Advertisement

ಚಾಮರಾಜನಗರ ಜಿಲ್ಲೆ: ತಾಲೂಕುವಾರು ಗ್ರಾ.ಪಂ.ಗಳ ಮೀಸಲಾತಿ ಪ್ರಮಾಣ ನಿಗದಿ

10:11 PM Jan 02, 2021 | Team Udayavani |

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ, ಪ್ರತಿ ತಾಲೂಕುಗಳ ಗ್ರಾ.ಪಂ.ಗಳಲ್ಲಿ ಮೊದಲ 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ, ಪ್ರವರ್ಗಗಳ ಪ್ರಮಾಣವನ್ನು ನಿಗದಿ ಪಡಿಸಿ ಮೀಸಲಾತಿ ಪ್ರಕಟಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Advertisement

ರಾಜ್ಯದ ಪ್ರತಿ ಜಿಲ್ಲೆಯ, ತಾಲೂಕುಗಳೊಳಗಿರುವ ಒಟ್ಟು ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಇಂತಿಷ್ಟೇ ಪ್ರಮಾಣದಲ್ಲಿ ಎಸ್‌ಸಿ, ಎಸ್‌ಟಿ, ಬಿಸಿಎಂ ಎ, ಬಿಸಿಎಂ ಬಿ ಮತ್ತು ಸಾಮಾನ್ಯ ವರ್ಗಕ್ಕೆ ನಿಗದಿಯಾಗಬೇಕೆಂದು ಆಯೋಗ ಮಾರ್ಗಸೂಚಿ ನೀಡಿದೆ.

ಇದರಂತೆ ಚಾಮರಾಜನಗರ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣದ ವಿವರ ಇಂತಿದೆ.
ಚಾಮರಾಜನಗರ ತಾಲೂಕು: ತಾಲೂಕಿನಲ್ಲಿ ಒಟ್ಟು 43 ಗ್ರಾಮ ಪಂಚಾಯಿತಿಗಳಿದ್ದು, ಇವುಗಳಲ್ಲಿ ಒಟ್ಟಾರೆ ಎಲ್ಲ ಪ್ರವರ್ಗ ಸೇರಿ 22 ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿರಬೇಕು. 12 ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳು ಪರಿಶಿಷ್ಟ ಜಾತಿಗೆ ಮೀಸಲಾಗಿರಬೇಕು. ಇದರಲ್ಲಿ 6 ಸ್ಥಾನಗಳು ಪ.ಜಾತಿ ಮಹಿಳೆಯರಿಗೆ ಮೀಸಲಾಗಿರಬೇಕು. 5 ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿರಬೇಕು. ಇದರ ಪೈಕಿ 3 ಮಹಿಳೆಯರಿಗೆ ಮೀಸಲು. 3 ಸ್ಥಾನ ಬಿಸಿಎಂ ಎ ಗೆ ಮೀಸಲಾಗಿರಬೇಕು. ಅದರೊಳಗೆ 2 ಮಹಿಳೆಯರಿರಬೇಕು. 1 ಸ್ಥಾನ ಬಿಸಿಎಂ ಬಿಗೆ ಮಿಸಲಾಗಿರಬೇಕು. 22 ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಬೇಕು. ಈ ಸಾಮಾನ್ಯದೊಳಗೆ 11 ಮಹಿಳೆಯರಿಗೆ ಮೀಸಲಾಗಿರಬೇಕು.

ಇದನ್ನೂ ಓದಿ;ಚುನಾವಣೆಯಲ್ಲಿ ಗೆದ್ದ ಸದಸ್ಯನಿಗೆ ಬೈಕ್ ಕೊಳ್ಳಲು 1ಲಕ್ಷ ರೂ. ನೀಡಿದ ಬೆಂಬಲಿಗರು

ಕೊಳ್ಳೇಗಾಲ ತಾಲೂಕು: ತಾಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ ಎಲ್ಲ ಪ್ರವರ್ಗವೂ ಸೇರಿದಂತೆ 8 ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಬೇಕು. 7 ಹುದ್ದೆಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಇದರೊಳಗೆ 4 ಸ್ಥಾನ ಮಹಿಳೆಗೆ ಮೀಸಲು. 2 ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಅದರಲ್ಲಿ 1 ಸ್ಥಾನ ಮಹಿಳೆಯರಿಗೆ ಮೀಸಲು. ಕೊಳ್ಳೇಗಾಲ ತಾಲೂಕಿನಲ್ಲಿ ಬಿಸಿಎಂ ಎ ಹಾಗೂ ಬಿಸಿಎಂ ಬಿಗೆ ಯಾವುದೇ ಮೀಸಲಾತಿ ಇಲ್ಲ. 7 ಸ್ಥಾನಗಳು ಸಾಮಾನ್ಯ ವರ್ಗಕ್ಕಿದ್ದು, ಅದದರಲ್ಲಿ 3 ಮಹಿಳೆಯರಿಗೆ ಮೀಸಲು.

