Advertisement

ಚಾಮರಾಜನಗರ : 98 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖ: 31 ಹೊಸ ಪ್ರಕರಣ ಪತ್ತೆ

08:21 PM Sep 15, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 98 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಹೊಸದಾಗಿ 31 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

Advertisement

ಕೊಳ್ಳೇಗಾಲ ತಾಲೂಕು ಹಂಪಾಪುರದ 65 ವರ್ಷದ ವೃದ್ಧರು ಸೆ. 5ರಂದು ಹೋಂ ಐಸೋಲೇಷನ್‌ನಲ್ಲಿದ್ದರು. ಸೆ.13ರ ರಾತ್ರಿ ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಭುಜಗನಪುರ ನಿವಾಸಿ 62 ವರ್ಷದ ವೃದ್ಧ ಸೆ.14ರಂದು ಹೃದೊ್ರೀಗ ಹಾಗೂ ಲಿವರ್ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದರು. ನಂತರ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮಂಗಳವಾರ 933 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. 903 ರ ಫಲಿತಾಂಶ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ 539 ಪ್ರಕರಣಗಳು ಸಕ್ರಿಯವಾಗಿವೆ. 68 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 3107 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 2501 ಮಂದಿ ಗುಣಮುಖರಾಗಿದ್ದಾರೆ. 24 ಮಂದಿ ಐಸಿಯುನಲ್ಲಿದ್ದಾರೆ. 243 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next