Advertisement

ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನ 13 ಕೋವಿಡ್ ಪ್ರಕರಣ ದೃಢ

07:30 PM Jun 27, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ 13 ಪ್ರಕರಣಗಳು ದೃಢಪಟ್ಟಿವೆ. ವಿಶೇಷವೆಂದರೆ ಇದರಲ್ಲಿ ಬಹುತೇಕ ಪ್ರಕರಣಗಳು ಬೆಂಗಳೂರಿಗೆ ಪ್ರಯಾಣ ಮಾಡಿ ಬಂದವರದ್ದಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 33 ಮಂದಿ ಕೊರೊನಾ ಸೋಂಕಿತರಿದ್ದಾರೆ.

Advertisement

ಓರ್ವ ಗುಣಮುಖನಾಗಿದ್ದು, 32 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಓರ್ವ ರೋಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬಂದ ಫಲಿತಾಂಶದಲ್ಲಿ ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ಚಾಲಕನಿಂದ ಸಂಪರ್ಕಿತರಾದ ಮತ್ತೆ 3 ಜನರಿಗೆ ಪಾಸಿಟಿವ್ ಬಂದಿದೆ. ಅಲ್ಲದೇ, ಚಾಮರಾಜನಗರ ಪಟ್ಟಣ ಮತ್ತು ತಾಲೂಕು ಸೇರಿ ಒಟ್ಟು 8 ಜನರಿಗೆ, ಕೊಳ್ಳೇಗಾಲ ತಾಲೂಕಿನ 2 ಮಂದಿಗೆ ಸೋಂಕು ದೃಢಪಟ್ಟಿದೆ.

ಚಾಮರಾಜನಗರ ತಾಲೂಕಿನಲ್ಲಿ ಗುರುತಿಸಿರುವ 4 ಪ್ರಕರಣಗಳ ರೋಗಿಗಳು ಒಂದೇ ಕುಟುಂಬದವರಾಗಿದ್ದು, ಮೂಲತಃ ಯಳಂದೂರು ತಾಲೂಕಿನ ಗೌಡಹಳ್ಳಿಯವರು. ಆದರೆ ಅವರು ಬಂದಿಗೌಡನಹಳ್ಳಿಯ ಸಂಬಂಧಿಕರ ಮನೆಯಲ್ಲಿದ್ದುದರಿಂದ ಅವರನ್ನು ಚಾಮರಾಜನಗರ ತಾಲೂಕಿನವರೆಂದು ಪರಿಗಣಿಸಲಾಗಿದೆ.

ನಿಗಾವಣೆಯಲ್ಲಿರುವ ಒಟ್ಟು ಪ್ರಾಥಮಿಕ ಸಂಪರ್ಕಿತರ ಸಂಖ್ಯೆ 186 ಆಗಿದ್ದು, ಶನಿವಾರ 56 ಮಂದಿಯನ್ನು ನಿಗಾವಣೆಯಲ್ಲಿರಿಸಲಾಗಿದೆ. ಒಟ್ಟು 206 ಜನರು ನಿಗಾವಣೆಯಲ್ಲಿರುವ ದ್ವಿತೀಯ ಸಂಪರ್ಕಿತರಾಗಿದ್ದಾರೆ. ಶನಿವಾರ 34 ಜನರನ್ನು ನಿಗಾವಣೆಯಲ್ಲಿರಿಸಲಾಗಿದೆ. ಇದುವರೆಗೆ ಒಟ್ಟಾರೆ 5,158 ಜನರನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 5124 ಪ್ರಕರಣಗಳು ನೆಗೆಟಿವ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next