Advertisement

ಹನೂರು ತಾಲೂಕು: ತಾಲೂಕಿನಲ್ಲಿ ಒಟ್ಟು 25 ಗ್ರಾ.ಪಂ.ಗಳಿದ್ದು, ಎಲ್ಲ ಪ್ರವರ್ಗವೂ ಸೇರಿ 13 ಸ್ಥಾನ ಮಹಿಳೆಯರಿಗೆ ಮೀಸಲು. 6 ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಅದರೊಳಗೆ 3 ಸ್ಥಾನ ಮಹಿಳೆಯರಿಗೆ ಮೀಸಲು. 3 ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, 2 ಸ್ಥಾನ ಮಹಿಳೆಯರಿಗೆ ನೀಡಬೇಕು. ಬಿಸಿಎಂ ಎ ಗೆ 2 ಸ್ಥಾನ ನೀಡಿದ್ದು, 2 ಸ್ಥಾನವೂ ಆ ಪ್ರವರ್ಗದ ಮಹಿಳೆಗೇ ಮೀಸಲು. 1 ಸ್ಥಾನ ಬಿಸಿಎಂ ಬಿ ಗೆ ಮೀಸಲು. 13 ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇದರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲು.

ಇದನ್ನೂ ಓದಿ:ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಿಡಿಸಿದ ಪಟಾಕಿಗೆ ನೂರೂರು ಹಕ್ಕಿಗಳು ಬಲಿ

ಗುಂಡ್ಲುಪೇಟೆ ತಾಲೂಕು: ತಾಲೂಕಿನಲ್ಲಿ 34 ಗ್ರಾ.ಪಂ.ಗಳಿದ್ದು, ಎಲ್ಲ ಪ್ರವರ್ಗ ಸೇರಿ 17 ಮಹಿಳೆಯರಿಗೆ ಮೀಸಲು. 6 ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಅದರೊಳಗೆ 3 ಸ್ಥಾನ ಮಹಿಳೆಯರಿಗೆ ನಿಗದಿಯಾಗಿದೆ. 4 ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಇದರಲ್ಲಿ 2 ಮಹಿಳೆಯರಿಗೆ ಮೀಸಲು. ಬಿಸಿಎಂ ಎ ಗೆ 6, ಇದರಲ್ಲಿ 3 ಮಹಿಳೆಯರಿಗೆ ನೀಡಬೇಕು. ಬಿಸಿಎಂ ಬಿ ಗೆ 1 ಸ್ಥಾನ ನೀಡಿದ್ದು, ಅದು ಮಹಿಳೆಗೇ ಮೀಸಲು. 17 ಹುದ್ದೆ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು, ಅದರಲ್ಲಿ 8 ಸ್ಥಾನ ಮಹಿಳೆಯರಿಗೆ ಮೀಸಲು.

ಯಳಂದೂರು ತಾಲೂಕು: ತಾಲೂಕಿನಲ್ಲಿ ಒಟ್ಟು 12 ಗ್ರಾ.ಪಂ.ಗಳಿದ್ದು ಎಲ್ಲ ಪ್ರವರ್ಗ ಸೇರಿ 6 ಸ್ಥಾನ ಮಹಿಳೆಯರಿಗೆ ಮೀಸಲು. 4 ಪರಿಶಿಷ್ಟ ಜಾತಿ ಮೀಸಲು. ಇದರಲ್ಲಿ 2 ಮಹಿಳೆಯರಿಗೆ. 2 ಪರಿಶಿಷ್ಟ ಪಂಗಡಕ್ಕೆ ಮೀಸಲು. ಇದರಲ್ಲಿ 1 ಮಹಿಳೆಯರಿಗೆ. ಈ ತಾಲೂಕಿನಲ್ಲಿ ಬಿಸಿಎಂ ಎ ಮತ್ತು ಬಿಸಿಎಂ ಬಿ ಗೆ ಯಾವುದೇ ಮೀಸಲಾತಿ ಇಲ್ಲ. ಸಾಮಾನ್ಯ ವರ್ಗಕ್ಕೆ 6 ಸ್ಥಾನ ನಿಗದಿಪಡಿಸಿದ್ದು, ಇದರಲ್ಲಿ 3 ಮಹಿಳೆಯರಿಗೆ ಮೀಸಲು.

Advertisement

Udayavani is now on Telegram. Click here to join our channel and stay updated with the latest news.

Next