ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂಬಿಜೆಪಿ ಹೈಕಮ್ಯಾಂಡ್ ನಡುವೆ ಅಧಿಕಾರಕ್ಕೆ ಬರುವ ಸಂದರ್ಭದಲ್ಲೇಆಗಿದ್ದ ಒಪ್ಪಂದದಂತೆ ಯಡಿಯೂರಪ್ಪ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಶುಕ್ರವಾರ,ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಿನ ಒಪ್ಪಂದದಂತೆ ಯಡಿಯೂರಪ್ಪ ನಡೆದುಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
75 ವರ್ಷದಾಟಿದವರುಪ್ರಮುಖಸ್ಥಾನಗಳಲ್ಲಿರಬಾರದುಎಂಬುದು ಬಿಜೆಪಿಯ ನಿಯಮ. 75ದಾಟಿದ್ದರೂ, ಬಿಎಸ್‌ವೈ ಅವರಿಗೆ ಎರಡು ವರ್ಷಗಳ ಕಾಲಮುಖ್ಯಮಂತ್ರಿಯಾಗಲು ಅವಕಾಶ ಕೊಡುವುದಾಗಿ ಹೈಕಮಾಂಡ್‌ಹೇಳಿತ್ತು. ಅಂದು ನಡೆದ ಮಾತುಕತೆಯಂತೆ ಯಡಿಯೂರಪ್ಪರಾಜೀನಾಮೆ ನೀಡಲು ಮುಂದಾಗಿದ್ದಾರೆ ಅಷ್ಟೇ ಎಂದರು.
ಸ್ವಾಮೀಜಿಗಳೇನೂ ಸೂಪರ್ ಹೈಕಮ್ಯಾಂಡ್‌ಗಳಲ್ಲ, ಸ್ವಾಮಿಗಳಾಗಲೀ, ಅಭಿಮಾನಿಗಳಾಗಲೀ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು, ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿದ ಯಡಿಯೂರಪ್ಪಅವರನ್ನು ಬಿಜೆಪಿ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆಎಂದು ತಿಳಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಮುಖ್ಯಮಂತ್ರಿ ಯಾರುಎಂಬುದು ಇನ್ನು ಎರಡು ದಿನಗಳಲ್ಲಿ ಗೊತ್ತಾಗಲಿದೆ. ಇದನ್ನು ಈಗಲೇಊಹಿಸಲು ಸಾಧ್ಯವಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕುಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.ವಿರೋಧ ಪಕ್ಷದಲ್ಲಿರುವವರುವ ಸಿದ್ಧರಾಮಯ್ಯ ಈ ರೀತಿ ಹೇಳಬಾರದು. ಅವರು ಮುಖ್ಯಮಂತ್ರಿಯಾಗಿದ್ದಾಗ, ಮುಂದಿನಬಾರಿಗೆ ದಲಿತರೊಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಿಸುವುದಾಗಿ ಹೇಳಿದ್ದರು.
ನಂತರ ಮಾತು ಬದಲಿಸಿ, ನಾನೇ ಮುಂದಿನಮುಖ್ಯಮಂತ್ರಿ ಎಂದು ಅಂಬಾರಿ ಮೇಲೆ ಕುಳಿತುಕೊಂಡು ಬಂದರು. ಮೈಸೂರಿನಲ್ಲಿ ಸೋತ ನಂತರ ಚುನಾವಣೆಗೆ ನಿಲ್ಲಲು ಹೊಸ ಕ್ಷೇತ್ರಹುಡುಕುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಟೀಕಿಸಿದರು