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಜಿಲ್ಲಾಧಿಕಾರಿ ಸ್ಥಳೀಯ ಗ್ರಾಮೀಣರ ಕುಂದುಕೊರತೆ ಆಲಿಸಿದರು. ವಿದ್ಯುತ್‌ ಸಂಪರ್ಕ, ಬೀದಿದೀಪ, ಸೊಸೈಟಿ ಗಳಿಂದ ಸಾಲ ವಿತರಣೆ, ವಿಕಲಚೇತನರ ಪಿಂಚಣಿ, ನೀರಿನ ಸಮಸ್ಯೆ, ರಸ್ತೆ, ಒಳಚರಂಡಿ, ನಿವೇ ಶನ, ಖಾತೆ ಬದಲಾವಣೆ, ಆರ್‌ಟಿಸಿ ತಿದ್ದು ಪಡಿ, ಸಾಗುವಳಿ ಚೀಟಿ ವಿತರಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸ್ಥಳೀಯ ಗ್ರಾಮೀಣರು ಜಿಲ್ಲಾಧಿಕಾರಿ ಬಳಿ ಹೇಳಿಕೊಂಡರು.

ವಿದ್ಯುತ್‌ ಸಂಪರ್ಕ ನೀಡಲು ಕಳೆದ 6 ತಿಂಗಳ ಹಿಂದೆ ಅರ್ಜಿ ಹಾಕಿದ್ದರೂ ಕ್ರಮ ವಹಿ ಸದ ವಿದ್ಯುತ್‌ ಸರಬರಾಜು ನಿಗಮದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಸೋಮವಾರವೇ ಸಮಸ್ಯೆ ಇತ್ಯರ್ಥ್ಯಪಡಿಸುವಂತೆ ತಾಕೀತು ಮಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸ್ಥಳೀಯ ಸೊಸೈಟಿಗಳು ಕಳೆದ 4 ವರ್ಷಗಳಿಂದ ಸಾಲ ನೀಡದೇ ವಿವಿಧ ಸಬೂಬು ಹೇಳುತ್ತಿವೆ ಎಂಬ ಬಹುತೇಕರ ಮನವಿ ಆಲಿಸಿದ ಜಿಲ್ಲಾಧಿ ಕಾರಿ ಈ ಸಂಬಂಧ ಎಲ್ಲಾ ದಾಖಲೆಗಳನ್ನು ಉಪವಿಭಾಗಾಧಿಕಾರಿಯವರಿಗೆ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಸಾಲ ನೀಡದಿದ್ದರೇ ಗಂಭೀರ ಕ್ರಮ ಎದುರಿಸಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಡೋಂಗ್ರಿ ಗೆರೆಶೀಯಾ ಜನಾಂಗದವರಿಗೆ ಒದಗಿಸಬೇಕಿರುವ ಭೂಮಿ ಸಂಬಂಧ ಕ್ರಮ ತೆಗೆದುಕೊಳ್ಳಲಾಗುವುದು. ಪಕಾರ ಕಾಲೋನಿ, ಕೊಡಸೋಗೆ ಮತ್ತಿತರೆಡೆ ಉಂಟಾಗಿರುವ ನೀರಿನ ತೊಂದರೆ ಪರಿಹರಿಸುವುದಾಗಿ ತಿಳಿಸಿದರು. ನಿವೇಶನಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳು, ಪಡಿತರ ಚೀಟಿ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಒದಗಿಸಲು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ದಿವ್ಯಾಂಗ ಫ‌ಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.

ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಪಿಂಚಣಿ ಮಂಜೂರಾತಿ ಪತ್ರ ನೀಡಲಾಯಿತು. ವಿದ್ಯಾ ರ್ಥಿ ಗಳಿಗೆ ಸಮವಸ್ತ್ರ ವಿತರಿಸಲಾಯಿತು. ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಅಂಬೇಡ್ಕರ್‌ ವಸತಿ ಶಾಲೆ ಮತ್ತು ಸ್ಮಶಾನ ಜಾಗಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷೆ ಶೋಭಾ ನಾಗಲಾಂಬಿಕೆ, ಸದಸ್ಯೆ ವನಿತಾ, ಹೆಚ್ಚು ವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್‌ ದಿಲೀಪ್‌ ಬಡೋಲೆ, ತಹಶೀಲ್ದಾರ್‌ ರವಿಶಂಕರ್‌, ಗ್ರಾಮದ ಮುಖಂಡ ಕೊಡಸೋಗೆ ಶಿವಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next