ಚಾಮರಾಜನಗರ:ಕೋವಿಡ್‌ನಿಂದ ಮೃತಪಟ್ಟವರ ಕುಟುಂಬ, ಸಂತ್ರಸ್ತರು ಹಾಗೂ ಸಂಕಷ್ಟದಲ್ಲಿಸಿಲುಕಿರುವ ಕುಟುಂಬಗಳನ್ನು ಭೇಟಿ ಮಾಡಿಸಾಂತ್ವನ ಹೇಳುವ ಕಾಂಗ್ರೆಸ್ ಸಹಾಯ ಹಸ್ತಕಾರ್ಯಕ್ರಮ ಜು.7 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ತಿಂಗಳ ಕಾಲ ಪ್ರತಿ ಬೂತ್ ಮಟ್ಟದಲ್ಲಿ ಕೋವಿಡ್‌ಸೋಂಕಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳ ಮಾಹಿತಿ ಸಂಗ್ರಹಿಸಬೇಕು.
ಅವರಿಗೆ ಸರ್ಕಾರದಿಂದ ಇದುವರೆಗೆ ದೊರೆತಿರುವ ಪರಿಹಾರ ಹಾಗೂಪ್ಯಾಕೇಜ್‌ಗಳ ಬಗ್ಗೆ ಮಾಹಿತಿ, ಕೋವಿಡ್‌ನಿಂದಚಿಕಿತ್ಸೆ ದೊರೆತಿರುವ ಬಗ್ಗೆ ಮಾಹಿತಿ, ಒಂದು ವೇಳೆಕುಟುಂಬದಲ್ಲಿ ಕೋವಿಡ್‌ಕಾರಣದಿಂದ ಮೃತಪಟ್ಟಿದ್ದರೆ ಅಂಥವರ ಮರಣ ಪ್ರಮಾಣ ಪತ್ರದಲ್ಲಿಕೋವಿಡ್‌ನಿಂದ ಸಾವು ಎಂದು ನಮೂದಿಸಿರುವ ನಿಖರ ಮಾಹಿತಿ ಸಂಗ್ರಹಿಸಬೇಕು.
ಆ ಕುಟುಂಬಗಳಿಗೆ ಅತ್ಮಸ್ಥೆçರ್ಯ ತುಂಬುವ ಜೊತೆಗೆ ನೆರವುನೀಡಲು ಕಾಂಗ್ರೆಸ್ ಮುಖಂಡರು ಹಾಗೂಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ವರದಿಯನ್ನು ಕೆಪಿಸಿಸಿಗೆ ನೀಡಬೇಕು ಎಂದರು.ಜಿಲ್ಲಾಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳನ್ನು ಗ್ರಾಪಂ ಉಸ್ತುವಾರಿಗಳನ್ನಾಗಿ ಮಾಡಿ, ವರದಿ ನೀಡುವ ಜೊತೆಗೆಪೂರ್ಣ ಮಾಹಿತಿಯನ್ನು ಎಐ ಸಿಸಿ ಮತ್ತು ಕೆಪಿಸಿಸಿಗೆ ಕಳುಹಿಸಿಕೊಡಲಾಗುತ್ತದೆ.
ಆ ಕುಟುಂಬಗಳಿಗೆಅಲ್ಲಿಂದ ಸಾಂತ್ವನ ಪತ್ರವು ಸಹ ಬರಲಿದೆ ಎಂದರು.ಸಭೆಯಲ್ಲಿ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಪಿ. ಮರಿ ಸ್ವಾಮಿ,ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಸ್.ಬಾಲರಾಜು, ಯುವ ಮುಖಂಡ ಗಣೇಶ ಪ್ರಸಾದ್,ಬ್ಲಾಕ್ ಅಧ್ಯಕ್ಷ ಈಶ್ವರ್ ಇತರರಿದ್ದರು.