Advertisement

ಚಾಮರಾಜನಗರ : ಮತ್ತೆ ಏರಿಕೆಯ ಹಾದಿಯತ್ತ ಕೋವಿಡ್ ಪ್ರಕರಣಗಳು

09:09 PM Nov 21, 2020 | sudhir |

ಚಾಮರಾಜನಗರ: ಇಳಿಮುಖದತ್ತ ಸಾಗುತ್ತಿದ್ದ ಜಿಲ್ಲೆಯ ಕೋವಿಡ್ ಪ್ರಕರಣಗಳು, ಕ್ರಮೇಣ ಏರಿಕೆ ಕಾಣುತ್ತಿವೆ. ಶುಕ್ರವಾರ 20 ಪ್ರಕರಣಗಳು ದೃಢಪಟ್ಟರೆ, ಶನಿವಾರ 17 ಪ್ರಕರಣಗಳು ವರದಿಯಾಗಿವೆ.

Advertisement

ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದವು. ಪ್ರತಿ ದಿನದ ಪ್ರಕರಣಗಳು ಏಕ ಅಂಕಿಗಿಳಿದಿದ್ದವು. ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿರುವಂತೆಯೇ ಈಗ ಜಿಲ್ಲೆಯಲ್ಲಿಯೂ ಪ್ರಕರಣಗಳು ಏರುಮುಖ ಕಾಣುವ ಆತಂಕ ಉಂಟಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದವು. ಆದರೆ ಎರಡು ದಿನಗಳ ಹಿಂದೆ 77 ಇದ್ದ ಸಕ್ರಿಯ ಪ್ರಕರಣಗಳು ಶನಿವಾರ 88 ಆಗಿವೆ.

ಶನಿವಾಋ 17 ಹೊಸ ಪ್ರಕರಣಗಳು ದೃಢಪಟ್ಟರೆ, 6 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 6245 ಆಗಿದ್ದು, ಇವರಲ್ಲಿ 6030 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 127 ಸೋಂಕಿತರು ಮೃತಪಟ್ಟಿದ್ಧಾರೆ. ಶನಿವಾರ 1218 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನಿಂದ ತಲಾ 6, ಕೊಳ್ಳೇಗಾಲ ತಾಲೂಕಿನಿಂದ 1, ಹನೂರು ತಾಲೂಕಿನಿಂದ 4 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ:ಶಾಲಾ ಆರಂಭಕ್ಕೆ ಕೋವಿಡ್ ಎರಡನೇ ಅಲೆಯ ಆತಂಕ : ಸಂದಿಗ್ದ ಸ್ಥಿತಿಯಲ್ಲಿ ರಾಜ್ಯ ಸರಕಾರ

ಇಂದಿನ ಪ್ರಕರಣಗಳು: 17
ಇಂದು ಗುಣಮುಖ: 06
ಒಟ್ಟು ಗುಣಮುಖ: 6030
ಇಂದಿನ ಸಾವು: 00
ಒಟ್ಟು ಸಾವು: 127
ಸಕ್ರಿಯ ಪ್ರಕರಣಗಳು: 88
ಒಟ್ಟು ಸೋಂಕಿತರು: 6245

Advertisement
Advertisement

Udayavani is now on Telegram. Click here to join our channel and stay updated with the latest news.

Next