ಯಳಂದೂರು: ಬುದ್ಧ ಧ್ಯಾನ ಕೇಂದ್ರವನ್ನುಸ್ಥಾಪಿಸಲು ಸ್ಥಳವನ್ನು ನೀಡಲು ಕ್ರಮವಹಿಸಲಾಗುವುದು ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗಹಮ್ಮಿಕೊಂಡಿದ್ದ ಬುದ್ಧ ಧಮ್ಮ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು .ಬುದ್ಧ ಭೂಮಿಯ ಮೊದಲ ಮನಶಾಸ್ತ್ರಜ್ಞನಾಗಿದ್ದ,ಇದರ ಹಿನ್ನೆಲೆಯಲ್ಲಿ ನನ್ನ ದೇಹಕ್ಕೆ, ಮನಸ್ಸಿಗೆಯಾವುದು ಅಪಾಯಕಾರಿ ಅದನ್ನು ತ್ಯಜಿಸಬೇಕು.ಇದರಿಂದ ನಮ್ಮ ಮನಸ್ಸು ಹಾಗೂ ದೇಹಆರೋಗ್ಯವಾಗಿರುತ್ತದೆ. ಇದನ್ನೇ ಪಂಚಶೀಲಗಳಲ್ಲಿ ಹೇಳಲಾಗಿದೆ.
ದೇಹ, ಮನಸ್ಸನ್ನು ವಿಚಲಿತಗೊಳಿಸುವಮಾದಕ ವಸ್ತುಗಳನ್ನು ತ್ಯಜಿಸಬೇಕು. ದೇಹ, ಮನಸ್ಸುಸ್ವಸ್ಥವಾಗಿರ ಬೇಕಾದರೆ ಇದನ್ನು ವರ್ಜಿಸಬೇಕು.ಮದ್ಯಪಾನದಂತಹ ದುಶ್ಚಟಗಳಿಂದದೂರವಿರಬೇಕು. ಇದು ನಕಾರಾತ್ಮಕ ಶಕ್ತಿಗೆ ಎಡೆಮಾಡುತ್ತದೆ. ಇದರಿಂದ ನಮೊಮ್ಮಳಗಿನ, ನಮ್ಮಕುಟುಂಬದ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ.ಹಾಗಾಗಿ ಎಲರಲ್ಲೂ ಬುದ್ಧ ಪ್ರಜ್ಞೆ ಸದಾಜಾಗೃತವಾಗಿರಬೇಕು.
ಇದರ ನಿರಂತರಅಳವಡಿಕೆಯಿಂದ ಉತ್ತಮ ಸಮಾಜ ನಿರ್ಮಾಣಸಾಧ್ಯ ಎಂದರು.ಬುದ್ಧನ ಸಂದೇಶ: ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಬುದ್ಧನ ಸಂದೇಶಗಳುಈ ಹಿಂದೆ ನಗರ ಪ್ರದೇಶ ಹಾಗೂ ಕೆಲ ಪ್ರಜ್ಞಾವಂತನಾಗರಿಕರಲ್ಲಿ ಕಾಣಸಿಗುತ್ತದೆ. ಆದರೆ, ಈಗ ಪ್ರತಿಗ್ರಾಮಗಳ ಮನೆಮನೆಗಳಲ್ಲೂ ಬುದ್ಧನ ಸಂದೇಶಪಂಚಶೀಲಗಳ ತಿಳಿವಳಿಕೆ ಮೂಡುತ್ತಿದೆ. ಇದಕ್ಕೆಬೌದ್ಧ ಬಿಕ್ಕುಗಳೇ ಕಾರಣರಾಗಿದ್ದು ಸ್ವಸ್ಥ ಸಮಾಜನಿರ್ಮಾಣದ ನಿಟ್ಟಿನಲ್ಲಿ ಬುದ್ಧ ಸಂದೇಶಪಸರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಇದನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬೇಕಾದನೆರವು ನೀಡಲು ನಾನು ಸಿದ್ಧನಿದ್ದೇನೆ ಎಂದರು.
ಶಿಬಿರ ಆಯೋಜನೆ: ನಳಂದ ಬುದ್ಧವಿಹಾರಕೇಂದ್ರದ ಬೋಧಿ ರತ್ನ ಬಂತೇಜಿ ಮಾತನಾಡಿ, ಈಟ್ರಸ್ಟ್‌ನ ಮೂಲಕ ಅಂಬೇಡ್ಕರ್‌ರ ಆಶಯದಂತೆಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬುದ್ಧ ಧಮ್ಮಪ್ರಚಾರವನ್ನು ಸಕ್ರಿಯವಾಗಿ ನೆರವೇರಿಸಲಾಗುವುದು. ಇದಕ್ಕಾಗಿ ಶಿಬಿರಗಳ ಆಯೋಜನೆಮಾಡಲಾಗುವುದು. ಬುದ್ಧ ಧಮ್ಮದ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಅನೇಕಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆಯ ಜೈಗುರುತಂಡದ ವತಿಯಿಂದ ಬುದ್ಧ ಮತ್ತು ಅಂಬೇಡ್ಕರ್‌ಗೀತಾ ಗಾಯನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್.ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ, ಬುದ್ಧಧ್ಯಾನ ಕೇಂದ್ರದ ಬುದ್ಧರತ್ನ ಬಂತೇಜಿ, ಬೆಂಗಳೂರುಉಪಾಸಕರಾದ ವಜ್ರಪ್ಪ, ರಾವಣ, ಕಮಲ್‌ನಾಗರಾಜು, ವಡಗೆರೆದಾಸ್, ಸಂಘಸೇನಾ,ರಾಜೇಂದ್ರ ಸೇರಿದಂತೆ ಅನೇಕರು ಹಾಜರಿದ್ದರು.