Advertisement

36 ಸಾವು: 20 ದಿನ ಕಳೆದರೂ ಶಿಸ್ತು ಕ್ರಮ ಇಲ್ಲ

04:55 PM May 22, 2021 | Team Udayavani |

ಚಾಮರಾಜನಗರ: ನಗರದ ಜಿಲ್ಲಾ ಕೋವಿಡ್‌ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಮುಗಿದುರೋಗಿಗಳು ಮೃತಪಟ್ಟ ದುರಂತ ಸಂಭವಿಸಿ 20ದಿನಗಳು ಕಳೆದರೂ, ರಾಜ್ಯ ಕಾನೂನು ಸೇವೆಗಳಪ್ರಾಧಿಕಾರದ ಸಮಿತಿ ವರದಿ ನೀಡಿ ತಪ್ಪಿತಸ್ಥರ ವಿವರ ನೀಡಿದ್ದರೂ, ರಾಜ್ಯ ಸರ್ಕಾರ ಯಾರ ವಿರುದ್ಧವೂಕ್ರಮ ಕೈಗೊಳ್ಳದೇ ಮೌನ ತಾಳಿರುವುದಕ್ಕೆ ಜಿಲ್ಲಾದ್ಯಂತತೀವ್ರ ಟೀಕೆ ವ್ಯಕ್ತವಾಗುತ್ತಿದೆ.

Advertisement

ಮೇ 2ರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಸ್ಥಗಿತದ ತಕ್ಷಣದ ಪರಿಣಾಮ ಮತ್ತು ನಾಲ್ಕು ಗಂಟೆಗಳಕಾಲ ಆಮ್ಲಜನಕ ಪೂರೈಕೆಯೇ ಸ್ಥಗಿತವಾದ ಸಂದರ್ಭದಲ್ಲಿ ಉಂಟಾದ ದುಷ್ಪರಿಣಾಮದಿಂದ ಮಾರನೆಯ ದಿನವೂ ರೋಗಿಗಳು ಸತ್ತಿದ್ದಾರೆಂದು ಕಾನೂನು ಸೇವೆಗಳಪ್ರಾಧಿಕಾರದ ಸಮಿತಿ ಹೈಕೋರ್ಟ್‌ಗೆ ಮೇ 13ರಂದೇವರದಿ ಸಲ್ಲಿಸಿತ್ತು. ಒಟ್ಟಾರೆ ಇದರಿಂದ 36 ಮಂದಿ ಮೃತಪಟ್ಟಿದ್ದಾರೆಂದು ವರದಿ ತಿಳಿಸಿತ್ತು. ಅಲ್ಲದೇ ಆಮ್ಲಜನಕ ಕೊರತೆಯಂತಹ ದೊಡ್ಡ ಪ್ರಮಾದ ನಡೆಯುವ ಮೊದಲೇ ಈ ಬಗ್ಗೆ ಮುಂಜಾಗ್ರತೆ ವಹಿಸದೇ ಜಿಲ್ಲಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ.

ಹಾಗೂಸಿಮ್ಸ್‌ ಡೀನ್‌, ಜಿಲ್ಲಾಸ್ಪತ್ರೆಯ ಪ್ರಭಾರ ಜಿಲ್ಲಾ ಸರ್ಜನ್‌ಅವರಕರ್ತವ್ಯಲೋಪವೂ ಇದೆಯೆಂದು ವರದಿಯಲ್ಲಿಬೊಟ್ಟು ಮಾಡಲಾಗಿತ್ತು. ಈ ವರದಿಯನ್ನಾಧರಿಸಿ ರಾಜ್ಯ ಸರ್ಕಾರ ತಪ್ಪಿತಸ್ಥರ ಕ್ರಮ ಕೈಗೊಳ್ಳುತ್ತದೆಂದೇ ಜಿಲ್ಲೆಯ ಜನರುಭಾವಿಸಿದ್ದರು. ಆದರೆ, ಘಟನೆ ನಡೆದು ದಿನಗಳಾದರೂ, ವೈಫ‌ಲ್ಯಕ್ಕೆ ಕಾರಣರಾದವರ ವಿರುದ್ಧಯಾವುದೇ ಶಿಸ್ತುಕ್ರಮ ಜರುಗಿಸಿಲ್ಲ. ರಾಜ್ಯ ಸರ್ಕಾರದಈ ನಡೆಗೆ ಜಿಲ್ಲಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಳ ಹಂತದ ನೌಕರಸಣ್ಣ ಕರ್ತವ್ಯ ಲೋಪ ಎಸಗಿದರೂ ಸಸ್ಪೆಂಡ್‌ಮಾಡುವ ಸರ್ಕಾರ, ಇಂಥ ದೊಡ್ಡದೊಂದು ದುರಂತನಡೆದರೂ, ಇದಕ್ಕೆ ಯಾರನ್ನೂ ಹೊಣೆ ಮಾಡದೇ,ಶಿಸ್ತು ಕ್ರಮ ಜರುಗಿಸದೇ ಮೌನವಾಗಿರುವುದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಈ ಘಟನೆಯ ಬಗ್ಗೆ ಇನ್ನೂ ಸಮಗ್ರ ತನಿಖೆ ನಡೆಯಬೇಕು. ಸರ್ಕಾರವೇ ಈ ಘಟನೆಯನ್ನು ಮುಚ್ಚಿ ಹಾಕುತ್ತಿದೆ. ಸರ್ಕಾರ ಮನಸ್ಸು ಮಾಡಿದ್ದರೆ ತಕ್ಷಣ ಕ್ರಮಕೈಗೊಳ್ಳಬಹುದಿತ್ತು. ಮುಖ್ಯಮಂತ್ರಿಯವರು ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ಜಿಲ್ಲಾಧಿಕಾರಿ,ಸಿಮ್ಸ್‌ ಡೀನ್‌, ಜಿಲ್ಲಾ ಸರ್ಜನ್‌ರವೈಫ‌ಲ್ಯವನ್ನು ವರದಿ ತಿಳಿಸಿದೆ. ಈ ಘಟನೆಗೆಯಾರೇಕಾರಣರಾಗಲಿ, ಅವರ ವಿರುದ್ಧಸರ್ಕಾರಕ್ರಮಕೈಗೊಳ್ಳಬೇಕು.

Advertisement

●ಚಾ.ರಂ.ಶ್ರೀನಿವಾಸಗೌಡ, ಅಧ್ಯಕ್ಷ, ಕರ್ನಾಟಕಸೇನಾ ಪಡೆ

 

ಕೆ.ಎಸ್‌. ಬನಶಂಕರ  ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next