ಚಾಮರಾಜನಗರ: ಚಾಮರಾಜನಗರ- ರಾಮಸಮುದ್ರನಗರಾಭಿವೃದ್ಧಿ ಪ್ರಾಧಿಕಾರದ (ಚುಡಾ) ಸಾಮಾನ್ಯಸಭೆಯಲ್ಲಿ ವಸತಿ, ವಾಣಿಜ್ಯ ಹಾಗೂ ಕೈಗಾರಿಕೆ ಉದ್ದೇಶದ8 ವಿನ್ಯಾಸ ಅನುಮೋದನೆಗಳು, 1 ಭೂ ಉಪಯೋಗಬದಲಾವಣೆ ಹಾಗೂ 1 ಭೂ ಪರಿವರ್ತನೆ ವಿಷಯಗಳಿಗೆಒಪ್ಪಿಗೆ ನೀಡಲಾಯಿತು.
ಚಾಮರಾಜನಗರದ ನಗರಾಭಿವೃದ್ಧಿ ಪ್ರಾಧಿಕಾರದಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಅಧ್ಯಕ್ಷತೆಯಲ್ಲಿ ಮಂಗಳವಾರ 74ನೇ ಸಾಮಾನ್ಯ ಸಭೆ ನಡೆಯಿತು.ಪ್ರಾಧಿಕಾರದ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ ಕುಲಗಾಣಮಾತನಾಡಿ, ಪ್ರಾಧಿಕಾರದ ವ್ಯಾಪ್ತಿಗೆ ಬರುವ ಚಾಮರಾಜನಗರ, ನಗರಸಭೆ ಹಾಗೂ 7 ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಪ್ರಾಧಿಕಾರದಿಂದ ಬಿಡುಗಡೆಯಾಗದ ನಿವೇಶನಗಳನ್ನು ಖಾತೆ ಮಾಡಬಾರದೆಂದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭೂಮಿಯನ್ನು ವಿಂಗಡಿಸಿ ತುಂಡು ಭೂಮಿಗಳಾಗಿ ವಿಭಜಿಸಿ ಕೆಲವರಿಗೆ ಮಾರಾಟಮಾಡಲಾಗುತ್ತಿದೆ. ಇದರಿಂದ ಮಾರಾಟಗಾರರುಸರ್ಕಾರಕ್ಕೆ ವಂಚಿಸಿ ಯಾವುದೇ ಅಭಿವೃದ್ಧಿಯನ್ನು ಮಾಡದೆವೈಯಕ್ತಿಕ ಲಾಭಕೋಸ್ಕರ ಸುಳ್ಳು ಮಾಹಿತಿ ನೀಡುವಮೂಲಕ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಲ್ಲಿ ರಸ್ತೆಒಳಚರಂಡಿ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಉದ್ಭವವಾಗಲಿದೆ ಎಂದರು.
ನಗರಸಭಾ ವ್ಯಾಪ್ತಿಯಲ್ಲಿ ಉದ್ಯಾನವನ ಅಭಿವೃದ್ಧಿಗಮನ ಹರಿಸಬೇಕಾಗಿದ್ದು, ಹಲವಾರು ಉದ್ಯಾನವನನಿಗದಿಯಾದ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವುದು ಕೇಳಿ ಬಂದಿರುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿಉದ್ಯಾನವನಕ್ಕೆ ಮೀಸಲಾದ ಸ್ಥಳಗಳನ್ನು ಪರಿಶೀಲಿಸಿ ಅಳತೆಮಾಡುವ ಮೂಲಕ ಅದನ್ನು ಸ್ವಾಧೀನಕ್ಕೆ ಪಡೆದುಕೊಂಡುಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಉದ್ಯಾನವನಅಭಿವೃದ್ಧಿಪಡಿಸಲು ಹಸ್ತಾಂತರಿಸಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಅನ್ನಪೂರ್ಣ, ಕೂಸಣ್ಣ, ಆರ್. ರಂಗಸ್ವಾಮಿ, ಪ್ರಾಧಿಕಾರದ ಆಯುಕ್ತೆ ಡಾ.ಎಂ.ಎಸ್. ಪಂಕಜಾ, ಚಾಮರಾಜನಗರ ನಗರಸಭೆಪೌರಾಯುಕ್ತಕರಿ ಬಸವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದನಗರ ಯೋಜನಾ ಸದಸ್ಯ ಸಿ. ಲಕ್ಷಿ¾àಶ್ ಸೇರಿದಂತೆ ವಿವಿಧಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.